ಬೆಳಗಾವಿ: ನಗರದ ಅನ್ನಪೂರ್ಣೇಶ್ವರಿ ಥಾಲಿ ಕಟ್ಟಡದ ಅಯೋಧ್ಯಾ ಸಭಾಂಗಣದಲ್ಲಿ, ಕೃಷ್ಣ ವೇಷ ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮ ಜರುಗಿತು.
ಹೌದು, ಪ್ರತಿಷ್ಠಿತ ಹಾಗೂ ರಾಜ್ಯದ ನಂಬರ್ ೧ ದಿನಪತ್ರಿಕೆಯಾದ ವಿಜಯವಾಣಿ, ಕಿಂಗ್ಸ್ ಐಸ್ ಕ್ರೀಮ್, ಶ್ರೀ ಸಾಯಿ ಪ್ರಸನ್ನ ಫ್ಯಾಶನ್, ಅನ್ನಪೂರ್ಣೇಶ್ವರಿ ಬನಾನಾ ಲೀಫ್ ಸರ್ವಿಸಿಂಗ್ ಅವರ ಸಹಯೋಗದಲ್ಲಿ ಪುಟಾಣಿಗಳ ಕೃಷ್ಣ ವೇಷ ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಅಥಿತಿಗಳಾಗಿ ಆಗಮಿಸಿದ ಸೌಮ್ಯಾ ಬಾಪಟ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರು ಬೆಳಗಾವಿ ಇವರು ಮಾತನಾಡಿ, ಕೃಷ್ಣನನ್ನು ದೇವರಾಗಿ ನೋಡದೆಯೇ ಒಬ್ಬ ತತ್ವಜ್ಞಾನಿಯಾಗಿ, ವ್ಯಕ್ತಿಯಾಗಿ ನೋಡಿದಾಗ ಅವರಿಂದ ಕಲಿಯುವ ಬಹಳಷ್ಟು ಅವಕಾಶಗಳು ಸಿಗುತ್ತವೆ ಎಂದು ಹೇಳಿದರು.
ಈ ವೇಳೆ, ಸೌಮ್ಯಾ ಬಾಪಟ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರು ಬೆಳಗಾವಿ, ಶ್ರೀ ಸಾಯಿ ಫ್ಯಾಷನ್ಸ್ ಮಾಲೀಕರಾದ ಶ್ರೀ ಹರಿಪ್ರಸಾದ್ ಬಾಡಗುಂದಿ, ಅನ್ನಪೂರ್ಣೇಶ್ವರಿ ಬನಾನಾ ಲೀಫ್ ಸರ್ವಿಸಿಂಗ್ ಮುಖ್ಯಸ್ಥರಾದ ಶ್ರೀ ಗೌಡೇಶ ಪಾಟೀಲ್ ಅವರು, ವಿಜಯ ವಾಣಿ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾದ ಶ್ರೀ ಮಹೇಶ ವಿಜಾಪುರೆ, ನಮ್ಮೂರ ಬಾನುಲಿಯ ರೇಡಿಯೋ ಜಾಕಿಗಳಾದ ಶ್ರೀ ಚೇತನ್ ಕುಲಕರ್ಣಿ ಹಾಗೂ ಕುಮಾರಿ ಮೀರಾ ಬಿ.ಕೆ ರವರು ಹಾಗೂ ವಿಜಯವಾಣಿ ಬೆಳಗಾವಿಯ ಎಲ್ಲ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.