Live Stream

[ytplayer id=’22727′]

| Latest Version 8.0.1 |

Local NewsState News

ಕಾಕತಿಯಲ್ಲಿ ಅದ್ದೂರಿಯಾಗಿ ಜರುಗಿದ 10ನೇ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ

ಕಾಕತಿಯಲ್ಲಿ ಅದ್ದೂರಿಯಾಗಿ ಜರುಗಿದ 10ನೇ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ

 

ಬೆಳಗಾವಿ: ಬಸವಾದಿ ಶರಣರು ಕಲ್ಯಾಣ ನಾಡು ಬೆಳಗಿರುವಂತ ಕಲ್ಯಾಣವನ್ನು “ಕ” ಎಂಬ ಅಕ್ಷರದ ಮೂಲಕ ಕಲ್ಯಾಣ ಮಂಟಪ ಕಟ್ಟಿದರು‌‌. ಕಾಶ್ಮೀರ ಕನ್ಯಾಕುಮಾರಿ ಹೀಗೆ ಎಲ್ಲವನ್ನು ಕನ್ನಡದಿಂದ ಕಟ್ಟಲಾಗಿದೆ. ಇದನ್ನು ನೋಡಿದಾಗ ಕಸ್ತೂರಿ ಕನ್ನಡ ಎಲ್ಲೆಲ್ಲೂ ಹರಡಿರುವುದನ್ನು ಸಾಹಿತಿಗಳು ತಮ್ಮ ಕವಿತೆಗಳಲ್ಲಿ ಮನಮುಟ್ಟುವಂತೆ ಬರೆದಿದ್ದಾರೆ ಎಂದು ಸುಕ್ಷೇತ್ರ ಮುಕ್ತಿ ಮಠದ ಪೂಜ್ಯಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಕಾಕತಿಯ ಶ್ರೀಸಿದ್ದೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಸೋಮವಾರ 27 ರಂದು ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ‌ಆಯೋಜಿಸಲಾದ ‘ಬೆಳಗಾವಿ ತಾಲೂಕು 10ನೇ ಸಾಹಿತ್ಯ ಸಮ್ಮೇಳನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರಕೂಟರು, ಚಾಲುಕ್ಯರು ಹೊಯ್ಸಳರು ಹೀಗೆ ಹಲವು
ಕನ್ನಡ ನಾಡಿನ ಅರಸರು ಕನ್ನಡ ಲಿಪಿಯನ್ನು ಬಳಸಿ, ಅಲ್ಲಲ್ಲಿ ಕಲ್ಲುಗಳ ಮೇಲೆ ಕನ್ನಡ ಅಕ್ಷರ ಕೆತ್ತಿಸಿ ವಿಜಯನಗರದ ಸಾಮ್ರಾಜ್ಯದ ಘನತೆ ಗೌರವವನ್ನು ಈ ಕನ್ನಡ ಬಾಷೆ ಹೆಚ್ಚಿಸಿದೆ. ಹೀಗಾಗಿ ಹಕ್ಕಬುಕ್ಕ ವಿದ್ಯಾರಣ್ಯರ ಅಂತಹ ಅನೇಕರು ಕನ್ನಡವನ್ನು ಉಳಿಸಿ ಬೆಳಸಿ ಮೆರೆಸಿದ್ದಾರೆ ಎಂದರು.

ಆಂಗ್ಲರು ಬಳಸಿದ ಕರ್ನಾಟಕ ಪದ ಕರುನಾಡು ಎಂದು ಮರುನಾಮಕರಣವಾಗಬೇಕು. ಸರಕಾರ ಮಿನಿ ವಿಧಾನಸೌಧ ಎಂದು ಬಳಸುತ್ತಿದೆ.ಆದರೆ,ಇದು ಸರಿಯಲ್ಲ. ಬದಲಿಗೆ ಹಸಿರು ಅಥವಾ ಕನ್ನಡಸೌಧ ಎಂದು ಬಳಸಬೇಕು. ಈ ನಿಟ್ಟಿನಲ್ಲಿ ನಾಡಿನ ಕನ್ನಡಿಗರಲ್ಲ ಎಚ್ಚೆತ್ತುಕೊಳ್ಳಬೇಕು ಕರೆ ಎಂದು ಸುಕ್ಷೇತ್ರ ಮುಕ್ತಿ ಮಠದ ಪೂಜ್ಯಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.

