ಬೆಳಗಾವಿ: ನಗರದ ನಾಗನೂರು ರುದ್ರಾಕ್ಷಿ ಮಠ, ಶಿವಬಸವ ನಗರ ಬೆಳಗಾವಿಯಲ್ಲಿ, ಪೂಜ್ಯ ಶ್ರೀ ಡಾ. ಶಿವಬಸವ ಮಹಾಸ್ವಾಮಿಗಳವರ 135ನೇಯ ಜಯಂತಿ ಮಹೋತ್ಸವ ಜರುಗಲಿದೆ.
ಇದೆ ನ.26ರಂದು ಪೂಜ್ಯ ಶ್ರೀ ಡಾ. ಶಿವಬಸವ ಮಹಾಸ್ವಾಮಿಗಳವರ 135ನೇಯ ಜಯಂತಿ ಮಹೋತ್ಸವ ಕಾರ್ಯಕ್ರಮ ಜರುಗಲಿದ್ದು, ಇದರ ನಿಮಿತ್ಯ ಶರಣರ ಅನುಭಾವಾಮೃತ ಪ್ರವಚನ ಉದ್ಘಾಟನಾ ಸಮಾರಂಭ ಸಂಜೆ 6 ಗಂಟೆಗೆ ನಾಗನೂರು ರುದ್ರಾಕ್ಷಿ ಮಠ, ಶಿವಬಸವ ನಗರ ಬೆಳಗಾವಿಯಲ್ಲಿ, ಜರುಗಲಿದೆ.
ಈ ಕಾರ್ಯಕ್ರಮದ ದಿವ್ಯ ಸನಿಧ್ಯವನ್ನ, ಶ್ರೀ ಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾ ಸ್ವಾಮಿಗಳು (ಎಡೆಯೂರು ಶ್ರೀ ತೋಂಟದಾರ್ಯ ಸಂಸ್ಥಾನ ಮಠ ಡಂಬಳ-ಗದಗ) ವಹಿಸಿದ್ದು, ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು (ನಾಗನೂರು ಶ್ರೀ ರುದ್ರಾಕ್ಷಿಮಠ ಬೆಳಗಾವಿ) ನೇತೃತ್ವದಲ್ಲಿ, ಶ್ರೀ ಶಿವಮೂರ್ತಿ ಮಹಾಸ್ವಾಮಿಗಳು, ಶ್ರೀ ಬಸವಾನಂದ ಮಹಾಸ್ವಾಮಿಗಳು, ಶ್ರೀ ಬಸವರಾಜ ಶರಣರು, ದೇವರಾಜ ಗವಾಯಿಗಳು, ಹನುಮಂತಪ್ಪ, ತೋಂಟೆಂದ್ರ ಕುಮಾರ ಅವರ ಸಂಗೀತ ಕಾರ್ಯಕ್ರಮ ಜರುಗಲಿದೆ.
ಸರ್ವರೂ ಈ ಭಕ್ತಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪರಮ ಪೂಜ್ಯರ ಪಾವನ ಕಟಾಕ್ಷಕ್ಕೆ ಪತ್ರರಾಗಬೇಕು.