ನಿಪ್ಪಾಣಿ: ತಾಲ್ಲೂಕಿನ ಬಾರವಾಡ ಗ್ರಾಮದ ಬಾರವಾಡ- ಕಾರದಗಾ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ರಂಗಪಂಚಮಿ ದಿನಂದಂದು ಎಲ್ಲರಂತೆ ಬಣ್ಣದ ಹಬ್ಬ ಆಚರಿಸುವಾಗ ಬಾಲಕ ಪ್ರಜ್ವಲದ ಬಾಳಾಸಾಹೇಬ ಪಾಟೀಲ (9) ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟ ದುರ್ಘಟನೆ ನಡೆದಿದೆ.
ಮಾಂಗೂರದಿಂದ ಕಾರದಗಾ ಗ್ರಾಮಕ್ಕೆ ಎರಡು ಟ್ರಾಲಿ ಹೊಂದಿದ್ದ ಟ್ರ್ಯಾಕ್ಟರ್ ತೆರಳುತ್ತಿರುವ ಸಂದರ್ಭದಲ್ಲಿ, ಟ್ರ್ಯಾಕ್ಟರ್ ಟ್ರಾಲಿಯ ಹಿಂದಿನ ಚಕ್ರಕ್ಕೆ ಬಾಲಕನ ತಲೆ ಸಿಲುಕಿ ಈ ಒಂದು ಅವಘಡ ಸಂಭವಿಸಿದೆ.
ಚಿಕ್ಕೋಡಿಯ ಸಿಪಿಐ ವಿಶ್ವನಾಥ ಚೌಗುಲೆ ಮತ್ತು ಸದಲಗಾ ಪೊಲೀಸ್ ಠಾಣೆಯ ಪಿಎಸ್‌ಐ ಶಿವಕುಮಾರ ಬಿರಾದಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.