ಯಮಕನಮರಡಿ: ಸಮೀಪದ ಬಿದ್ರೆವಾಡಿ ಗ್ರಾಮದ ರೈತರ ಜಮೀನಿನಲ್ಲಿ ವಾಲಿರುವ ವಿದ್ಯುತ್ ಕಂಬಗಳು.
ಹುಕ್ಕೇರಿ ತಾಲ್ಲೂಕಿನಲ್ಲಿ ಬಿದ್ರೆವಾಡಿ ಗ್ರಾಮದಲ್ಲಿ ವಿದ್ಯುತ್‌ಗೆ ಸಂಬಂಧಿಸಿದಂತೆ, ಗ್ರಾಮದ ಬಸವಣ್ಣ ಗಸ್ತಿ ಹಾಗೂ ದುಂಡಪ್ಪ ಗಸ್ತಿ( ದೇವರ ಜಮೀನು) ದಲ್ಲಿ ಅಳವಡಿಸಿದ ಹಲವು ಕಂಬಗಳೂ ಹೀಗೆ ಅಪಾಯಕಾರಿ ಆಗಿ ವಾಲಿಕೊಂಡ ಕಂಬಗಳು, ಜೋತುಬಿದ್ದ ವಿದ್ಯುತ್ ತಂತಿಗಳೇ ಕಾಣಸಿಗುತ್ತವೆ. ಇದರಿಂದ ರೈತರು ಜೀವ ಭಯದಲ್ಲೇ ಕೆಲಸ ಮಾಡುವಂತಾಗಿದೆ.
ಭೂಮಿಯಲ್ಲಿ ಸರಿಯಾಗಿ ಆಳ ತೋಡದೇ ಜಮೀನಿನ ಮೇಲ್ಮಟ್ಟದಲ್ಲಿ ವಿದ್ಯುತ್ ಕಂಬಗಳನ್ನು ನಿಲ್ಲಿಸುತ್ತಿರುವುದರಿಂದ ಈ ಸಮಸ್ಯೆ ತಲೆದೋರಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರೈತರು ದುಂಡಪ್ಪ ಗಸ್ತಿ ಈ ವಿದ್ಯುತ್ ತಂತಿಗಳು ನಮ್ಮ ಕೈಗೆ ಹತ್ತುತ್ತವೆ ಇದರ ಬಗ್ಗೆ ಹಲವಾರು ಬಾರಿ ಸ್ಥಳೀಯ ಲೈಮನ್ ಅವರಿಗೆ ವಾಲಿರುವ ಕಂಬ ಹಾಗೂ ಜೋತುಬಿದ್ದ ತಂತಿಯನ್ನು ಮೇಲೆ ಎತ್ತಲು ತಿಳಿಸಿದ್ದೇವೆ ಆದರೆ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಕೂಡಲೇ ವಿದ್ಯುತ್ ತಂತಿಯನ್ನು ಮೇಲೆ ಎತ್ತಿ ಮುಂದೆ ಆಗುವ ಸಮಸ್ಯೆಯನ್ನು ಪರಿಹರಿಸಬೇಕು ಎಂದರು.
ರೈತ ಬಸವಣ್ಣಿ ಗಸ್ತಿ ಮಾತನಾಡಿ ವಿದ್ಯುತ್ ತಂತಿಗಳು ತಳಗೆ ಜೋತ ಬಿದ್ದ ಕಾರಣ ಯಾರಿಗಾದರೂ ಅಪಘಾತ ಸಂಭವಿಸುತ್ತದೆ ಎಂದು ನಾನು ಕಾವಲು ಕಾಯುತ್ತಿದ್ದೇನೆ ಇದರ ಬಗ್ಗೆ ಶೀಘ್ರದಲ್ಲಿ ಇವರು ಕ್ರಮ ಕೈಗೊಳ್ಳದಿದ್ದರೆ ಹುಕ್ಕೇರಿಯ ವಿದ್ಯುತ್ ಕಚೇರಿಯ ಮುಂದೆ ಇಲ್ಲಿಯ ಎಲ್ಲಾ ರೈತರು ಕೂಡಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.