ಕನ್ನಡ ನಾಡಿನ ನೆಲ, ಜಲ, ಗಾಳಿ, ಅಣ್ಣ ಉಂಡು ಬೆಳೆದ ಈ ದೇಹ ಕನ್ನಡ ತಾಯಿಯ ಋಣ ತೀರಿಸುವ ಕೆಲಸವಾಗ ಬೇಕು. ಈಗಾಗಲೇ ಅನೇಕ ಮಹನೀಯರು ಕನ್ನಡವನ್ನು ಉಳಿಸು ಬಳಿಸಲು ಶ್ರಮಿಸಿದ್ದಾರೆ. ಹೃದಯಯದ ಕನ್ನಡ ಭಾಷೆವನ್ನುಯುವ ಪೀಳಿಗೆ ಉಳಿಸಿ ಬೆಳೆಸಿಕೊಂಡು ಸಾಗಬೇಕು ಎಂದರು.

ಕಾಕತಿಯಲ್ಲಿ ನಡೆದ ಈ ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮ ಮನೆಯ ಹಬ್ಬ, ನಮ್ಮ ತಾಯಿಯ ಭಾಷೆ ಎಂದು ಎದೆ ತಟ್ಟಿ ಹೇಳುವಂತೆ ನಾಡಿನಾದ್ಯಂತ ಪ್ರತಿ ಮನೆಮನೆಗೂ ತಲುಪುವಂತಾಗಬೇಕು.ಆ ನಿಟ್ಟಿನಲ್ಲಿ ಕನ್ನಡಿಗರೆಲ್ಲರೂ ಶ್ರಮಿಸಬೇಕು ಎಂದರು.

ಯುವ ನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿ: ಕನ್ನಡ ಭಾಷೆ ಪುರಾತನ ಭಾಷೆಯಾಗಿದ್ದು, ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಹಾಗೂ ಸಮೃದ್ಧಿಯಾದ ಭಾಷೆಯಾಗಿದೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು.‌

ಕನ್ನಡ ಸಂಸ್ಕೃತಿ‌, ಇತಿಹಾಸ ತಿಳಿದುಕೊಳ್ಳುವ ಪ್ರಯತ್ನವನ್ನು ಯುವ ಪೀಳಿಗೆ ಮಾಡಬೇಕಿದೆ. ಮಹಾನ್ ಪುರುಷರು ಜನಿಸಿದ ಪುಣ್ಯದ ನಾಡು ಕನ್ನಡನಾಡು, ಅಂತಹ ಮಹನೀಯರು ನೆನುವ ಕಾರ್ಯವಾಗಬೇಕು‌.‌ ನಾಡು , ನುಡಿ, ನೆಲ, ಜಲ ವಿಚಾರ ಬಂದಾಗ ಕನ್ನಡಾಭಿಮಾನಿಗಳು ಹೋರಾಟ ಮಾಡಿದ್ದಾರೆ. ಕನ್ನಡ ಬೆಳೆಸಲು ಮಹನೀಯರು ಹಾಗೂ ಸಾಹಿತ್ಯಗಳು ಅಪಾರ ಕೊಡುಗೆ ನೀಡಿದ್ದಾರೆ. ಅವರ ತ್ಯಾಗ ಫಲವೇ ಕನ್ನಡ ವಿಶ್ವವ್ಯಾಪಿ ಬೆಳೆದಿದೆ ಎಂದರು.

