ಸಂಕೇಶ್ವರ: ಅಂತರ ರಾಜ್ಯ ಮೊಬೈಲ್ ಕಳ್ಳನೊಬ್ಬನನ್ನು ಬಂಧಿಸಿ ಆತನಿಂದ 11,71,000 ರೂ.ಮೌಲ್ಯದ ವಿವಿಧ ಕಂಪನಿಯ ಮೊಬೈಲ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಸಂಕೇಶ್ವರ ಪೋಲಿಸರು ಯಶಸ್ವಿಯಾಗಿದ್ದಾರೆ.
ತೆಲಂಗಾಣ ರಾಜ್ಯದ ಸಂಗಮೇಶ್ವರ ಕಾಲೋನಿಯ ನವೀನ ಸಂಪತ, ತಂದೆ ಕೃಷ್ಣಾ ಸಂಪತ,
ಬಂಧಿತ ಆರೋಪಿ. ಆತನಿಂದ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಈತ ಸಂಕೇಶ್ವರ ಹೊರವಲಯದ ಯು.ಪಿ.ದಾಭಾ ಹತ್ತಿರ ಪೋಲಿಸರು ವಾಹನಗಳನ್ನು ತಪಾಸಣೆ ನಡೆಸುವ ವೇಳೆ ತಡೆದು ವಿಚಾರಿಸದ ವೇಳೆ ಕಳವು ಮೊಬೈಲ್ ಗಳು ಎಂಬುವುದು ತಿಳಿದು ಬಂದಿದೆ. ಪೋಲಿಸರು ಆತನನ್ನು ವಿಚಾರಣೆ ನಡೆಸಿ 101 ಮೊಬೈಲ್ ಗಳನ್ನು ಹಾಗೂ ಹೊಂಡಾ ಕಂಪನಿಯ ಕಾರನ್ನು ವಶಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
ಗೋಕಾಕ ಡಿಎಸ್ ಪಿ, ರವಿ ಡಿ.ನಾಯ್ಕ್, ಸಂಕೇಶ್ವರ ಪಿ.ಐಗಳಾದ ಎಸ್.ಎಮ್.ಅವಜಿ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಆರ್.ಎಸ್.ಖೋತ ಹಾಗೂ ಎ.ಕೆ.ಸೋನ್ನದ, ಸಿಬ್ಬಂದಿಗಳಾದ ವಿ.ಬಿ.ಮುರಕಿಬಾವಿ, ಎಸ್.ಎಲ್.ಗಳತಗಿ, ಎಸ್.ಎ.ಕಾಂಬಳೆ, ಎಸ್.ಎಮ್.ಯಕ್ಸಂಬಿ, ಬಿ.ಟಿ.ಪಾಟೀಲ ಇವರ ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದರು, ಈ ಕಾರ್ಯಕ್ಕೆ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳಾದ ಡಾ. ಭೀಮಾಶಂಕರ ಗುಳೇದ ಅವರು ಶಾಘ್ಲನೆ ವ್ಯಕ್ತಪಡಿಸಿದ್ದಾರೆ.
ವರದಿ:ಕಲ್ಲಪ್ಪ ಪಾಮನಾಯಿಕ್