ಬೆಳಗಾವಿ: ನಾಗನೂರು ಶ್ರೀ ಶಿವಬಸವ ಟ್ರಸ್ಟ್ ನ ಶ್ರೀಮತಿ ಚಿನ್ನಮ್ಮ ಬಸವಂತಯ್ಯ ಹಿರೇಮಠ ವೃದ್ಧಾಶ್ರಮಕ್ಕೆ ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭೇಟಿ ನೀಡಿ ವಯೋವೃದ್ಧರ ಯೋಗಕ್ಷೇಮ ವಿಚಾರಿಸಿದರು.
ಈ ಕಾರ್ಯಕ್ರಮದಲ್ಲಿ, ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎಸ್ ಎಸ್ ನೇಸರ್ಗಿ ಮಾತನಾಡಿ, ವೃದ್ಧರು ತಮ್ಮ ಬಾಳಿನ ಜೀವನವನ್ನು ಶಾಂತಿಯಿಂದ ಕಳೆಯಬೇಕಾಗಿದೆ. ಅವರ ಅನುಭವ ಮತ್ತು ಜ್ಞಾನವನ್ನು ಯುವ ಪ್ರಜೆಗಳಿಗೆ ಹಂಚುವ ಸಲುವಾಗಿ ಯುವಕರು ಇಂತಹ ಆಶ್ರಮಕ್ಕೆ ಭೇಟಿಯಾಗುವ ಮೂಲಕ ವೃದ್ಧರನ್ನ ಗೌರವಿಸಿ ನಮ್ಮ ಸಂಸ್ಕೃತಿ ಮಾನವೀಯತೆ ಸಹಾನುಭೂತಿಯ ಅನುಭವವನ್ನ ವಿದ್ಯಾರ್ಥಿಗಳು ಪಡೆಯಬೇಕು ಎಂದರು. ಇದರಿಂದ ವಯೋ ವೃದ್ಧರಿಂದ ನಾವು ಅವರ ಜೀವನದ ಅನುಭವಗಳನ್ನು ಕಲಿಯಬಹುದು. ಇದು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಸಹಾಯಕವಾಗುತ್ತದೆ ಎಂದರು.
ತದನಂತರ, ವೃದ್ಧಾಶ್ರಮದ ಸಂಯೋಜಕರಾದ ಎಂ ಎಸ್ ಚೌಗುಲಾರವರು ಟ್ರಸ್ಟ್ ನ ಮೂಲಕ ಹಿರಿಯ ನಾಗರಿಕರಿಗೆ ಒದಗಿಸುತ್ತಿರುವ ಸೌಲಭ್ಯಗಳನ್ನು ವಿದ್ಯಾರ್ಥಿ ಹಾಗೂ ಪ್ರಾಧ್ಯಾಪಕರಿಗೆ, ಪರಿಚಯಿಸಿದರು. ಇದೆ ಸಂಧರ್ಭದಲ್ಲಿ, ವಿದ್ಯಾರ್ಥಿಗಳು ಹಿರಿಯ ನಾಗರಿಕರೊಂದಿಗೆ ಬೆರೆತು ಅವರ ಕುರಿತು ಮಾಹಿತಿ ಪಡೆದುಕೊಂಡರು.
ಪ್ರೊಫೆಸರ್ ಮಲ್ಲೇಶ್ ಸಂಜೀವಣ್ಣವರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಜಾನಕಿ ಅವರು ವಂದಿಸಿದರು.
ಈ ವೇಳೆ, ಡಾ.ಎಸ.ಎಸ. ನೇಸರಗಿ, ಕೆ.ಎಲ್.ಇ ತಾಂತ್ರಿಕ ವಿಶ್ವ ವಿದ್ಯಾನಿಲಯ ಬೆಳಗಾವಿ, ಪ್ರೊ.ಮಲ್ಲೇಶ್ ಸಂಜೀವಣ್ಣವರ ಕೆ.ಎಲ್.ಇ ತಾಂತ್ರಿಕ ವಿಶ್ವ ವಿದ್ಯಾನಿಲಯ ಬೆಳಗಾವಿ, ವೃದ್ಧಾಶ್ರಮದ ಸಂಯೋಜಕರಾದ ಎಂ.ಎಸ ಚೌಗಲಾ, ಜಾನಕಿ ಹಾಗೂ ಕೆ.ಎಲ್.ಇ ತಾಂತ್ರಿಕ ವಿಶ್ವ ವಿದ್ಯಾನಿಲಯ ಬೆಳಗಾವಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.