ಯಮಕನಮರಡಿ: ದೇಶಾದ್ಯಂತ ಇಂದು 76ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ರಾಜ್ಯ ಜಿಲ್ಲೆಗಳಲ್ಲೂ ಸಡಗರದಿಂದ ಗಣರಾಜ್ಯೋತ್ಸವ ದಿನ ಆಚರಿಸಲಾಯಿತು.
ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದ ಸೌಹಾರ್ಗ ಸಹಕಾರಿ ಸಂಘದ ಧ್ವಜಾರೋಹಣವನ್ನು ಪಿಕೆಪಿಎಸ್ ಅಧ್ಯಕ್ಷ ದಯಾನಂದ್ ಪಾಟೀಲ್
ಹಾಗೂ ದಡ್ಡಿ ಹಾಲು ಉತ್ಪಾದಕರ ಸಹಕಾರಿ ಸಂಘ ಧ್ವಜಾರೋಹಣವನ್ನು ನಿರ್ದೇಶಕರಾದ ನಾಗೋಜಿ ದೇಸಾಯಿ ಅವರು ಧ್ವಜಾರೋಹಣ ನೆರವೇರಿಸಿದ.
ಇದಕ್ಕೂ ಮೊದಲು ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಹಾಗೂ ದೇಶಭಕ್ತಿ ಗೀತೆ ಅನ್ನುವ ಮುಖಾಂತರ
ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಷ್ಣು ರೇಡೇಕರ,ಪ್ರಕಾಶ್ ಸಾಲಗುಡೆ, ಸೇರಿದಂತೆ ಸರ್ವ ನಿರ್ದೇಶಕರು, ಹಾಗೂ ಮುಖ್ಯ ಕಾರ್ಯನಿರ್ವಾಹಕರು ವಿಶ್ವನಾಥ ಪುರಾಣಿಕಮಠ, ಮತ್ತು ದೀಪಾಲಿ ರಾ.ರೇಡೇಕರ ಸೇರಿದಂತೆ ಗ್ರಾಮದ ಗಣ್ಯ ವ್ಯಕ್ತಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ:ಕಲ್ಲಪ್ಪ ಪಾಮನಾಯಿಕ್