ರಾಷ್ಟ್ರೀಯ ಬಸವದಳ ಮತ್ತು ಬಸವ ಕಾಯಕ ಜೀವಿಗಳ ಸಂಘ ಬೆಳಗಾವಿ ಇವರ ಸಯುಕ್ತ ಆಶ್ರಯದಲ್ಲಿ ಬೈಲಹೊಂಗಲ ತಾಲೂಕಿನ ಅಣ್ಣಿ ಕೇರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 130 ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬಸವ ಕಾಯಕ ಜೀವಿಗಳ ಸಂಘದ ಅಧ್ಯಕ್ಷರಾದ ಸೂರ್ಯಕಾಂತ್ ಭಾoವಿ , ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾಧ್ಯಕ್ಷರಾದ ಮಹಾಂತೇಶ್ ಗುಡಸ್, ರಾಷ್ಟ್ರೀಯ ಬಸವದಳದ ಉಪಾಧ್ಯಕ್ಷರಾದ ಎಸ್ ಎಸ್ ಪಾಟೀಲ್, ಕಾರ್ಯದರ್ಶಿಗಳಾದ ಆನಂದ್ ಗುಡಸ್, ಬಸವ ಕಾಯಕ ಜೀವಿಗಳ ಸಂಘದ ಕಾರ್ಯದರ್ಶಿಯಾದ ಕೆ ಶರಣಪ್ರಸಾದ್, ನೇಸರ್ಗಿಯ ಗಣ್ಯ ವ್ಯಾಪಾರಸ್ಥರಾದ ಸಲೀಂ ನದಾಫ್, ಬಸವ ಕಾಯಕ ಜೀವಿಗಳ ಸಂಘದ ಸದಸ್ಯರಾದ ವೀರೇಶ್ ಹೊಳವಿ, ಶ್ರೀರಾಜ್ ಹಾವಣ್ಣವರ್, ಶಾಲೆಯ ಮುಖ್ಯೋಪಾಧ್ಯರಾದ ಜಿಎಫ್ ಕೋಲ್ಕಾರ್, ಗ್ರಾಮದ ಹಿರಿಯರಾದ ಜಗದೀಶ್ ಪಾಟೀಲ್, ಮುದುಕಪ್ಪ ಅಲ್ಲಪ್ಪನವರ್ ಹಾಗೂ ಶಾಲೆಯ ಶಿಕ್ಷಕ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಮವಸ್ತ್ರದ ದಾಸೋಹಿಗಳಾದ ಭಾ೦ವಿ ಕುಟುಂಬದ ಎಲ್ಲಾ ಸದಸ್ಯರಿಗೂ ತುಂಬು ಹೃದಯದ ಧನ್ಯವಾದಗಳು.