Live Stream

[ytplayer id=’22727′]

| Latest Version 8.0.1 |

Local NewsNational NewsState News

ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದ 13 ವರ್ಷದ ಹುಲಿ (ಶೌರ್ಯ) ವಿಧಿವಶ

ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದ 13 ವರ್ಷದ ಹುಲಿ (ಶೌರ್ಯ) ವಿಧಿವಶ

 

ಬೆಳಗಾವಿ: ತಾಲೂಕಿನ ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿದ್ದ 13 ವರ್ಷದ ಹುಲಿ (ಶೌರ್ಯ) ಹುಲಿಯ ರಕ್ತಕ್ಕೆ ಸಂಬಂಧಿಸಿದ ಮೈಕ್ಲೋಪ್ಲಾಸ್ಮಾ, ಬೆಬಿಸಿಯೋಸಿಸ್ ಕಾಯಿಲೆಯಿಂದ ವಿಧಿವಶ.

ಕಳೆದ 21 ದಿನಗಳಿಂದ ವೈದ್ಯರ ಉಪಚಾರದ ಮಧ್ಯೆಯೂ ಚಿಕಿತ್ಸೆ ಫಲಿಸದೇ ಶೌರ್ಯ ಸಾವು. ಮರಣೋತ್ತರ ಪರೀಕ್ಷೆ ಬಳಿಕ ಮೃಗಾಲಯದಲ್ಲೇ ಹುಲಿಯ ಅಂತ್ಯಕ್ರಿಯೆ ಮಾಡಲಾಯಿತು. ಡಿಎಫ್‌ಓ ಮರಿಯ ಕ್ರಿಷ್ಟು ರಾಜಾ, ಆರ್‌ಎಫ್ಓ ನಾಗರಾಜ್ ಬಾಳೆಹೊಸೂರ
ಮೃಗಾಲಯದ ವೈದ್ಯ ಡಾ. ನಾಗೇಶ ಹುಯಿಲಗೋಳ, ಡಾ. ಪ್ರಶಾಂತ ಕಾಂಬಳೆ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

2020 ರಲ್ಲಿ ಬನ್ನೇರುಘಟ್ಟದಿಂದ ಬೆಳಗಾವಿಗೆ ಬಂದ ಮೂರು ಹುಲಿಗಳಲ್ಲಿ ಗಂಡು ಹುಲಿ ಶೌರ್ಯ ಅನಾರೋಗ್ಯದಿಂದ ಸಾವನ್ನಪ್ಪಿದೆ. ಕಳೆದ 21 ದಿನಗಳಿಂದ ವನ್ಯಜೀವಿ ವೈದ್ಯ ತಜ್ಞರ ಸಲಹೆಯಂತೆ ಮೃಗಾಲಯದಲ್ಲೇ ಶೌರ್ಯನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಭಾನುವಾರ ಬೆಳಗ್ಗೆ 9.40ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾರಿಯಾ ಕ್ರಿಷ್ಟು ರಾಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ, ಕೇಂದ್ರ ಸರ್ಕಾರದ ನಿಯಮಾನುಸಾರ ಗೌರವಪೂರ್ವಕವಾಗಿ ಮೃಗಾಲಯದ ಆವರಣದಲ್ಲೇ ಶೌರ್ಯನ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ವೇಳೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಆಗಿರುವ ಮಾರಿಯಾ ಕ್ರಿಷ್ಟು ರಾಜಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ ಬಾಳೆಹೊಸುರ, ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ ಮೃಗಾಲಯದ ವೈದ್ಯ ಡಾ.ನಾಗೇಶ ಹುಯಿಲಗೋಳ, ಪಶುವೈದ್ಯಕೀಯ ಇಲಾಖೆಯ ವೈದ್ಯ ಡಾ. ಪ್ರಶಾಂತ ಕಾಂಬಳೆ ಮತ್ತು ಮೃಗಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

”ಕಳೆದ ವರ್ಷವೂ ಇದೇ ರೀತಿಯ ಆರೋಗ್ಯ ಸಮಸ್ಯೆಯಿಂದ ಶೌರ್ಯ ಬಳಲುತ್ತಿದ್ದ. ಆಗ ಚಿಕಿತ್ಸೆ ನೀಡಿದಾಗ ಗುಣಮುಖವಾಗಿದ್ದ. ಆದರೆ, ಈಗ ಮತ್ತೆ ಸಮಸ್ಯೆ ಕಾಣಿಸಿಕೊಂಡಿತ್ತು. 21 ದಿನ ನಿರಂತರವಾಗಿ ಮೃಗಾಲಯದ ತಜ್ಞ ವೈದ್ಯರು ಚಿಕಿತ್ಸೆ ನೀಡಿದರೂ, ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ” ಎಂದು ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ ಮಾಹಿತಿ ನೀಡಿದ್ದಾರೆ.

ನಮ್ಮನ್ನ ಅಗಲಿದ ಶೌರ್ಯನಿಗೆ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ಕಡೆಯಿಂದ ಭಾವಪೂರ್ಣ ಶ್ರದ್ಧಾಂಜಲಿ🙏🏻🙏🏻

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";