
ಬೆಳಗಾವಿ: ಐ ಐ ಎಫ್ ಎಲ್ ಫೈನಾನ್ಸ್ ಲಿಮಿಟೆಡ್ ಸಂಸ್ಥಾಪಕರಾದ ನಿರ್ಮಲ ಜೈನ್ ಅವರ ಹುಟ್ಟುಹಬ್ಬದ ಪ್ರಯುಕ್ತ, ಗುರುವಾರ ಬೆಳಗಾವಿಯ ಬಸವನ ಕುಡುಚಿಯಲ್ಲಿರುವ ನಾಗನೂರಿನ ಶ್ರೀ ಶಿವಬಸವೇಶ್ವರ ಟ್ರಸ್ಟಿನ ಶ್ರೀಮತಿ ಚಿನ್ನಮ್ಮ ಬಿ. ಹಿರೇಮಠ ವೃದ್ಧಾಶ್ರಮದಲ್ಲಿ ಹೃದಯಂಗಮವಾದ ಸೇವಾ ಕಾರ್ಯಕ್ರಮ ನಡೆಸಲಾಯಿತು.

ಐ ಐ ಎಫ್ ಎಲ್ ಫೈನಾನ್ಸ್ ಲಿಮಿಟೆಡ್ ಬೆಳಗಾವಿ ಬ್ರ್ಯಾಂಚ್‌ನ ಸಿಬ್ಬಂದಿಗಳು—ಧನಪಾಲ್ ಸಂತಿಬಸ್ತವಾಡ (ಬ್ರ್ಯಾಂಚ್ ಮ್ಯಾನೇಜರ್), ಜಿ.ಎ. ಬಸವರಾಜ್ ಕುಣಿಕಿಕೊಪ್ಪ, ಜಿ.ಎ. ನಾಗರಾಜ್ ಹಣ್ಣಿಕೇರಿ ಹಾಗೂ ಟೆರಿಟರಿ ಮ್ಯಾನೇಜರ್ ದುಂಡಪ್ಪ ಹುದಲಿ—ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಹಣ್ಣು, ಬಿಸ್ಕತ್ ಮತ್ತು ಸಿಹಿಯನ್ನು ಹಂಚುವ ಮೂಲಕ ಸಮಾಜ ಸೇವೆಯ ಮೌಲ್ಯವನ್ನು ಪ್ರತಿಬಿಂಬಿಸಿದರು.

ಕಾರ್ಯಕ್ರಮದಲ್ಲಿ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ಆರ್ ಜೆ ಚೇತನ ಅವರು ದಾನಿಗಳ ಮಾನವೀಯ ಮನೋಭಾವವನ್ನು ಶ್ಲಾಘಿಸಿ, ಸಮಾಜದ ಹಿತಕ್ಕಾಗಿ ಇಂತಹ ಸೇವಾ ಚಟುವಟಿಕೆಗಳು ಸ್ಪೂರ್ತಿದಾಯಕ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಎಸ್ ಯಗಟ್ಟಿಯ ಪ್ರಾಚಾರ್ಯರಾದ ಕಿರಣ್ ಚೌಗಲಾ ಹಾಗೂ ವೃದ್ಧಾಶ್ರಮದ ಅನೇಕ ವಯೋವೃದ್ಧರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143





