ತಂದೆಯವರಾದ ಸಚಿವ ಸತೀಶ ಜಾರಕಿಹೊಳಿ ಅವರು ಕನ್ನಡ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡಿದ್ದಾರೆ. ಗ್ರಾಮಗಳ ಅಭಿವೃದ್ಧಿಗೆ ಶಿಕ್ಷಣವೇ ಒಂದೇ ದಾರಿಯಾಗಿದೆ. ಹೀಗಾಗಿ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಬೇಕಿದೆ. ಸಚಿವರು ಯಮಕನಮರಡಿ ಕ್ಷೇತ್ರದ ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಶಾಲಾ ಅಭಿವೃದ್ಧಿಗಾಗಿ ಈಗಾಗಲೇ 8.5 ಕೋಟಿ ರೂ. ನೀಡಿದ್ದಾರೆ ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲ ಮೆಟಗುಡ್ಡ ಮಾತನಾಡಿ, ಸಾಹಿತ್ಯ ಸಮ್ಮೇಳನಕ್ಕೆ ಪ್ರೋತ್ಸಾಹ ನೀಡಬೇಕಿದ್ದ ಸರ್ಕಾರಗಳು ಅಸಡ್ಡೆ ತೊರುತ್ತಿವೆ. ದಾನಿಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಜರುಗುತ್ತಿವೆ. ಮತ್ತು ಸಚಿವ ಸತೀಶ್ ಜಾರಕಿಹೊಳಿ ಅವರು ಕನ್ನಡ ಸಾಹಿತ್ಯ ಎಲ್ಲಾ ಕಾರ್ಯಕ್ರಮಕ್ಕೆ ಸಹಾಯ, ಸಹಕಾರ ನೀಡುತ್ತಾ ಬಂದಿದ್ದಾರೆ. ಅವರ ಕನ್ನಡಾಭಿಮಾನವೇ ಈ ಕಾರ್ಯಕ್ರಮಕ್ಕೇ ಬಲ ಬಂದತ್ತಾಗಿದೆ. ಗಡಿಯಲ್ಲಿ ಕನ್ನಡ ಶಾಲೆ ಗಟ್ಟಿಗೊಳಿಸಿದಾಗ ಗಡಿಯಲ್ಲಿ ಕನ್ನಡ ನೆಲೆಯೂರಲಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಶೈಲಜಾ ಭಿಂಗೆ ಮಾತನಾಡಿ, ಕಾಕತಿಗೆ ಐತಿಹಾಸಿಕತೆ ಇದೆ. ಕನ್ನಡ ಸಾಹಿತ್ಯವೂ ಇಲ್ಲಿ ಲೀಲಾಜಾಲವಾಗಿ ಬೆಳೆದುಬಂದಿದೆ. ಬಹುಬಾಷೆ ಇದ್ದರೂ ಸಹಿತ ಗಡಿ ತಾಲೂಕಿನಲ್ಲಿ ಇತ್ತೀಚಿಗೆ ಭಾಷಾ ಬಾಂಧವ್ಯ ಎದ್ದು ಕಾಣುತ್ತಿದೆ. ಇದಕ್ಕೆ ಪೂರಕವಾಗಿ ಬೆಳಗಾವಿ ರುದ್ರಾಕ್ಷಿ ಮಠದ ಕನ್ನಡ ಕೈಂಕರ್ಯ ಮೆಚ್ಚುವಂತದ್ದು. ಕೇವಲ ಸಾಹಿತಿಗಳು, ಬರಹರಾರರು, ಲೇಖಕರಿಂದ ಮಾತ್ರ ಕನ್ನಡ ಗಟ್ಟಿಯಾಗಿಲ್ಲ. ಕೆಎಲ್‌ಇ, ಗೋಮಟೇಶ, ಭರತೇಶನಂತಹ ಅನೇಕ ಶಿಕ್ಷಣ ಸಂಸ್ಥೆಗಳು ಕನ್ನಡ ಉಳಿವಿಗೆ ಸೇವೆ ಸಲ್ಲಿಸಿವೆ ಎಂದರು.

ತಾಲೂಕ ಸಮ್ಮೇಳನದಲ್ಲಿ ಆದ ನಿರ್ಣಯಗಳು
1. ಬೆಳಗಾವಿ ತಾಲೂಕಿನ ಗಡಿಭಾಗದ ಕನ್ನಡ ಶಾಲೆಗಳನ್ನು ಬಲಪಡಿಸಲು ಮೂಲಭೂತ ಸೌಕರ್ಯ ಒದಗಿಸುವದು.
2)ಚನ್ನಮಳ ತವರೂರು ಕಾಕತಿಯಲ್ಲಿ ರಾಣಿ ಚೆನ್ನಮ್ಮಳ ಹೆಸರಿನಲ್ಲಿ ಒಂದು ಸ್ವಸ್ಥಚಿತವಾದ ಬಾಲಕಿಯರ ಕ್ರೀಡಾ ತರಬೇತಿ ವಸತಿ ಶಾಲೆ ನಿರ್ಮಿಸುವುದು.
3) ನಿರಂತರ ಕನ್ನಡಪರ ಚಟುವಟಿಕೆಗಳಿಗೆ ಒತ್ತು ನೀಡಿ ಪರಿಷತ್ತಿನ ಸದಸ್ಯರನ್ನು ಹೆಚ್ಚಿಸುವುದರ ಮೂಲಕ ಕನ್ನಡ ಬಲಪಡಿಸುವುದು.
4) ಶಾಲಾ ಕಾಲೇಜು ಮಕ್ಕಳಲ್ಲಿ ಕನ್ನಡದ ಅಭಿರುಚಿ ಬೆಳೆಸಲು ಪರಿಷತ್ತಿನಿಂದ ಕೇವಲ ಸಮ್ಮೇಳನ ಅಷ್ಟೇ ಅಲ್ಲದೆ ವಿವಿಧ ಕನ್ನಡ ಸಂಬಂಧಿತ ಸ್ಪರ್ಧಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
5) ಬೆಳಗಾವಿ ತಾಲೂಕಿನ ಪಶ್ಚಿಮ ಭಾಗದ ಹಳ್ಳಿಗಳಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಬರೆಯುವಂತೆ ಒತ್ತು ನೀಡುವುದು.

