ಫೇಮಸ್ ಆಗುವ ಆಸೆಯಲ್ಲಿ, ರೀಲ್ಸ್ ಮಾಡೋ ಭರದಲ್ಲಿ, ಜನರು ಜೀವಕ್ಕೆ ಅಪಾಯ ತರುವಂತಹ ಕೆಲಸ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಂತಹ ಅನೇಕ ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ. ಅದ್ರಲ್ಲಿ ಕೆಲವರು ರೀಲ್ಸ್ ಮಾಡೋವ ಆತುರದಲ್ಲಿ ಸಾವನ್ನಪ್ಪಿದ್ದಾರೆ.
ಈಗ ಮಹಿಳೆಯೊಬ್ಬಳ ವಿಡಿಯೋ ಇದೇ ವಿಷ್ಯಕ್ಕೆ ಚರ್ಚೆಗೆ ಬಂದಿದೆ.ಮಳೆಯಲ್ಲಿ, ಮಧ್ಯರಸ್ತೆಯಲ್ಲಿ ಮಹಿಳೆ ರೀಲ್ಸ್ ಮಾಡ್ತಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಮಹಿಳೆ ಕಾರಿನ ಮೇಲಿಂದ ಕೆಳಗೆ ಜಿಗಿಯುತ್ತಾಳೆ. ನಂತರ ಡಾನ್ಸ್ ಮಾಡಲು ಶುರು ಮಾಡ್ತಾಳೆ. ದಾರಿ ಮಧ್ಯದಲ್ಲಿ ಕಾರ್ ನಿಲ್ಲಿಸಿ ಮಹಿಳೆ ಡಾನ್ಸ್ ಮಾಡ್ತಿದ್ದರೆ ಪಕ್ಕದಿಂದ ವೇಗವಾಗಿ ವಾಹನ ಹೋಗ್ತಿರೋದನ್ನು ನೋಡ್ಬಹುದು.ಇದು ಉತ್ತರ ಪ್ರದೇಶದ ವಿಡಿಯೋ ಎನ್ನಲಾಗಿದೆ.
ವಿಡಿಯೋ ವೈರಲ್ ಆಗ್ತಿದ್ದಂತೆ ಯುಪಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಕಾರ್ ಸಂಖ್ಯೆ, ಸಮಯ, ದಿನಾಂಕ ಸೇರಿದಂತೆ ಅನೇಕ ಮಾಹಿತಿಯನ್ನು ಬಳಕೆದಾರರಿಂದ ಕೇಳಿದ್ದಾರೆ. ಇದು ಅಸಂಬದ್ಧವಾಗಿದ್ದು, ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಳಕೆದಾರರು ಆಗ್ರಹಿಸಿದ್ದಾರೆ.