ನಂದಗಡ: ದೇಶದಲ್ಲಿ ಅಮಾನುಷ ಹೇಯ ಕೃತ್ಯಗಳು ದಿನೇ ದಿನೇ ಹೆಚ್ಚುತ್ತಿರುವುದು ವಿಷಾದದ ಸಂಗತಿ. ಅಲ್ಲದೆ, ಬೇಲಿಯೇ ಎದ್ದು ಹೊಲ ಮೆಯ್ದರೆ ಏನು ಮಾಡಬೇಕು? ಹಾಗಾಗಿ, ಬುದ್ಧಿವಾದ ಹೇಳಬೇಕಾದ ಹಿರಿಯರೇ ಹೇಯ ಕೃತ್ಯಕ್ಕೆ ಕೈ ಹಾಕಿದರೆ, ಇದಕ್ಕಿಂತ ದುರಂತ ಇನ್ನೊಂದಿಲ್ಲ.
ಹೌದು, ಕಳೆದ ವರ್ಷ ಫೆಬ್ರವರಿ 24ರಂದು ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಇಂತದ್ದೊಂದು ಘಟನೆ ಸಂಭವಿಸಿದ್ದು, ನಾಲ್ಕು ವರ್ಷದ ಬಾಲಕಿಗೆ ಚಾಕಲೇಟ್ ಕೊಟ್ಟು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದು, ಆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ನಿಸಾರ್ ಅಹ್ಮದ್ ಫಕ್ರು ಸಾಬ್ ಚಾಪ್ಗಾವಿ (68 ವರ್ಷ ಕಾಕರ ಗಲ್ಲಿ ನಂದಗಡ ) ಗೆ ಕೇವಲ 20 ವರ್ಷ ಜೈಲು ಕಾರಾವಾಸ ಶಿಕ್ಷೆ ಮತ್ತು 10 ಸಾವಿರ ರೂಪಾಯಿಗಳ ದಂಡ ವಿಧಿಸಲಾಗಿದೆ.
ಈ ಘಟನೆ, ನಂದಗಡ ಪೊಲೀಸ್ ಠಾಣೆಯಲ್ಲಿ ದಿ. 27.02.24ರಂದು ದೂರು ನೀಡಲಾಗಿತ್ತು. ಈ ದೂರನ್ನು ನಂದಗಡ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಸ್ ಎಸ್. ಸಿ. ಪಾಟೀಲ್ ದಾಖಲಿಸಿ ತನಿಖೆ ನಡೆಸಿದ್ದರು.