ಮೆರವಣಿಗೆ: ಕಾಕತಿಯ ಪೊಲೀಸ್‌ ಠಾಣೆಯಿಂದ ಶ್ರೀಸಿದ್ದೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದವರೆಗೂ ‘ಬೆಳಗಾವಿ ತಾಲೂಕು 10ನೇ ಸಾಹಿತ್ಯ ಸಮ್ಮೇಳನ’ ಕಾರ್ಯಕ್ರಮ ಮೆರವಣಿಗೆ ಜರುಗಿತ್ತು.

ಈ ವೇಳೆ ಸಾಧಕರಿಗೆ ಸನ್ಮಾನಿಸಲಾಯಿತು. ಮತ್ತು ಸುದ್ದಿಗೋಷ್ಠಿ, ಕವಿಗೋಷ್ಠಿ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಶೈಲಜಾ ಭಿಂಗೆ, ತಾಲೂಕು ಸಾಹಿತ್ಯ ಸಮ್ಮೇಳನದ ಉಸ್ತುವಾರಿ ಅಶೋಕ ಖೋತ, ತಾಪಂ ಮಾಜಿ ಸದಸ್ಯ ಯಲ್ಲಪ್ಪ ಕೋಳೆಕರ, ಶಿವಾ ಆಪಸೆಟ್ ಸಂಸ್ಥಾಪಕರಾದ ಶಿವು ನಂದಗಾವಿ, ಸಿದ್ದು ಸುಣಗಾರ , ಸಚಿವರ ಆಪ್ತ ಸಹಾಯಕರಾದ ಮಲಗೌಡ ಪಾಟೀಲ್, , ಖ್ಯಾತ ವೈದ್ಯಾರಾದ ಗಿರೀಶ ಸೋನವಾಲ್ಕರ್ , ಬೆಳಗಾವಿ ಲೇಖಕಿಯರ ಸಂಘದ ಅಧ್ಯಕ್ಷೆ ಸುಮಾ ಕಿತ್ತೂರು ಅಧ್ಯಕ್ಷತೆ ವಹಿಸುವರು. ಡಾ. ಜ್ಯೋತಿರ್ಲಿಂಗ ಹೊನಕಟ್ಟಿ, ಡಾ. ಹೇಮಾ ಸೊನೊಳ್ಳಿ, ಬೆಳಗಾವಿ ತಾಲೂಕಿನ ಕನಾಪ ಅಧ್ಯಕ್ಷರಾದ ಸುರೇಶ ಹಂಜಿ ,ಎಂ.ವೈ. ಮೆಣಸಿನಕಾಯಿ, ಹೇಮಾ ಕಾಜಗಾರ, ಶಿವಾನಂದ ತಲ್ಲೂರ, ವಿ.ಎಂ. ಅಂಗಡಿ, ಪ್ರಬಾವತಿ ಹಿರೇಮಠ, ಬಿಇಒ ರವಿ ಭಜಂತ್ರಿ, ಯಲ್ಪಪ್ಪ ಕಿಲೇಕರ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಬೆಳಗಾವಿ ಲೇಖಕಿಯರ ಸಂಘದ ಅಧ್ಯಕ್ಷೆ ಸುಮಾ ಕಿತ್ತೂರು ಅಧ್ಯಕ್ಷತೆ ವಹಿಸುವರು. ಡಾ. ಜ್ಯೋತಿರ್ಲಿಂಗ ಹೊನಕಟ್ಟಿ, ಡಾ. ಹೇಮಾ ಸೊನೊಳ್ಳಿ, ಎಂ.ವೈ. ಮೆಣಸಿನಕಾಯಿ, ಹೇಮಾ ಕಾಜಗಾರ, ಶಿವಾನಂದ ತಲ್ಲೂರ ಹಾಗೂ ಇತರರು ಇದ್ದರು.

ವರದಿ: ಕಲ್ಲಪ್ಪ ಪಾಮನಾಯಿಕ್

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";