Live Stream

[ytplayer id=’22727′]

| Latest Version 8.0.1 |

Local News

ಅಮ್ಮಣಗಿ ದೇಗುಲದ ಅರ್ಚಕರ ಬದಲಾವಣೆ

ಅಮ್ಮಣಗಿ ದೇಗುಲದ ಅರ್ಚಕರ ಬದಲಾವಣೆ

ಹುಕ್ಕೇರಿ: ತಾಲೂಕಿನ ಅಮ್ಮಣಗಿಯ ಶ್ರೀ ಮಲ್ಲಯ್ಯ ದೇವಸ್ಥಾನ ಪೂಜೆ ಸಂಬಂಧ ಮುಜರಾಯಿ ದೇವಸ್ಥಾನದ ವಿಶ್ವಸ್ಥ ಮಂಡಳಿ ಮತ್ತು ಆರ್ಚಕರ ಮಧ್ಯೆ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ಅರ್ಚಕರನ್ನು ಬದಲಾಯಿಸಿ ಇಲಾಖೆಯಿಂದ ಪೂಜೆ ಸೇರಿದಂತೆ ಎಲ್ಲ ಧಾರ್ಮಿಕ ಕಾರ್ಯಕ್ರಮ ಗಳನ್ನು ನೆರವೇರಿಸುತ್ತಿರುವುದಾಗಿ ತಹಸೀಲ್ದಾರ್ ಮಂಜುಳಾ ನಾಯಕ ತಿಳಿಸಿದರು.

ಅವರು ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ‘ದೇವಸ್ಥಾನದ ವಿಶ್ವಸ್ಥ ಮಂಡಳಿ ಮತ್ತು ಆರ್ಚಕರ ಮಧ್ಯೆ ನಡೆದ ವಿವಾದದಲ್ಲಿ ಸರಕಾರ ಮಧ್ಯ ಪ್ರವೇಶಿಸಿ, ವಿಶ್ವಸ್ಥ ಮಂಡಳಿಯನ್ನು ರದ್ದುಗೊಳಿಸಿದೆ. ಮುಜರಾಯಿ ಇಲಾಖೆಗೆ ಈ ದೇವಸ್ಥಾನದ ಆಡಳಿತ ಒಪ್ಪಿಸಿದ್ದು, ಕಳೆದ ಜನವರಿಯಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿಸರಕಾರದ ಖಜಾನೆಗೆ 6 ಲಕ್ಷ ರೂ. ಆದಾಯ ಬಂದಿದೆ. ಅಂದಿನಿಂದ ಇಲ್ಲಿಯವರೆಗೆ 14 ಲಕ್ಷ ರೂ. ಆದಾಯ ದೇವಸ್ಥಾನದಿಂದ ಬಂದಿದೆ. ಇದಕ್ಕೂ ಮೊದಲು ಅರ್ಚಕರು ಪ್ರತಿ ವರ್ಷ1 ರಿಂದ 1.50 ಲಕ್ಷ ರೂ. ಆದಾಯವನ್ನಷ್ಟೇ ಸರಕಾರಕ್ಕೆ ತೋರಿಸುತ್ತಿದ್ದರು. ಭಕ್ತರೊಂ ದಿಗೆ ಅಸಹ ಕಾರ, ಅಸಭ್ಯ ವರ್ತನೆಯಿಂದ ಅರ್ಚಕರು ಭಕ್ತರು ಹಾಗೂ ಜಾತ್ರಾ ಸಮಿತಿಯವರಿಗೆ ಬೇಸರ ತಂದಿದ್ದರು. ಬುದ್ದಿವಾದ ಹೇಳಿ ದರೂ ಸರಿಪಡಿಸಿಕೊಳ್ಳದೆ ದುರ್ವತ್ರನೆ ಮುಂದುವರಿಸಿದ್ದರಿಂದ ಸಮಿತಿಯವರು ತಕ್ಷಣ ಅರ್ಚಕರ ಬದಲಾವಣೆಗೆ ಆಗ್ರಹಿಸಿ ಜಿಲ್ಲಾಡಳಿತದ ಮೊರೆ ಹೋಗಿದ್ದರು. ಸಭೆ ಕರೆದು ಮಾತಾಡಿದಾಗ ಅರ್ಚಕರು ಸರಿ ಯಾಗಿ ಸ್ಪಂದಿಸದ ಕಾರಣ ಸ್ವಯಂಪ್ರೇರಿತ ವಾಗಿ ಅರ್ಚಕರನ್ನು ನೇಮಿಸಿಕೊಂಡು ಶ್ರಾವಣ ಮಾಸದ ಧಾರ್ಮಿಕ ಕಾರ್ಯ ಕ್ರಮಗಳನ್ನು ನಡೆಸಲಾಗುತ್ತಿದೆ. ಶೀಘ್ರ ಸರಕಾರಿ ನಿಯಮಾವಳಿ ಪ್ರಕಾರ ಅರ್ಚಕರನ್ನು ನೇಮಿಸಿಕೊಂಡು ಪಾರ ದರ್ಶಕವಾಗಿ ದೇವಸ್ಥಾನ ಆಡಳಿತದ ಜತೆಗೆ ಅಭಿವೃದ್ಧಿ ಕೈಗೊಳ್ಳಲಾಗುವುದು,” ಎಂದು ಅವರು ತಿಳಿಸಿದರು.ಗ್ರೇಡ್- 2 ತಹಸೀ ಲ್ದಾರ್ ಪ್ರಕಾಶ ಕಲ್ಲೋಳಿ, ಶಿರಸ್ತೇದಾರ.                         ಎ ನ್.ಆರ್.ಪಾಟೀಲಇದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";