ನಿಯಮೋಲ್ಲಂಘನೆ ಮಾಡುವ ನಾಗರಿಕರ ನಡುವೆ, ನಿಯಮ ಪಾಲನೆ ಮಾಡುತ್ತಿರುವ ಜಾನುವಾರುಗಳು…!
ಬೆಳಗಾವಿ: ಇಲ್ಲಿನ ಶ್ರೀನಗರದಲ್ಲಿ,ರುವ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಮಹಾವಿದ್ಯಾಲಯದ ಎದುರಿಗೆ ಒಂದು ಅದ್ಭುತ ದೃಶ್ಯ ಕಂಡುಬಂದಿದೆ.
ಹೌದು, ಶ್ರೀನಗರದಲ್ಲಿ,ರುವ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಮಹಾವಿದ್ಯಾಲಯದ ಎದುರಿನ ರಸ್ತೆಯ ಮೇಲೆ ಇಂದು ಮುಂಜಾನೆ ಅದ್ಭುತ ಹಾಗೂ ಮನಮೋಹಕ ದೃಶ್ಯವೊಂದು ಕಂಡುಬಂದಿದ್ದು, ಇಲ್ಲಿನ ರಸ್ತೆಯ ಡಬಲ್ ವೈಟ್ ಲೈನ್ ಮಧ್ಯದಲ್ಲಿ, ಅತೀ ಶಿಸ್ತಿನ ಸಿಪಾಯಿಯಗಳ ಹಾಗೆ, ಹಸು ಹಾಗೂ ದನ-ಕರುಗಳು ಯಾರಿಗೂ ತೊಂದರೆ ಕೊಡದ ರೀತಿಯಲ್ಲಿ, ಸರದಿ ಹಿಡಿದು ಹೋಗುತ್ತಿರುವ ದೃಶ್ಯ ಕಣ್ಮನಗಳನ್ನ ತಣಿಸುತ್ತದೆ.
ನಿಯಮೋಲ್ಲಂಘನೆ ಮಾಡುವ ನಾಗರಿಕರ ನಡುವೆ, ನಿಯಮ ಪಾಲನೆ ಮಾಡುತ್ತಿರುವ ಜಾನುವಾರುಗಳ ಶಿಸ್ತಿಗೆ ನಮ್ಮದೊಂದು ಸಲಾಂ. ನಿಸರ್ಗದಲ್ಲಿರುವ ಅನೇಕ ವಿಷಯಗಳನ್ನು ನಾವು ನೋಡಿ ಕಲಿಯಬೇಕಾಗಿದೆ. ನಮ್ಮಲ್ಲಿ ನಾವು ಇಂತಹ ಘಟನೆಗಳಿಂದ ಶಿಸ್ತು ರೂಢಿಸಿಕೊಳ್ಳಬೇಕು.