Live Stream

[ytplayer id=’22727′]

| Latest Version 8.0.1 |

State News

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಒಳಗೊಂಡು ಮೂವರಿಗೆ ಗೌರವ ಡಾಕ್ಟರೇಟ್ ಪದವಿ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಒಳಗೊಂಡು ಮೂವರಿಗೆ ಗೌರವ ಡಾಕ್ಟರೇಟ್ ಪದವಿ

 

ಯಮಕನಮರಡಿ: ಸರಳ ಸಜ್ಜನಿಕೆಯ ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಎಲ್. ಜಾರಕಿಹೊಳಿ ಸೇರಿದಂತೆ ಶ್ರೇಷ್ಠ ವ್ಯಕ್ತಿತ್ವ ಹೊಂದಿರುವ ಮೂವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ‌ನೀಡಲಿದೆ.

ಐಡಿಯಲ್ ಎಜ್ಯುಕೇಷನ್ ಸೊಸೈಟಿ ಛೇರ್ಮನ್ ಸಿ.ಎಂ. ಇರ್ಪಾನುಲ್ಲಾ ಷರೀಫ್ ಮತ್ತು ಕಲಬುರಗಿಯ ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಚೇರ್ಮನ್ ಡಾ. ದಾಕ್ಷಯಿಣಿ ಎಸ್. ಅಪ್ಪ ಇವರಿಗೆ ಕೂಡ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಲಿದೆ.

ಈ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ತನ್ನ 20ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರಧಾನ ಮಾಡಲಿದೆ.

ಈ ಮೂವರು ಗಣ್ಯರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ 20ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಲು ಕರ್ನಾಟಕ ರಾಜ್ಯದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳಾದ ಥಾವರ್ ಚಂದ್ ಗೆಹಲೋಥ್ ಅವರು ಒಪ್ಪಿಗೆ ನೀಡಿದ್ದು, ರಾಜ್ಯಪಾಲರ ಅಧೀನ‌ ಕಾರ್ಯದರ್ಶಿ ಬಿ.ಬಿ. ಪ್ರಶಾಂತ್ ಕುಮಾರ್ ಅವರು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗೆ ದಿನಾಂಕ:13-03-2025 ರಂದು ಪತ್ರ ಬರೆದು ತಿಳಿಸಿದ್ದಾರೆ.

ವರದಿ:ಕಲ್ಲಪ್ಪ ಪಾಮನಾಯಿಕ್

 

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";