Live Stream

[ytplayer id=’22727′]

| Latest Version 8.0.1 |

State News

🌻 ಕಥೆ:  ಮನಸ್ಸಿನ ಆರೋಗ್ಯಕ್ಕಾಗಿ ಧ್ಯಾನ🌻

🌻 ಕಥೆ:  ಮನಸ್ಸಿನ ಆರೋಗ್ಯಕ್ಕಾಗಿ ಧ್ಯಾನ🌻

 

 

ಮನುಷ್ಯನಿಗೆ ವಯಸ್ಸಾಗುತ್ತಾ ಹೋದಂತೆ, ಅವನ ಜೀವನ ಚೈತನ್ಯ ಇಳಿಮುಖವಾಗುತ್ತಾ ಹೋಗುತ್ತದೆ. ಸುಮಾರು ಮೂವತ್ತೈದು ವರ್ಷಗಳ ವರೆಗೂ ಅವನ ಜೀವನದ ಶಿಖರ ಏರುತ್ತಿರುತ್ತದೆ.ಆ ಸಮಯದಲ್ಲಿ ಬರುವ ಖಾಯಿಲೆಗಳೆಲ್ಲಾ ದೇಹಕ್ಕೆ ಸಂಬಂಧ ಪಟ್ಟಿರುತ್ತವೆ.ಮೂವತ್ತೈದು ತಲುಪುವ ವರೆಗೂ ಯೌವ್ವನದ ಕಾವು ಏರುತ್ತಿರುವುದರಿಂದ, ಈ ವಯಸ್ಸಿನಲ್ಲಿ ಧ್ಯಾನ ಅಥವಾ ಇನ್ಯಾವುದೇ ಆಧ್ಯಾತ್ಮಿಕ ವಿಷಯಗಳೂ ಸಾಮಾನ್ಯವಾಗಿ ಅವನ ತಲೆಯಲ್ಲಿ ಬರುವುದೇ ಇಲ್ಲ. ಆದರೆ ಈ ವಯಸ್ಸಿನ ನಂತರ ಬರುವ ಖಾಯಿಲೆಗಳೆಲ್ಲಾ, ಸಾಮಾನ್ಯವಾಗಿ ಮನುಷ್ಯನ ಮನಸ್ಸಿಗೆ ಸಂಬಂಧ ಪಟ್ಟ ಖಾಯಿಲೆಯಾಗಿರುವುದರಿಂದ, ಬದುಕು ಈಗ ಸಾವಿಗೆ ಹತ್ತಿರವಾಗುತ್ತಿದೆ ಎಂದು ತಿಳಿದು, ಮನುಷ್ಯ ಒಳಗೊಳಗೇ ಭಯದಿಂದ ಕುಗ್ಗಿ ಹೋಗುತ್ತಾನೆ.

ಮನುಷ್ಯನ ನಿವೃತ್ತಿ ಯ ನಂತರ, ಅವನ ಆಯಸ್ಸು ಸುಮಾರು ಆರು ಏಳು ವರ್ಷಗಳಷ್ಟು ಕಡಿಮೆ ಆಗುತ್ತಾ ಹೋಗುತ್ತದೆ. ಸುಮಾರು, ಎಪ್ಪತ್ತು ವಯಸ್ಸಿನ ತನಕ ಬದುಕಬಲ್ಲವನು ಚಿಂತೆಯಿಂದ ಅರವತ್ನಾಲ್ಕನೇ ವಯಸ್ಸಿಗೇ ಸಾಯುತ್ತಾನೆ, ಎಂಬತ್ತು ವರ್ಷ ಬದುಕಿರುವವನು, ಎಪ್ಪತ್ಯೈದಕ್ಕೆಲ್ಲಾ ಸಾಯುತ್ತಾನೆ. ತನಗೆ ವಯಸ್ಸಾಯಿತು,ತಾನು ಅಪ್ರಯೋಜಕ ಎಂಬ ಕೀಳರಿಮೆಯ ಭಾವ ಆತನನ್ನು ಇನ್ನೇನೂ ಮಾಡದಂತೆ, ತಡೆದು ಬಿಡುತ್ತದೆ. ತಾನು ಯಾವುದೋ ಉದ್ಯೋಗದಲ್ಲಿದ್ದಾಗ ಅಥವಾ ಬೇರೆ ಇನ್ನೇನೋ ಕೆಲಸಮಾಡುತ್ತಿದ್ದಾಗ,ಗೌರವಿಸುತ್ತಿದ್ದ ಜನರು, ಈಗ ಯಾರೂ ತನ್ನ ಕಡೆ ತಿರುಗಿಯೂ ನೋಡುವುದಿಲ್ಲಾ, ತಾನಿದ್ದ ಜಾಗಕ್ಕೆ ಯಾರೊ ಹೊಸಬರು ಬಂದಿದ್ದಾರೆ, ಎಲ್ಲರೂ ಅವರನ್ನು ಗೌರವಿಸುತ್ತಾರೆ, ಬೆಳೆದು ದೊಡ್ಡವರಾದ ತನ್ನ ಮಕ್ಕಳೇ ,ಅವರ ಹೆಂಡತಿ ಮಕ್ಕಳ ಯೋಚನೆಯಲ್ಲಿರುತ್ತಾರೆ. ಕೆಲವು ಪರಿಚಯಸ್ಥರು, ಸ್ನೇಹಿತರು ಸಂಬಂಧಿಗಳು ,ಸಾವಿಗೆ ಶರಣರಾಗಿದ್ದಾರೆ, ಯಾರಿಗೆ ,ತಾನಿಲ್ಲದೇ ಬದುಕೇ ಇಲ್ಲಾ ಎಂದು ಕೊಂಡಿದ್ದೆನೊ, ಅವರಿಗೂ ತನ್ನ ಯೋಚನೆಯೇ ಇಲ್ಲಾ, ಅವರಿಗೆ ನಾನು ಹೊರೆಯಾಗಿದ್ದೇನೆ, ಬೇಡವಾಗಿದ್ಧೇನೆ ಎಂಬ ಭಾವದಿಂದ ,ತನಗೆ ತಾನೇ ಮನಸ್ಸಿನಲ್ಲೇ ಕುಸಿಯತೊಡಗುತ್ತಾನೆ.

