ಯಮಕನಮರಡಿ: ಗ್ರಾಮದ ಯಮಕನಮರಡಿ ವಿದ್ಯಾವರ್ದಕ ಸಂಘದ ಮೈದಾನದಲ್ಲಿ ಹಂಜಿ ಗೆಳೆಯರ ಬಳಗದ ಸಹಯೋಗದಲ್ಲಿ ಗುರುವಾರ ಬೆಳಿಗ್ಗೆ ೧೨ಗಂಟೆಗೆ ಸಕಲ ಹಂಜಿ ಬಳಗದಿಂದ ಸಾಂಕೇತೀಕವಾಗಿ ಯುವ ಮುಖಂಡ ರವೀಂದ್ರ ಹಂಜಿಯುವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಅವರು ಮಾತನಾಡಿ ಯುವಕರು, ಚಿಕ್ಕಮಕ್ಕಳಿಗೆ ಇದು ಒಂದು ಸುವರ್ಣಅವಕಾಶ ಯಾಕೆಂದರೆ ನಮ್ಮ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಹಬ್ಬಗಳು ನಶಿಸಿ ಹೋಗುತ್ತಿವೆ ಅವುಗಳ ಮರುಕಳಿಸುವ ನಿಟ್ಟಿನಲ್ಲಿ ಹಳೆಯ ಪದ್ದತಿಯನ್ನು ರೂಡಿಯನ್ನು ಮಕ್ಕಳಿಗೆ ಆಯೋಜಿಸಲಾಗಿದೆ ಎಂದರು. ಈ ರಂಗಪAಚಮಿ ಬೆಳಿಗ್ಗೆಯಿಂದ ಸಂಜೆ ೪ಗಂಟೆವರಗೆ ಬಣ್ಣದಾಟ(ರಂಗಪ0ಚಮಿ) ಕಾರ್ಯಕ್ರಮವನ್ನು ಆಯೋಜಿಸಿದರು. ಪುರುಷರು, ಮಹಿಳೆಯರಿಗಾಗಿ ಪ್ರತ್ಯೇಕ ಬ್ಯಾರಿಗೆಡ್ ಹಾಕಿ ವಾದ್ಯ ಹಾಗೂ ನೀರಿನ ಸಿಂಚನಯೊ0ದಿಗೆ ಮಾಡಲಾಯಿತು. ನೂರಾರು ಸಂಖ್ಯೆಯಲ್ಲಿ ಬಣ್ಣದಾಟದಲ್ಲಿ ಚಿಕ್ಕಮಕ್ಕಳು, ಯುವಕರು, ಪುರುಷರು ಭಾಗವಹಿಸಿ ಕುಣಿದು ಆನಂದಿಸಿದರು.
ಈ ಸಂದರ್ಭದಲ್ಲಿ ಕುಶಾಲ ರಜಪೂತ, ಶ್ರೀಕಾಂತ ನಿರ್ಮಳ, ಭರಮಾ ದುಬದಾಳಿ, ಚಿರಾಗ ಕಾಪಸಿ, ಈರಣ್ಣಾ ಶೆಕ್ಕಿ, ರಾಜು ಕೋಟಿಮನಿ, ಜಗದೀಶ ಚಟ್ನಿ, ರಾಜು ಕಾಪಸಿ, ದುಂಡಯ್ಯಾ ಹಿರೇಮಠ, ಸಂಜು ಝುಟ್ಟಿ, ಆನಂದ ಗಾಡಿ ಅನೇಕರು ಉಪಸ್ಥಿತರಿದ್ದರು.