*********************************************
ಹೀರಾ ಪ್ರತಿದಿನ ರಾಯಗಢ ಕೋಟೆಯೊಳಗಿನ ಊರಿಗೆ ಹಾಲು ಮಾರಲು ಬರುತ್ತಿದ್ದಳು. ಕಾರ್ತಿಕ ಮಾಸದ ಹುಣ್ಣಿಮೆಯ ದಿನ ಊರಿನಲ್ಲಿ ಜಾತ್ರೆ ಇತ್ತು. ಹಾಲು ಮಾರಿ ಬರುವಷ್ಟರಲ್ಲಿ ಕತ್ತಲಾಯಿತು. ಬೇಗ ಬೇಗ ಕೋಣೆಯ ಬಾಗಿಲಿಗೆ ಬಂದಳು. ಅಷ್ಟರೊಳಗೆ ಕೋಣೆಯ ಬಾಗಿಲು ಮುಚ್ಚಿತ್ತು. ಕಾವಲುಗಾರನ ಬಳಿ ಕೇಳಿಕೊಂಡರೂ ಉಪಯೋಗವಾಗಲಿಲ್ಲ. ಆತ ರಾಜಾಜ್ಞೆಯ ನೆಪವೊಡ್ಡಿ ನಿರಾಕರಿಸಿದ.
ಅದೇ ಹೊತ್ತಿಗೆ ಆಕೆಗೆ ಮಗುವಿನ ಅಳು ಕೇಳಿದಂತಾಯಿತು. ಕೆಳಗೆ ಆಳವಾದ ಕಂದಕವಿದ್ದರೂ ಲೆಕ್ಕಿಸದೆ ಧೈರ್ಯದಿಂದ ಹಾರುತ್ತಾಳೆ. ಕಂದಕವನ್ನು ದಾಟಿ ಮನೆ ಸೇರಿ ಮಗುವಿಗೆ ಹಾಲುಣಿಸಿ ಸಂಭ್ರಮಈ ವಿಷಯ ಶಿವಾಜಿ ಮಹಾರಾಜರಿಗೆ ತಿಳಿಯಿತು. ಹೀರಾಳ ದಿಟ್ಟತನ, ಧೈರ್ಯ ಅವನರಿಗೆ ಆಶ್ಚರ್ಯವನ್ನು ಉಂಟು ಮಾಡಿತು. ಅವಳನ್ನು ಆಸ್ಥಾನಕ್ಕೆ ಕರೆಯಿಸಿ “ತಾಯಿ ಕೋಟೆಯನ್ನು ಯಾಕೆ ಜಿಗಿದೆ?” ಎಂದು ಪ್ರಶ್ನಿಸಿದರು. “ಮನೆಯಲ್ಲಿ ನಾಲ್ಕು ತಿಂಗಳ ಮಗುವನ್ನು ಬಿಟ್ಟು ಬಂದಿದ್ದೆ. ಹಾಲು ಕುಡಿಸಬೇಕೆಂಬ ಹಂಬಲದಿಂದ ಕೋಟೆ ಜಿಗಿದೆ. ಹೆತ್ತ ಕರುಳಿನ ಸಂಕಟ. ಮಗುವನ್ನು ಬಿಟ್ಟು ಇರಲಾರದೆ ತಪ್ಪು ಮಾಡಿದೆ. ಕ್ಷಮಿಸಿ ಮಹಾಪ್ರಭು” ಎಂದು ತಲೆ ತಗ್ಗಿಸಿದಳು. ಈ ವಿಷಯವನ್ನು ಕೇಳಿದ ಶಿವಾಜಿ “ತಾಯಿಯ ಪ್ರೀತಿ, ಕರುಣೆ, ಕೋಟೆಗಿಂತ ಬಹು ದೊಡ್ಡದು. ತಾಯಿ ಮಮತೆ ಮುಂದೆ ಯಾವುದೂ ಹೆಚ್ಚಿಲ್ಲ” ಎಂದು ಕೊಂಡಾಡಿ, ಆ ಮಹಾತಾಯಿಯನ್ನು ಗೌರವಿಸಿದರು. ಹೀರಾಳ ನೆನಪಿಗಾಗಿ ಅವಳು ಹಾರಿದ ಸ್ಥಳದಲ್ಲಿ “ಬುರುಜು” ಕಟ್ಟಿಸಿ ಅದಕ್ಕೆ “ಹೀರಾಕಣಿ” ಎಂದು ಹೆಸರಿಡುತ್ತಾರೆ.
ಕೃಪೆ :ಸುಧಾಕರ ಆರ್ ಭಂಡಾರಿ
ಸಂಗ್ರಹ: ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