ಮಂಗಳೂರು: ಚುಟುಕು ಸಾಹಿತ್ಯವು ದಿಢೀರ್ ಬಳಸುವ ಆಹಾರದಂತೆ ಮತ್ತು ಈ ಪ್ರಕಾರವು ಹಿರಿದಾದ ಕಥೆ ಕಾದಂಬರಿಯನ್ನು ಸಹ ಪ್ರತಿನಿಧಿಸುವ ತಾಕತ್ತು ಹೊಂದಿದೆ. ಸಮಯದ ಕೊರತೆ, ಹೆಚ್ಚಾದ ಚಟುವಟಿಕೆ ತುಂಬಿದ ಜನಜೀವನದಲ್ಲಿ ಕಡಿಮೆ ಪದಗಳ ಹೆಚ್ಚು ಅರ್ಥವತ್ತಾದ ಸಾಹಿತ್ಯಗಳು ಜನಪ್ರೀತಿ ಗಳಿಸುವಲ್ಲಿ ಸೋಲಲಾರವು ಎಂದು ಇತ್ತೀಚಿಗೆ ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ನಡೆದ 25 ನೇ ಚುಟುಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಕಣಚೂರು ಹಾಗೂ ಮಂಗಳಾ ಆಸ್ಪತ್ರೆಗಳ ವೈದ್ಯ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಮಾತನಾಡಿದರು.
ಸರ್ವರಿಗೂ ನೀಡಿದ ಸಾಧಕ ಸನ್ಮಾನ ಸಹಿತವಾಗಿ 108 ಕವಿಗಳನ್ನು ಒಳಗೊಂಡ ಸಮ್ಮೇಳನದಲ್ಲಿ ತಮ್ಮ ಅಧ್ಯಕ್ಷ ಭಾಷಣದ ವೇಳೆ ಒಂದೇ ವಿಷಯದ ಮೇಲೆ ತಾವೇ ಬರೆದ ಚುಟುಕು, ಹನಿಗವನ, ಟಂಕ, ಹಾಯ್ಕು, ತನಗ ಇತ್ಯಾದಿಗಳನ್ನು ಹಾಗೂ ದಿನಕರ ದೇಸಾಯಿ, ದುಂಡಿರಾಜ್, ಡಿ ವಿ ಜಿ ಬಸವಣ್ಣ ಸಹಿತ ಹಲವರ ಬರಹಗಳನ್ನು ಸಹ ಅವರು ಉದಾಹರಿಸಿದರು.
ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕಧ್ಯಕ್ಷ ಡಾ ಎಮ್ ಜಿ ಆರ್ ಅರಸ್, ಸಂಚಾಲಕ ಕಾಸರಗೋಡು ಜಿಲ್ಲಾಧ್ಯಕ್ಷ ಹಾಗೂ ಸಂಚಾಲಕರಾದ ಶಿವರಾಮ ಕಾಸರಗೋಡು, ಕ ಸಾ ಪ ಕಾಸರಗೋಡು ಅಧ್ಯಕ್ಷ ಡಾ ಬೆಂಗಳೂರಿನ ಡಾ ಕೆ ಸಿ ಬಲ್ಲಾಳ್ ರಾಧಾಕೃಷ್ಣ ಉಳಿಯತ್ತಡ್ಕ ಹಾಗೂ ಎಲ್ಲಾ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಇದೇ ವೇಳೆ ಡಾ. ಎಂ. ಜಿ. ಆರ್. ಅರಸ್ ಸಂಸ್ಥಾಪಕರು – ಪ್ರಧಾನ ಸಂಚಾಲಕರು – ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ,ಮೈಸೂರು ಇವರಿಗೆ ರಜತ ಮಹೋತ್ಸವ ವರ್ಷದ ಜೀವಮಾನದ ಸಾಧನಾ ಪ್ರಶಸ್ತಿ – 2025 ಪುರಸ್ಕಾರ ಮಾಡಲಾಯಿತು
ಹಾಗೆಯೇ ಶ್ರೀ ಸಿ. ಎಂ. ತಿಮ್ಮಯ್ಯ ಸಂಸ್ಥಾಪಕರು – ಪ್ರಧಾನ ಕಾರ್ಯದರ್ಶಿ ವಿ. ಕೆ. ಎಂ. ಕಲಾವಿದರು(ರಿ ),ಬೆಂಗಳೂರು ಮಾಜಿ ಸದಸ್ಯರು, ಕರ್ನಾಟಕ ನಾಟಕ ಅಕಾಡೆಮಿ ಶ್ರೀ ಎಲ್. ಎಸ್. ಶಾಸ್ತ್ರಿ ಹಿರಿಯ ಪತ್ರಕರ್ತರು, ಬರಹಗಾರರು,ಮಾಧ್ಯಮ ಸಾಹಿತ್ಯ – ಸಾಂಸ್ಕೃತಿಕ ರಾಯಭಾರಿಗಳು, ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಬೆಳಗಾವಿ ಜಿಲ್ಲೆ ಇವರನ್ನೂ ಪುರಸ್ಕರಿಸಲಾಯಿತು
