ಮೈಸೂರು: ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಮಂಟಿ ಹಾಡಿಯಲ್ಲಿ,2024 25 ನೇ ಸಾಲಿನ ವಿಶೇಷ ವಾರ್ಷಿಕ ಶಿಬಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ, ಉಚಿತ ಆರೋಗ್ಯ ಹಾಗೂ ದಂತ ತಪಾಸಣೆ ಮಾಡಿ, ಉಚಿತ ಔಷಧಿಗಳನ್ನು ವಿತರಿಸಲಾಯಿತು. ಜಾಗೃತಿ, ಜಾತ ಕಾರ್ಯಕ್ರಮಗಳು, ಬೀದಿ ನಾಟಕ , ಪಡುಕೋಟೆ ಕೀಳನ ಹಾಡಿಯ ಹೆಣ್ಣು ಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ಹಾಗೂ ಸಿರಿಧಾನ್ಯ ಪೌಡರ್ ಗಳನ್ನು ವಿತರಿಸಲಾಯಿತು.
ಶ್ರಮದಾನದ ಅಂಗವಾಗಿ ಗದ್ದಿಗೆಯ, ಹಾಡಿಯ ಸುತ್ತಮುತ್ತ ಹಾಗೂ ಲಕ್ಷ್ಮಣ ತೀರ್ಥ ನದಿಯನ್ನು ಸ್ವಚ್ಛಗೊಳಿಸಲಾಯಿತು. 50ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಅದರ ರಕ್ಷಣೆಯನ್ನು ಮಾಡಲಾಯಿತು. ಈ ಶಿಬಿರದ ಮತ್ತೊಂದು ವಿಶೇಷವೇನೆಂದರೆ ಸರ್ಕಾರಿ ಕನ್ನಡ ಶಾಲೆಗಳಾದ ಮಂಟಿಹಾಡಿ ಹಾಗೂ ಅಸ್ವಾಳು ಶಾಲೆಗಳಿಗೆ ಏಳು ದಿನಗಳಲ್ಲಿ ಬಣ್ಣ ಹಚ್ಚಿ ಹೊಸ ರೂಪವನ್ನು ನೀಡಲಾಯಿತು. ಇದಕ್ಕೆ ಚಿತ್ರ ಕಲಾವಿದರಾದ ಗುರುಲಿಂಗಯ್ಯ ರವರು ಸಹಕರಿಸಿದರು.
ಮಂಟಿ ಹಾಡಿ ಶಾಲೆಗೆ ಕಲಿಕಾ ಸಾಮಗ್ರಿಗಳು, ಬ್ಯಾಗುಗಳು, ಮೈಕ್ ಸೆಟ್, ಸ್ಮಾರ್ಟ್ ಟಿವಿ, ಅಕ್ಷರ ದಾಸೋಹ ಪರಿಕರಗಳು ಹಾಡಿಯ ಹೆಣ್ಣು ಮಕ್ಕಳಿಗೆ ಸೈಕಲ್ ವಿತರಿಸಲಾಯಿತು.
ಈ ಕಾರ್ಯಕ್ರಮಾದಲ್ಲಿ, ಮುಖ್ಯ ಅತಿಥಿಗಳಾಗಿ ತೇಜಸ್ವಿ, ಸೃಜನ ನಿರ್ದೇಶಕರು, ಮಜಾ ಟಾಕೀಸ್ ಹಾಗೂ ಸತೀಶ್ ಜವರೇಗೌಡ ಅಧ್ಯಕ್ಷರು ಯುವ ಬರಹಗಾರರ ಬಳಗ ಮಂಡ್ಯ ಹಾಗೂ ಕುಂಟೆ ಗೌಡ ಅಧ್ಯಕ್ಷರು ಸರ್ ಏಕಲ್ ವಿದ್ಯಾಲಯ ಸಚ್, ಕೆಎಸ್ ಗದ್ದಿಗೆ, ಚಂದ್ರು ಮಂಡ್ಯ ಸಂಸ್ಥಾಪನಾ ಕಾರ್ಯದರ್ಶಿಗಳು, ಅದಮ್ಯ ರಂಗಶಾಲೆ, ಮಕ್ಕಳು ಹಾಗೂ ಇತರರು ಉಪಸ್ಥಿತರಿದ್ದರು.