ಚಕ್ರವರ್ತಿ ಸೂಲಿಬೆಲೆ ಜಿಯೊ ಸಿಮ್ ಪರಿಚಯವಾಗಿ ಎಥೇಚ್ಚವಾಗಿ ಇಂಟರ್‌ನೆಟ್ ಸಿಗುತ್ತಿದ್ದ ಕಾಲದಲ್ಲಿ ಖ್ಯಾತಿಯನ್ನು ಪಡೆದ ಭಾಷಣಕಾರ. ಮೊದಲಿಗೆ ತಮ್ಮ ಭಾಷಣಗಳಿಂದ ಜನಮನ್ನಣೆ ಗಳಿಸಿದ ಚಕ್ರವರ್ತಿ ಸೂಲಿಬೆಲೆ, ಯಾವಾಗ ವಿದ್ಯಾವಂತ ಫೇಸ್‌ಬುಕ್ ಬಳಕೆದಾರರ ನ್ಯೂಸ್ ಫೀಡ್‌ಗೆ ತಲುಪಿದರೋ ಅಂದಿನಿಂದ ಟೀಕೆಗೂ ಒಳಗಾದರು.
ತಮ್ಮ ಹಸಿ – ಹುಸಿ ಭಾಷಣಗಳಿಂದ ಟ್ರೋಲ್ ಗೂ ಒಳಗಾದರು.
“ಮೋದಿ ದೇಶದ ಎಲ್ಲ ಹಾಸ್ಪಿಟಲ್‌ಗಳನ್ನು ತಮ್ಮ ಲ್ಯಾಪ್‌ಟಾಪ್‌ಗೆ ಕನೆಕ್ಟ್ ಮಾಡಿಕೊಂಡು ನೋಡ್ತಾ ಇದ್ದಾರೆ ಸ್ನೇಹಿತರೇ” ಎಂಬ ಹೇಳಿಕೆ ನೀಡಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಸೂಲಿಬೆಲೆಯವರು, ಇದೀಗ ಅಂತಹದ್ದೇ ಮತ್ತೊಂದು ಸತ್ಯಕ್ಕೆ ದೂರವಾದ ಹೇಳಿಕೆ ನೀಡಿ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.
ಪ್ರಸ್ತುತ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಆಗುತ್ತಿರುವ ಎಐ ಬಳಕೆ ಮಾಡಿಕೊಂಡು ಕೆಲಸ ಮಾಡಬಹುದು ಎಂಬುದನ್ನು ತಿಳಿಸಲು ಹೋಗಿ ಎಡವಿರುವ ಚಕ್ರವರ್ತಿ ಸೂಲಿಬೆಲೆ ಆಡಿಕೊಂಡು ನಗುವವರ ಮುಂದೆ, ನಗೆಪಾಟಲಿಗೀಡಾಗಿದ್ದಾರೆ. ಮುಂದಿನ ದಿನಗಳಲ್ಲಿ ಎಐ ಇದ್ದರೆ ಎಂಎಲ್‌ಎ ಹಾಗೂ ಎಂಪಿಗಳಿಗೆ ಕೆಲಸವೇ ಇರುವುದಿಲ್ಲ ಎಂದಿರುವ ಚಕ್ರವರ್ತಿ ಸೂಲಿಬೆಲೆ ಪರೋಕ್ಷವಾಗಿ ಪ್ರಜಾಪ್ರಭುತ್ವದ ಕಾಲೆಳೆದಿದ್ದಾರೆ.