ಇದರಿಂದ ಹೊರಬರಲು,ಮನುಷ್ಯ ತನ್ನೊಳಗಿನ ಪ್ರಜ್ಞೆಯನ್ನುಕಂಡುಕೊಳ್ಳಬೇಕು. ಅದನ್ನು ಅನುಭವಿಸಬೇಕು. ನಾವೆಲ್ಲರೂ ಎಂದೂ ಕೂಡ ನಮ್ಮ ಒಳಗಿರುವ ಪ್ರಜ್ಞೆಯ ಬಗೆ ಚಿಂತಿಸುಸುವುದೇ ಇಲ್ಲಾ.ನಮ್ಮ ಅನುಭವಕ್ಕೆ ಬರುವುದು,ನಮ್ಮ ದೇಹ,ಕೈ ಕಾಲು,ತಲೆ , ಹೊಟ್ಟೆ,ಹೀಗೆ ಬಾಹ್ಯ ರೂಪ ಮಾತ್ರ.ಒಳಗಿರುವ ಆತ್ಮ ಪ್ರಜ್ಞೆ ಅನುಭವಕ್ಕೆ ಸಿಗುವುದೇ ಇಲ್ಲಾ.

ನಮ್ಮೆಲ್ಲರ ಅರಿವು ಕೇಂದ್ರೀಕೃತ ವಾಗಿರುವುದು,ನಮ್ಮ ಶರೀರದ ಮೇಲೆ ಹೊರತು, ಒಳಗಿರುವ ಆತ್ಮ ಪ್ರಜ್ಞೆಯ ಮೇಲಲ್ಲ, ಅಂದರೆ ನಮ್ಮ ಕಾಳಜಿ ಮನೆಯ ಮೇಲೆ ಹೊರತು, ಒಳಗಿರುವ ಒಡೆಯನ ಮೇಲಲ್ಲಾ!
ನಾನು ಈ ಮನೆಯಲ್ಲಾ,ಮನೆಯ ಒಡೆಯಾ,ಒಳಗಿರುವವನು,ಎನ್ನುವುದು ಒಮ್ಮೆ ನಮಗೆ ಅರಿವಾದರೆ,ಮನೆ ಕುಸಿದರೂ ಕೂಡಾ ನಮಗೇನೂ ಆಗುವುದಿಲ್ಲಾ,ಎಂಬ ಭಾವನೆ, ನಮ್ಮಲ್ಲಿ ದೊಡ್ಡ ಬದಲಾವಣಿಯನ್ನು ಉಂಟುಮಾಡುತ್ತದೆ,ಸಾವಿನ ಭಯ ಮಾಯವಾಗಿ ಮನಸ್ಸು ನಿರಾಳವಾಗುತ್ತದೆ.
ಧ್ಯಾನವಿಲ್ಲದೇ ,ಈ ಸ್ಥಿತಿಗೆ ತಲುಪಲು ಸಾಧ್ಯವಿಲ್ಲ.ಈ ಸಾವಿನ ಭಯ ತೊಲಗುವುದಿಲ್ಲ ,ಧ್ಯಾನದಿಂದ ಮಾತ್ರ ಈ ಅರಿವು ಮೂಡಲು ಸಾಧ್ಯ.

ಧ್ಯಾನದಲ್ಲಿ ಮೂಲಭೂತವಾಗಿ ನಾವು,ನಮ್ಮ ದೇಹದ ಬಗ್ಗೆ, ನಮ್ಮ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು, ಧ್ಯಾನದ ಮೂಲಕ, ತನ್ನೊಳಗಿರುವುದಕ್ಕೆ, ಸಾವಿಲ್ಲ, ನಾಶವಾಗುವುದು ಏನಿದ್ದರೂ, ಹೊರಗೆ ಕಾಣುತ್ತಿರುವ ಈ ದೇಹ ಮಾತ್ರ ಎಂಬುದರ ಅರಿವು ಮೂಡುವುದು.ಈ ಅರಿವು ಆಳವಾದಂತೆಲ್ಲಾ,ಸಾವಿನ ಭಯ ಮರೆಯಾಗುತ್ತದೆ.

ಆಗ ಸಾವು, ಮನೆಯ ಬಾಗಿಲಿಗೇ ಬಂದು ನಿಂತರೂ, ನಾವು ಭಯಭೀತರಾಗುವುದಿಲ್ಲ.
ಇಂತಹ ಅರಿವು ನಮ್ಮನ್ನು ಭಯ ರಹಿತರನ್ನಾಗಿ ಮಾಡುತ್ತದೆ,ಮನಸ್ಸು ನಿರಾಳವಾಗುತ್ತದೆ. ಹಾಗಾಗಿ, ದಿನದ ಸ್ವಲ್ಪ ಸಮಯವನ್ನಾದರೂ ನಾವು ಧ್ಯಾನಕ್ಕೆಂದು ಮೀಸಲಿಡುವುದು ಒಳ್ಳೆಯದು.

ವಂದನೆಗಳೊಂದಿಗೆ,

✍️ :-ಸುವರ್ಣಾ ಮೂರ್ತಿ
ಸಂಗ್ರಹ :- ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";