ಬೆಳಗಾವಿ: ನಗರದ ಚೆನ್ನಮ್ಮ ವೃತ್ತದ ಸಮೀಪ ಇರುವ ಕನ್ನಡ ಸಾಹಿತ್ಯಭವನದಲ್ಲಿ ಪೃಥ್ವಿ ಫೌಂಡೇಶನ್ ವತಿಯಿಂದ “ಜಾನಪದ ಸಂಭ್ರಮ” ಕಾರ್ಯಕ್ರಮ ಇದೆ ಶನಿವಾರ, ದಿನಾಂಕ 18.01.2025 ರಂದು ಮಧ್ಯಾಹ್ನ 03 ಗಂಟೆಗೆ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಜಾನಪದ ಹಾಡುಗಳು ಜಾನಪದ ನೃತ್ಯಗಳು ಜರಗಲಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾಕ್ಟರ್ ಹೇಮಾವತಿ ಸೋನೂಳ್ಳಿ ಅಧ್ಯಕ್ಷರು ಪೃಥ್ವಿ ಫೌಂಡೇಶನ್ ಅವರು ವಹಿಸಲಿದ್ದಾರೆ.
ಜನಪದ ಸೋಗಡು, ಈ ವಿಷಯದ ಕುರಿತು ಹಮೀದಾ ಬೇಗಂ ದೇಸಾಯಿ ಅವರು ಉಪನ್ಯಾಸ ನೀಡಲಿದ್ದಾರೆ. ಜೊತೆಗೆ ಜಯಶೀಲಾ ಬ್ಯಾಕೋಡ, ಗಿರಿಜಾ ಮುಳುಗುಂದ, ಡಾ. ಗುರುಗೌಡ ಪಾಟೀಲ, ಬಾಳಗೌಡ ದೊಡಬಂಗಿಅವರಿಗೆ ಅನುಪಮಾ ಸೇವಾ ರತ್ನ ಪ್ರಶಸ್ತಿ ನಿಡಲಿದ್ದು, ಡಾ. ಬಸನಗೌಡ ಪಾಟೀಲ್ ಅವರಿಗೆ ಅನುಪಮ ಜ್ಞಾನ ರತ್ನ ಪ್ರಶಸ್ತಿ ನೀಡಿಗೌರವಿಸಲಾಗುವುದು ಎಂದು ಕಾರ್ಯದರ್ಶಿಗಳು ಶೖಲಜಾ ಹಿರೇಮಠ ಪೃಥ್ವಿ ಫೌಂಡೇಶನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.