ಕಕಮರಿ: ಗ್ರಾಮದ ಶ್ರೀ ಸದ್ಗುರು ರಾಯಲಿಂಗೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜ್ ಮತ್ತು ಮಾತೋಶ್ರೀ ನೀಲಮ್ಮಾ ಪ್ರಥಮ ದರ್ಜೆ ಕಾಲೇಜಿನ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಉದ್ಘಾಟನೆ ಹಾಗೂ ಪಿಯುಸಿ ಮತ್ತು ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಆ.21ರಂದು ಬೆಳಿಗ್ಗೆ 9ಕ್ಕೆ ಕಾಲೇಜಿನ ಸಭಾಭವನದಲ್ಲಿ ಜರುಗಲಿದೆ.
ಸಾನ್ನಿಧ್ಯವನ್ನು ಪೀಠಾಧ್ಯಕ್ಷ ಸದ್ಗುರು ರಾಯಲಿಂಗೇಶ್ವರ ಸಂಸ್ಥಾನಮಠ ಕಕಮರಿ ಸದ್ಗುರು ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ ವಹಿಸಿಕೊಳ್ಳಲಿದ್ದಾರೆ. ಅಧ್ಯಕ್ಷತೆ ಗಿರೀಶ ಬಸರಗಿ ವಹಿಸಿಕೊಳ್ಳಲಿದ್ದು, ಉದ್ಘಾಟಕರಾಗಿ ದೇವರ ನಿಂಬರಗಿ ಮಹೇಶ ಗುಮಾಸ್ತೆ ಹಾಗೂ ಅಥಣಿ ಪ್ರಾಚಾರ್ಯ ಜೆಇ ಸಂ.ಪ.ಪೂ ಕಾಲೇಜು ಮಹಾಲಿಂಗ ಮೇತ್ರಿ ಆಗಮಿಸುವರು. ಉಪನ್ಯಾಸ ಡಾ.ಸ್ವಪ್ಪಾ ಅನಿಗೋಳ, ಅತಿಥಿ ಗಿರೀಶ ಶಿರೋಳ, ರಾಜು ಶಿಂಗೆ, ಪ್ರಾಚಾರ್ಯ ಮಾತೋಶ್ರೀ ನೀಲಮ್ಮಾ ಪ್ರಥಮ ದರ್ಜೆ ಕಾಲೇಜು ಶಿವಗುರು ಬಸರಗಿ, ಪ್ರಾಚಾರ್ಯ ಸದ್ಗುರು ರಾಯಲಿಂಗೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜು. ಸಂಗಮೇಶ ಬಸರಗಿ ಆಗಮಿಸುವರೆಂದು ಪ್ರಾಚಾರ್ಯ ಸಂಗಮೇಶ ಬಸರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.