Live Stream

[ytplayer id=’22727′]

| Latest Version 8.0.1 |

Local News

ವಂಟಮುರಿಯ ಜಗಜಂಪಿ ಮನೆತನದ ಹಿರಿಯ ಗುರುಗೆ 101ನೇ ವರ್ಷದ ಸಂಭ್ರಮ

ವಂಟಮುರಿಯ ಜಗಜಂಪಿ ಮನೆತನದ ಹಿರಿಯ ಗುರುಗೆ 101ನೇ ವರ್ಷದ ಸಂಭ್ರಮ

 

ಹುಕ್ಕೇರಿ : ವಂಟಮುರಿ ಗ್ರಾಮದ ಜಗಜಂಪಿ ಮನೆತನದ ಹಿರಿಯರಾದ ಸಿದ್ದಮಲ್ಲಪ್ಪಾ ಮಲ್ಲಪ್ಪ ಜಗಜಂಪಿ ಅವರು ಈ ವರ್ಷ 101ನೇ ವಸಂತವನ್ನು ಮುಗಿಸಿ 102ನೇ ವರ್ಷದ ಹಾದಿಗೆ ಕಾಲಿಟ್ಟಿದ್ದಾರೆ. ವೃದ್ಧಾಪ್ಯವನ್ನೂ ಮೀರಿದ ದೀರ್ಘಾಯುಷ್ಯ, ಸಮಾಜ ಸೇವೆಯ ಹೊನ್ನೆಗಿಲು ಹಾಗೂ ಶಿಕ್ಷಣ ಕ್ಷೇತ್ರದ ನಿಸ್ವಾರ್ಥ ಸೇವೆಯ ಫಲವಾಗಿ, ಇವರು ಇಂದು ಸಾವಿರಾರು ಜನರಿಗೆ ಪ್ರೇರಣೆಯ ಪ್ರತೀಕವಾಗಿದ್ದಾರೆ.

ಸಿದ್ದಮಲ್ಲಪ್ಪಾ ಅವರು 1924ರಲ್ಲಿ ವಂಟಮುರಿ ಗ್ರಾಮದ ಮಲ್ಲಪ್ಪ ಹಾಗೂ ಪಾರ್ವತಮ್ಮ ದಂಪತಿಗಳ ಕುಟುಂಬದಲ್ಲಿ ಜನಿಸಿದರು. 1948ರಲ್ಲಿ ರಾಜಾ ಲಖಮನಗೌಡ ದೇಸಾಯಿ ಮಟಮುರಿ ದೇಸಾಯಿಯ ಕಾಲದಲ್ಲಿ ಮಟಮುರಿಯಲ್ಲಿ ಶಿಕ್ಷಕರಾಗಿ ತಮ್ಮ ಸೇವೆಯ ಪ್ರಾರಂಭ ಮಾಡಿದರು. ನಂತರ ವಂಟಮುರಿ ಹಾಗೂ ಇತರ ಗ್ರಾಮಗಳಲ್ಲಿ ಶಿಕ್ಷಕರಾಗಿ, ಪ್ರಾಂಶುಪಾಲರಾಗಿಯೂ ಕಾರ್ಯನಿರ್ವಹಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೆಲಸ ಮಾಡಿದ್ದಾರೆ.

ಇವರು ಆ ವರ್ಷ ಸೌಭಾಗ್ಯವತಿ ವಸಂತಾ ಅವರೊಂದಿಗೆ ವಿವಾಹಿತರಾದರು. ದಂಪತಿಗಳಿಗೆ ನಾಲ್ಕು ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳಿದ್ದು, ಎಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಉತ್ತಮ ಸ್ಥಿತಿಗೆ ತಲುಪಿದ್ದಾರೆ.

1979ರಲ್ಲಿ ಬೆಳಗಾವಿ ನಗರದ ಮಾಹಾಂತೇಶ 24ನೇ ನಂಬರ ಶಾಲೆಯಿಂದ ಮುಖ್ಯಗುರುಗಳಾಗಿ ನಿವೃತ್ತರಾದ  ಸಿದ್ದಮಲ್ಲಪ್ಪಾ ಅವರು ತಮ್ಮ 31 ವರ್ಷಗಳ ಸೇವಾ ಅವಧಿಯಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಿವೃತ್ತಿಯ ನಂತರವೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಇನ್ನಷ್ಟು ದಿನಗಳನ್ನು ಜನ ಸೇವೆಗೆ ಮೀಸಲಿಟ್ಟಿದ್ದಾರೆ.

ಇವರು ಜಗಜಂಪಿ ಮನೆತನದ ಅತೀ ಹಿರಿಯರಾಗಿದ್ದು, ತಮ್ಮ ಕುಟುಂಭಕ್ಕೆ ಆಧಾರಸ್ತಂಭವಾಗಿದ್ದಾರೆ. ಅವರ ಸಾಧನೆ ಹಾಗೂ ಶಿಸ್ತಿನಿಂದ ಜಗಜಂಪಿ ಮನೆತನಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಕೀರ್ತಿ ತಂದುಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಅವರ ಮಕ್ಕಳು ಮಲ್ಲಪ್ಪ, ಈರಣ್ಣಾ, ರಾಜು, ಸಿದ್ದಮಲ್ಲಪ್ಪ ಜಗಜಂಪಿ ಹಾಗೂ ಪುತ್ರಿಯರಾದ ಶ್ರೀಮತಿ ಸುಮಂಗಲಾ ಮತ್ತು ಶೋಭಾ ಜಗಜಂಪಿ ಸಹಿತ ಮೊಮ್ಮಕ್ಕಳು, ಗಿರಿಮಕ್ಕಳು, ತಮ್ಮನ ಮಕ್ಕಳು ಸಿದ್ದಪ್ಪ, ಗಿರೀಶ, ದಿ. ಮಾಹಾಂತೇಶ, ಸಿದ್ರಾಮಪ್ಪ ಜಗಜಂಪಿ, ಶ್ರೀಮತಿ ಕಮಲಾ ಶಂಕರೋಶಿ, ಶ್ರೀಮತಿ ಪಾರ್ವತಿ ಸಿದ್ರಾಮಪ್ಪ ಜಗಜಂಪಿ ಎಲ್ಲರೂ ಅವರ ಆರೋಗ್ಯ ಮತ್ತು ಆಯುಷ್ಯಕ್ಕಾಗಿ ಹಾರೈಸುತ್ತಿದ್ದಾರೆ.

ಇಂದು ಅವರ 102ನೇ ವರ್ಷದ ಮೊದಲ ದಿನದ ನಿಮಿತ್ತವಾಗಿ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಗ್ರಾಮದ ಜನರು ಹೃತ್ಪೂರ್ವಕವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ. ದೇವರು ಅವರಿಗೆ ಆರೋಗ್ಯವಂತ, ಸಂತೋಷಪೂರ್ಣ ಹಾಗೂ ನೆಮ್ಮದಿಯ ಜೀವನ ನೀಡಲೆಂದು ಹಾರೈಸುತ್ತಿದ್ದಾರೆ.

ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";