ಹುಕ್ಕೇರಿ:ತಾಲ್ಲೂಕಿನ ಎಂ. ಜಿ. ಆಯ್. ಆರ್. ಇ. ಡಿ., ಬೆಂಗಳೂರ, ಜಿಲ್ಲಾ ಪಂಚಾಯತ ಬೆಳಗಾವಿ, & ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಅವರುಗಳ ಸಂಯುಕ್ತ ಆಶ್ರಯದಲ್ಲಿ ಹುಕ್ಕೇರಿ ತಾಲ್ಲೂಕಿನ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯೆಯರುಗಳಿಗೆ 3 ದಿನಗಳ ಪುನಶ್ಚೇತನ ತರಬೇತಿಯನ್ನು ಜಿಲ್ಲಾ ಪಂಚಾಯತ ಸಂಪನ್ಮೂಲ ಕೇಂದ್ರ, ಮಚ್ಛೆ ಇಲ್ಲಿ ತರಬೇತಿಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ, ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ಪುನಃ ಚೇತನ ತರಬೇತಿ ಪ್ರಾರಂಭ ಕಸವಿಲೇವಾರಿಯನ್ನು ವೈಜ್ಞಾನಿಕವಾಗಿ ವಿಂಗಡಿಸಿ ನಿರ್ವಹಹನೆ ಮಾಡುವದು ಇಂದಿನ ಅವಶ್ಯಕತೆ ಆಗಿದೆ. ಮೂಲದಲ್ಲಿಯೇ ತ್ಯಾಜ್ಯವನ್ನು ಬೆರ್ಪಡಿಸುವದು ಪರಿಸರ ಸಂರಕ್ಷಣೆಗೆ ಮೂಲಾಧಾರ ಎಂದು ವಿಕ್ರಮ ಕುಲಕರ್ಣಿ, ವೀಕ್ಷಕರು, ಎಂ. ಜಿ. ಆಯ್. ಆರ್. ಇ. ಡಿ, ಬೆಂಗಳೂರ ಅವರು ಅಭಿಪ್ರಾಯ ವ್ಯೆಕ್ತ ಪಡಿಸಿದರು.
ಈ ಕಾರ್ಯಕ್ರಮದಲ್ಲಿ, ಸಿದ್ದಪ್ಪ ಹಿತ್ತಲಮನಿ, ತರಬೇತಿದಾರರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಾ. ಮ. ಗಡಗಲಿ, ಸಂಪನ್ಮೂಲ ವ್ಯೆಕ್ತಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.