“ಎಐ ಇದ್ದರೆ ಸಾಕು ಅದರ ವ್ಯವಸ್ಥೆಯ ಮೂಲಕವೇ ಯಾವ ಊರುಗಳಿಗೆ ಆಸ್ಪತ್ರೆಯ ಅವಶ್ಯಕತೆ ಇದೆ ಎಂಬುದನ್ನು ಪತ್ತೆ ಹಚ್ಚಬಹುದು, ಈ ಊರಿಗೆ ಆಸ್ಪತ್ರೆ ಮಾಡಲು ಹೊರಟರೆ ಆ ಎಐ ವ್ಯವಸ್ಥೆ ಈ ಊರಿನಲ್ಲಿ ಈಗಾಗಲೇ ಆಸ್ಪತ್ರೆ ಇದೆ ಆಸ್ಪತ್ರೆಯಿಲ್ಲದ ಇಂತಹ ಊರಿನಲ್ಲಿ ಆಸ್ಪತ್ರೆ ನಿರ್ಮಿಸಿ ಎಂದು ಹೇಳಲಿದೆ” ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಇದರ ವಿರುದ್ಧ ಹಲವಾರು ನೆಟ್ಟಿಗರು ಮಾತನಾಡಿದ್ದು, ಎಐ ಏನು ಎಂಬ ಅರಿವೇ ಇಲ್ಲದವರೆಲ್ಲ ಮಾತನಾಡಿದರೆ ಹೀಗೆ ಆಗುತ್ತದೆ ಎಂದು ಸೂಲಿಬೆಲೆ ಭಾಷಣವನ್ನು ಟೀಕಿಸಿದ್ದಾರೆ. ಎಐ ಬಗ್ಗೆ ಮಾತನಾಡಬೇಕಾದರೆ ಅದರ ತಂತ್ರಜ್ಞಾನದ ಹಾಗೂ ಬ್ಯಾಕ್‌ಎಂಡ್‌ನಲ್ಲಿ ನಡೆಯುವ ಕೆಲಸಗಳ ಅರಿವುಳ್ಳವರು ಮಾತ್ರ ಸ್ಪಷ್ಟವಾಗಿ ಅದನ್ನು ಹೇಳಬಲ್ಲರು, ಸೂಲಿಬೆಲೆ ಬಲ್ಲವರಂತೆ ಸುಖಾಸುಮ್ಮನೆ ಏನೇನೋ ಹೇಳಿದ್ದಾರೆ ಹೆಂಗ್ ಪುಂಗ್ಲಿ ಎಂದು ಕಾಲೆಳೆದಿದ್ದಾರೆ.
ಅದಲ್ಲದೇ ಸೂಲಿಬೆಲೆ ಅವರು ಹೇಳಿರುವ ಕೆಲಸ ಮಾಡಲು ಎಐನ ಅಗತ್ಯವೇ ಬೇಕಿಲ್ಲ. ಯಾಕೆಂದರೆ, ಯಾವ ಊರಿನಲ್ಲಿ ಆಸ್ಪತ್ರೆಯಿಲ್ಲ ಎಂಬುದನ್ನು ಸರ್ಕಾರಿ ಮೂಲಗಳ ಮೂಲಕವೇ ವೇಗವಾಗಿ ತಿಳಿದುಕೊಳ್ಳಬಹುದು. ಇಂತಹ ಸುಲಭ ಕೆಲಸಕ್ಕೆ ಎಐ ಬಳಸುವುದನ್ನು ಬೃಹತ್ ಸಾಧನೆ ಎಂದು ಬಿಂಬಿಸುವುದು ಕಾಮಿಡಿಯೇ ಸರಿ ಎಂದು ಇನ್ನೂ ಕೆಲವರು ಟ್ರೋಲ್ ಮಾಡಿದ್ದಾರೆ.
https://x.com/rajanna_rupesh/status/1902744544518771164?ref_src=twsrc%5Etfw%7Ctwcamp%5Etweetembed%7Ctwterm%5E1902744544518771164%7Ctwgr%5Ec4af695c1b100f31a060c048fb8859ef38dd030d%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fkannada%2Fkarunadasuddi-epaper-dh947a06c53dbd4f42b6154dad4dfa180c%2Fmattesaddumaadtidehengpunglitroleaibaggegnaanavillademaatanaadinagepaataligidaadhachakravartisulibele-newsid-n656828732