ಹುಕ್ಕೇರಿ: ತಾಲೂಕಿನ ಹಿಡಕಲ್ ಡ್ಯಾಂ ಸಮೀಪದ ಶಿಂದಿಹಟ್ಟಿ ಗ್ರಾಮದ ಭಗವಾನ ಶ್ರೀ 1008 ಮುನಿಸುವೃತನಾಥ ತೀರ್ಥಂಕರರ ಶನಿ ಅಮವಾಸ್ಯೆ ನಿಮಿತ್ಯ ಶನಿವಾರ 29.03.2025 ರಂದು ಬೆಳಿಗ್ಗೆ 10 ಗಂಟೆಗೆ ಮಹಾಮಸ್ತಕಾಭಿಷೇಕ ಮತ್ತು ಮಹಾಶಾಂತಿ ಮಂತ್ರ ಪಠಣ ಶ್ರೀ ಜ್ವಾಲಾಮಾಲಿನಿ ದೇವಿ ಮತ್ತು ಶ್ರೀ ಪದ್ಮಾವತಿ ಅಮ್ಮನವರ ಪೂಜಾ, ಶೃಂಗಾರ ಮತ್ತು ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ವಿಧಾನಾಚಾರ್ಯ ಶ್ರೀ ರಣಧೀರ ಉಪಾಧ್ಯೆ ಯವರು ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಿದರು. ಶಿಂದಿಹಟ್ಟಿ ಗ್ರಾಮದ ವಿರಸೇವಾದಳ, ವೀರಮಹಿಳಾ ಮಂಡಳ, ಶಿಂದಿಹಟ್ಟಿ ಸುತ್ತಮುತ್ತಲಿನ ಗ್ರಾಮಗಳ ಸರ್ವ ಜೈನ ಬಾಂದವರು ಸಮಸ್ತ ಶ್ರಾವಕ ಶ್ರಾವಕಿಯರು ಇದರ ಸಂಪೂರ್ಣ ಪುಣ್ಯ ಪ್ರಾಪ್ತಿ ಮಾಡಿಕೊಂಡರು.