Live Stream

[ytplayer id=’22727′]

| Latest Version 8.0.1 |

State News

ಅಸ್ಪ್ರಶ್ಯತೆ ನಿವಾರಣೆಗೆ ಶ್ರಮಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು: ಶ್ರೀ ಅರುಣಾನಂದ ತೀರ್ಥ ಮಹಾಸ್ವಾಮೀಜಿ

ಅಸ್ಪ್ರಶ್ಯತೆ ನಿವಾರಣೆಗೆ ಶ್ರಮಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು: ಶ್ರೀ ಅರುಣಾನಂದ ತೀರ್ಥ ಮಹಾಸ್ವಾಮೀಜಿ

 

ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ-2024

ಅಸ್ಪ್ರಶ್ಯತೆ ನಿವಾರಣೆಗೆ ಶ್ರಮಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು: ಶ್ರೀ ಅರುಣಾನಂದ ತೀರ್ಥ ಮಹಾಸ್ವಾಮೀಜಿ

ಬೆಳಗಾವಿ, ಆ.25(ಕರ್ನಾಟಕ ವಾರ್ತೆ): ಅಸ್ಪೃಶ್ಯತೆ ನಿವಾರಣೆ ಮತ್ತು ಸಮಾಜದಲ್ಲಿನ ತಾರತಮ್ಯಗಳ ಹೋಗಲಾಡಿಸಿ, ಸಮಾಜ ಸುಧಾರಣೆಗೆ ನಿರಂತರ ಶ್ರಮಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ನಿಪ್ಪಾಣಿ ಮಹಾಕಾಳಿ ಮಹಾಸಂಸ್ಥಾನದ ಶ್ರೀ ಅರುಣಾನಂದ ತೀರ್ಥ ಮಹಾ ಸ್ವಾಮೀಜಿ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ

ನಗರದ ಕುಮಾರಗಂಧರ್ವ ಕಲಾ ಮಂದಿರದಲ್ಲಿ ರವಿವಾರ (ಆ.25) ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾರಾಯಣ ಗುರುಗಳದ್ದು ಅಪ್ರತಿಮ ವ್ಯಕ್ತಿತ್ವ ಅವರು ಸಮಾಜ ಸುಧಾರಣೆಯ ಮೂಲಕ ಸಮಾಜದಲ್ಲಿದ್ದ ಅಸ್ಪೃಶ್ಯತೆ ನಿವಾರಣೆಗೆ ಪಣತೊಟ್ಟು ನಿಂತಿದ್ದರು. ಮಹಿಳೆಯರ ಮೇಲಿನ ಶೋಷಣೆಯ ಪದ್ದತಿಯನ್ನು ವಿರೋಧಿಸಿದವರು. ಯಾವುದೇ ಲೋಪ ದೋಷಗಳು ಇರದ ಜನಪರ ಕಾಳಜಿ ಅವರಿಗಿತ್ತು ಎಂದು ಹೇಳಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆ ಕುರಿತು ಉಪನ್ಯಾಸ ನೀಡಿದ ಹುಬ್ಬಳ್ಳಿ ಜಿ.ಜಿ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರಾದ ಮಲ್ಲಮ್ಮ ಯಾಟಗಲ್ ಅವರ್ ಅವರು ದೇವರ ನಾಡು ಕೇರಳದಲ್ಲಿ ಜನಿಸಿದ ನಾರಾಯಣ ಗುರುಗಳು ಯಾವುದೇ ಒಂದು ನಿರ್ದಿಷ್ಟ ಸಮುದಾಯದ ಪರವಾಗಿ ಹೋರಾಟ ಮಾಡದೆ ಇಡೀ ಸಮಾಜದಲ್ಲಿರುವ ಸಂಕುಚಿತ ಮನೋಭಾವದ ವಿರುದ್ಧ ಹೋರಾಡಿದ್ದರು ಎಂದು ತಿಳಿಸಿದರು.

ಜಾತಿಭೇದ, ಅಸ್ಪ್ರಶ್ಯತೆ ತಾಂಡವಾಡುತ್ತಿದ್ದ ಕಾಲದಲ್ಲಿ ನಾರಾಯಣ ಗುರುಗಳು ಅವತಾರ ಪುರುಷರಂತೆ ಜನಿಸಿ ಸಮಾಜದಲ್ಲಿ ಮೇಲು-ಕೀಳು ಎಂಬ ಆಲೋಚನೆಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ ಎಂದು ನಾರಾಯಣ ಗುರುಗಳ ಚಿಂತನೆಗಳ ಕುರಿತು ಉಪನ್ಯಾಸ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ವಿದ್ಯಾವತಿ ಭಜಂತ್ರಿ ಹಾಗೂ ಸಮಾಜದ ಮುಖಂಡರಾದ ಸುಧೀರ್ ಕುಮಾರ್ ಸಾಲ್ಯಾನ್, ವಿಜಯ ಸಾಲ್ಯಾನ್, ಬಸವರಾಜ ಈಳಿಗ, ಸುಜನ್ ಕುಮಾರ್, ಸುನಿಲ್ ಕುಮಾರ್ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ;

ಕಾರ್ಯಕ್ರಮದ ಕೊನೆಯಲ್ಲಿ ಎಸ್ಎಸ್ಎಲ್.ಸಿ ಪರೀಕ್ಷೆಯಲ್ಲಿ ಶೇ. 94 ರಷ್ಟು ಅಂಕ ಪಡೆದ ಪ್ರಜನ್ ಪೂಜಾರಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 91 ರಷ್ಟು ಅಂಕ ಪಡೆದ ತ್ರಿಶಾ ಶೇಖರ ಪೂಜಾರಿ ಮತ್ತು ವಿಜ್ಞಾನ ವಿಭಾಗದಲ್ಲಿ ಶೇ. 92 ರಷ್ಟು ಅಂಕ ಪಡೆದ ಶ್ರೇಯಸ್ ಪ್ರಭಾಕರ ಪೂಜಾರಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿವಿಧ ಮಹಿಳಾ ಮಂಡಳಗಳ ಸದಸ್ಯೆಯರು, ಬಿಲ್ಲವರ ಅಸೋಸಿಯೇಷನ್ ಸದಸ್ಯರು, ಬಿಲ್ಲವರ ಅಸೋಸಿಯೇಷನ್ ಯುವಘ ಟಕಗಳ ಪದಾಧಿಕಾರಿಗಳು ಹಾಜರಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";