ಯಮಕನಮರಡಿ: ನಾಗನೂರ ಕೆ ಎಂ ಶ್ರೀ ಬಿ. ಎ. ಪಾಟೀಲ(ಅ) ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಪಿ.ಐ ಜಾವೀದ ಮುಶಾಪುರಿ ಮಾತನಾಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಮಹತ್ವದ ಹಂತವಾಗಿದ್ದು ಕೆಲವೇ ದಿನಗಳಿರುವುದರಿಂದ ತಾವು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸತತ ಅಭ್ಯಾಸದಿಂದ ಹೆಚ್ಚಿನ ವಿಷಯವನ್ನು ಮನನ ಮಾಡಿಕೊಂಡು ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ಬರೆಯಬೇಕು ಎಂದರು.
ಈಗಿನ ಯುವಕರು ಸಾರಾಯಿ, ಸಿಗರೇಟ್, ಡಿ ಜೆ, ಮೊಬೈಲ್, ಸೇರಿದಂತೆ ದುಷ್ಟ ಚಟಕ್ಕೆ ಬಲಿಯಾಗದೆ ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು. ನನ್ನ ಪೊಲೀಸ್ ಠಾಣೆಯ ವ್ಯಾಪ್ತಿಯ ಗ್ರಾಮದಲ್ಲಿ ಯಾವುದೇ ವಿದ್ಯಾರ್ಥಿ ಅತ್ಯುತ್ತಮವಾಗಿ ವಿದ್ಯಾಭ್ಯಾಸ ಮಾಡಿ ಕೆ ಪಿ ಎಸ್ ಸಿ ಟಾಪ್ 50ರಲ್ಲಿ ಪಾಸ್ ಆದರೆ ಅಂತಹ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿ ಘೋಷಿಸಿದರು. ಅದೇ ರೀತಿ ನಮ್ಮ ಠಾಣೆಯ ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿ ಜಾತ್ರೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಡಿ ಜೆ ಸೇರಿದಂತೆ ದುಷ್ಟ ಚಟಗಳ ಮುಕ್ತ ಗ್ರಾಮಗಳು ಆಗಬೇಕೆಂದರು.
ಏಕ್ವಸ್ ಫೌಂಡೇಶನ್ ಸಿಬ್ಬಂದಿ ಕುಲಕರ್ಣಿ ಅವರ ಮಾತನಾಡಿ, ಪರೀಕ್ಷೆಯನ್ನು ಯಾವುದೇ ಅಂಜಿಕೆ ಇಲ್ಲದೆ ಎದುರಿಸಬೇಕು. ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೇ ಎಂದರು.
ಹುಕ್ಕೇರಿ ತಾಲೂಕ ಶಿಕ್ಷಣ ಅಧಿಕಾರಿ ಪ್ರಭಾವತಿ ಪಾಟೀಲ್ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಅವರ ತಂದೆ ತಾಯಿಯವರ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದುಕೊಂಡರು. ನಂತರ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತ್ಕರಿಸಿ ಅಭಿನಂದನೆ ಸಲ್ಲಿಸಲಾಯಿತು. ನಂತರ ಗಣ್ಯರಿಗೆ ಸತ್ಕರಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಗುತ್ತಿಗೆದಾರರಾದ ಪ್ರಕಾಶ್ ದೇಸಾಯಿ ವಹಿಸಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ Z. M. ಮುಲ್ಲಾ ಸ್ವಾಗತಿಸಿದರು.
ಅತಿಥಿ ಶಿಕ್ಷಕಿ ತೇಜಸ್ವಿನಿ ಗಸ್ತಿ ನಿರೂಪಿಸಿದಳು.
ಪ್ರಧಾನ ಗುರುಗಳು ಜೆ ಐ ಸನದಿ, ಬಸವರಾಜ್ ದೇಸಾಯಿ, ವಿರುಪಾಕ್ಷಿ ಚೌಗಲಾ, ಮಲ್ಲಿಕಸಾಬ್ ಲೋಕಾಪೂರೆ, ಶಶಿ ಸ್ವಾನ್ನವರ,ಕಾಶಪ್ಪ ಅಗಸರ, ಸೇರಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸಹ ಶಿಕ್ಷಕರು, ಸೇರಿದಂತೆ ಎಸ್‌ಡಿಎಂಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಪಾಲಕರು ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ವರದಿ:ಕಲ್ಲಪ್ಪ ಪಾಮನಾಯಿಕ