ಪರಿಷತ್ – 25 – ರಜತ ಮಹೋತ್ಸವ ವರ್ಷದ ಚಂದ್ರಗಿರಿ – ಮಹಾಜನ ಪ್ರಶಸ್ತಿ – 2025 ಪುರಸ್ಕೃತ ನೆಲೆಯಲ್ಲಿ ಡಾ. ಕೆ. ಸಿ. ಬಲ್ಲಾಳ್ ಅಧ್ಯಕ್ಷರು, ದಕ್ಷಿಣ ಕನ್ನಡಿಗರ ಸಂಘ (ರಿ ),ಬೆಂಗಳೂರು ಶ್ರೀ ದಯಾಸಾಗರ ಚೌಟ ಮಾಧ್ಯಮ – ಸಾಹಿತ್ಯ – ಸಾಂಸ್ಕೃತಿಕ ರಾಯಭಾರಿ ಮುಂಬಯಿ ಮಹಾರಾಷ್ಟ್ರ ರಾಜ್ಯ ) ಶ್ರೀ ಅಶೋಕ ಜಿ. ಮಳಗಲಿ ಕವಿ, ಸಾಹಿತ್ಯ- ಸಾಂಸ್ಕೃತಿಕ ರಾಯಭಾರಿ ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಕರಣ ಸಾಹಿತ್ಯ ಪರಿಷತ್,ಬೆಳಗಾವಿ ಜಿಲ್ಲೆ ಶ್ರೀ ಆನಂದ ಪುರಾಣಿಕ ಕವಿ, ಸಾಹಿತಿ, (ಖ್ಯಾತ ಕಾದಂಬರಿಕಾರ ಕೃಷ್ಣ ಮೂರ್ತಿ ಪುರಾಣಿಕ ಅವರ ಸುಪುತ್ರ ) ಬೆಳಗಾವಿ ಜಿಲ್ಲೆ ಚಂದ್ರಶೇಖರ ನವಲಗುಂದ ಸಂಚಾಲಕರು ನಿವೇದಾರ್ಪಣ ಅಕಾಡೆಮಿ ಆಫ್ ಮ್ಯೂಸಿಕ್, ಬೆಳಗಾವಿ ಜಿಲ್ಲೆ ಅಪ್ಪಾ ಸಾಹೇಬ ಅಲಿಬಾದಿ ಕವಿ, ಸಾಹಿತಿ, ಸಾಹಿತ್ಯ, ಸಾಂಸ್ಕೃತಿಕ ರಾಯಭಾರಿ, ಅಥಣಿ, ಬೆಳಗಾವಿ ಜಿಲ್ಲೆ ರವಿ ಕೋಟಾರಗಸ್ತಿ ಸಹಾಯಕ ಆಯುಕ್ತರು (ನಿ), ಧರ್ಮದತ್ತಿ ಇಲಾಖೆ- ಬೆಳಗಾವಿ ಜಿಲ್ಲೆ ಆನಂದ ರೈ ಅಡ್ಕಸ್ಥಳ ಹಿರಿಯ ಕವಿ / ಸಾಹಿತ್ಯ ರಾಯಭಾರಿ, ಲೇಖಕರು ಸಿ.ಏಚ್. ಸುರೇಶ್ ಉದುಮ ಕಾಸರಗೋಡು ಶ್ರೀ ಬಾಬು ಪೂಜಾರಿ ಮೊಕ್ತೇಸರರು ಕೊರಗಜ್ಜ ಸನ್ನಿಧಿ, ಜೆ. ಪಿ.ನಗರ, ಕಾಸರಗೋಡು ಮತ್ತಿತರರ ಗಣ್ಯರನ್ನೂ ಗೌರವಿಸಲಾಯಿತು.
ಹಿರಿಯ ರಂಗಭೂಮಿ ಕಲಾವಿದರಿಗೆ, ಸಂಗೀತದಲ್ಲಿ ಸಾಧನೆ ಮಾಡಿರುವವರಿಗೆ ಏರ್ಪಡಿಸಿದ ವಿಶ್ವ ರಂಗಭೂಮಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶ್ರೀ ಡಿ. ವೆಂಕಟರಮಣ(ಅಪ್ಪಾಜೀ) ರಂಗಭೂಮಿ ಕಲಾವಿದರು ಬೆಂಗಳೂರು ಕೆ. ಲಕ್ಷ್ಮಣ ಸುವರ್ಣ ಬೆಂಗಳೂರು ಸಂಗೀತ ಕ್ಷೇತ್ರ ಶ್ರೀಮತಿ ಕಲ್ಯಾಣಿ ಪ್ರದೀಪ್ ಬೆಂಗಳೂರು ರಂಗಭೂಮಿ ಕಲಾವಿದರು ಇವರನ್ನು ಸಹ ಗೌರವಿಸಲಾಯಿತು
ಕೊನೆಗೆ ಅದೇ ಕಲಾವಿದರಿಂದ ಅಂಗುಲಿ ಮಾಲಾ ನಾಟಕ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುವು
ಡಾ ಸುರೇಶ ನೆಗಳಗುಳಿ,
ಮಂಗಳೂರು