Live Stream

[ytplayer id=’22727′]

| Latest Version 8.0.1 |

Local News

ಮಕ್ಕಳಿಗೆ ಬಸವ ತತ್ವಗಳ ಅರಿವಾದರೆ ಮಾತ್ರ ಸಮಾಜ ಸುಧಾರಣೆ ಸಾಧ್ಯ; ಕಿರಣ ಚೌಗಲಾ .

ಮಕ್ಕಳಿಗೆ ಬಸವ ತತ್ವಗಳ ಅರಿವಾದರೆ ಮಾತ್ರ ಸಮಾಜ ಸುಧಾರಣೆ ಸಾಧ್ಯ; ಕಿರಣ ಚೌಗಲಾ .

ಮಕ್ಕಳಿಗೆ ಬಸವ ತತ್ವಗಳ ಅರಿವಾದರೆ ಮಾತ್ರ ಸಮಾಜ ಸುಧಾರಣೆ ಸಾಧ್ಯ; ಕಿರಣ ಚೌಗಲಾ

ಬೆಳಗಾವಿ: ನಗರದ ಮಹಾಂತ ಭವನದಲ್ಲಿ, ಜಾಗತಿಕ ಲಿಂಗಾಯತ ಮಹಾಸಭಾ ಏರ್ಪಡಿಸಿದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ಕೆ.ಪಿ.ಎಸ ಪಬ್ಲಿಕ್ ಶಾಲೆ ಯರಗಟ್ಟಿಯ ಪ್ರಭಾರಿ ಪ್ರಾಚಾರ್ಯರಾದ, ಶರಣ ಕಿರಣ ಚೌಗಲಾ ಅವರು ಉಪನ್ಯಾಸ ನೀಡಿ ಮಾತನಾಡಿದರು.

ಸೋಮವಾರ ನಡೆದ ಜಾಗತಿಕ ಲಿಂಗಾಯತ ಮಹಾಸಭಾ, ಮಾಸಿಕ ಅನುಭಾವ ಗೋಷ್ಠಿಯಲ್ಲಿ ಸಮಾರಂಭದ ಅಧ್ಯಕ್ಷತೆವಹಿಸಿದ ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶರಣ ಬಸವರಾಜ ರೊಟ್ಟಿ ಅವರು ಮಾತನಾಡಿ ಇತ್ತೀಚೆಗೆ ಬಸವಾದಿ ಶರಣರ ತತ್ವ ಸಿದ್ದಾಂತಗಳನ್ನು ತಿರುಚಿ ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡುತ್ತಿರುವವರ ಬಗ್ಗೆ ಬಸವಾಭಿಮಾನಿಗಳು ಎಚ್ಚರದಿಂದ ಇರಬೇಕೆಂದು ಹೇಳಿದರು.

ನಂತರ ಕೆ.ಪಿ.ಎಸ ಪಬ್ಲಿಕ್ ಶಾಲೆ ಯರಗಟ್ಟಿಯ ಪ್ರಭಾರಿ ಪ್ರಾಚಾರ್ಯರಾದ, ಶರಣ ಕಿರಣ ಚೌಗಲಾ ಅವರು ಬಸವಣ್ಣ ಹಾಗೂ ಸಮಾಜ ಸುಧಾರಣೆ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡಿ, ಇಂತಹ ಸಭೆಗಳಲ್ಲಿ ಯುವಕರು ಭಾಗವಹಿಸಬೇಕು. ಆದರೆ, ಹಿರಿಯರೇ ಭಾಗಿಯಾಗಿಯಾಗಿದ್ದನ್ನು ನೋಡಿ ವಿಷಾದವೆನಿಸುತ್ತದೆ. ಒಂಬೈನೂರು ವರ್ಷಗಳ ಹಿಂದೆಯೇ ಬಸವಣ್ಣನವರು, ಸಮಾಜ ಸುಧಾರಣಾ ತತ್ವಗಳನ್ನ ತಿಳಿಸಿದ್ದರು. ಬಸವಣ್ಣನವರು ಮೂರ್ತಿ ಪೂಜೆ ಹಾಗೂ ಡಂಬಾಚರಣೆಗಳನ್ನ ಖಂಡಿಸಿದ್ದರು. ಆದರೆ ನಾವು ಅವರನ್ನು ಸಹ ದೇವರನ್ನಾಗಿಸಿ ಪೂಜಿಸಲು ಶುರು ಮಾಡಿದ್ದೇವೆ. ಮಕ್ಕಳಿಗೆ ಬಸವ ತತ್ವಗಳ ಅರಿವಾದರೆ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ, ಶರಣ ಮುರೆಗಪ್ಪ ಬಾಳಿ ಸರ್ವರನ್ನು ಸ್ವಾಗತಿಸಿದರು. ಪ್ರಸಾದ ದಾಸೋಹಿ ಶರಣ ಎಸ್.ಜಿ.ಸಿದ್ನಾಳ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಶರಣ ಡಾ. ಅಡಿವೆಪ್ಪ ಇಟಗಿ ಕಾರ್ಯಕ್ರಮ ನಿರೂಪಿಸಿದರು.ಶರಣೆ ಶೋಭಾ ಶಿವಳ್ಳಿ ಶರಣು ಸಮರ್ಪಣೆ ಮಾಡಿದರು.

ಈ ವೇಳೆ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಎಂ ಬೂದಿಹಾಳ, ಕೆ.ಪಿ.ಎಸ ಪಬ್ಲಿಕ್ ಶಾಲೆ ಯರಗಟ್ಟಿಯ ಪ್ರಭಾರಿ ಪ್ರಾಚಾರ್ಯರಾದ, ಶರಣ ಕಿರಣ ಚೌಗಲಾ, ಉಪಾಧ್ಯಕ್ಷ ಮೋಹನ ಗುಂಡ್ಲೂರ, ಸದಾನಂದ ಬಶೆಟ್ಟಿ, ಅರವಿಂದ ಪರುಶೆಟ್ಟಿ ,ಮಹಿಳಾ ಜಿಲ್ಲಾ ಕಾರ್ಯದರ್ಶಿ ಸುಜಾತಾ ಮತ್ತಿಕಟ್ಟಿ, ಕೆಂಪಣ್ಣ ರಾಮಾಪುರಿ, ಅನುಸೂಯಾ ಬಶೆಟ್ಟಿ, ಮಹಾನಂದಾ ಪರೂಶೆಟ್ಟಿ, ಶರಣ ಮತ್ತಿಕೊಪ್ಪ, ಶರಣ ಮಿಂಡೊಳ್ಳಿ ಪಿ. ಆಯ್ ಚಿಕಲಿ, ಶರಣೆ ಮಹಾದೇವಿ ಬೂದಿಹಾಳ, ಹಾಗೂ ವಿವಿಧ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";