ಮಕ್ಕಳ ಸೇವೆಯಲ್ಲಿ ದೇವರನ್ನು ಕಾಣಿರಿ
ಬೆಳಗಾವಿ: ಮಕ್ಕಳೆಂದರೆ ದೇವರ ಸಮಾನ. ಏನನ್ನು ಕೊಟ್ಟರೂ ಸ್ವೀಕರಿಸುತ್ತಾರೆ. ದೇವರಂತೆಯೇ ಅವರ ಮನಸ್ಸಿನಲ್ಲಿ ಕಪಟವಿರದು. ಹಾಗಾಗಿ ಮುಗ್ಧ ಮಕ್ಕಳಲ್ಲಿಯೇ ದೇವರನ್ನು ಪ್ರತ್ಯಕ್ಷ ಕಾಣಬೇಕು. ಅವರ ಬೇಕು ಬೇಡಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಉತ್ತಮ ಸಂಸ್ಕಾರ, ಗುಣ, ವಿದ್ಯೆಯನ್ನು ಅವರಲ್ಲಿ ಈಗಲೇ ತುಂಬಿ ಅವರ ರ್ವಾಂಗೀಣ ಬೆಳವಣಿಗೆಯಲ್ಲಿ ನಮ್ಮ ಕೈಲಾದ ಮಟ್ಟಿಗೆ ತೊಡಗಿಕೊಳ್ಳುವುದರ ಮೂಲಕ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಬೇಕು ಎಂದು ನಿವೃತ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯೆ ಜೆ.ಬಿ.ಡಿಸಿಲ್ವಾ ಅಭಿಪ್ರಾಯಪಟ್ಟರು. ನಗರದ ದೆವರಾದ ಅರಸ್ ಬಡಾವಣೆಯ ನಾಗನೂರು ಶ್ರೀ ಶಿವಬಸವೇಶ್ವರ ವೃದ್ಧಾಶ್ರಮದ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ತೊಟ್ಟಿಲುಮನೆ ಶಿಕ್ಷಕಿಯರಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿದುರು.
ಇನ್ನೋರ್ವ ಅತಿಥಿ ಶಶಿಕಲಾ ಮಾಳಖೇಡ ಮಾನಾಡಿ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವದಕ್ಕಿಂತ ಬಾಲವಾಡಿ,ತೊಟ್ಟಿಲುಮನೆಯಲ್ಲಿ ಚಿಕ್ಕ ಮಕ್ಕಳ ಜೊತೆಯಲ್ಲಿ ಕೆಲಸಮಾಡುವದು ಹೆಚ್ಚು ತೃಪ್ತಿಯನ್ನು ನೀಡುತ್ತದೆ. ಯಾವುದೇ ಸ್ವಾರ್ಥವಿಲ್ಲದೇ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿಯರ ಸೇವೆ ಅಭಿನಂದನಾರ್ಹವೆAದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಮತಿ ವೈಜಯಂತಿ ಚೌಗಲಾ ವಹಿಸಿಮಾತನಾಡಿದರು. ಬಾಲವಾಡಿಯಿಂದ ಪ್ರಾರಂಭವಾದ ಸಂಸ್ಥೆಯ ಚಟುವಟಿಕೆಗಳು ಇಂದು ಮಹಿಳೆ, ಮಕ್ಕಳು ಪರಿಸರ, ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ ತಲುಪಿವೆ. ಬಾಲವಾಡಿಗಳಲ್ಲಿ ಶಾಲಾಪೂರ್ವ ಶಿಕ್ಷಣ, ಅಲ್ಪೋಪಹಾರ, ನೈತಿಕತೆ ಮತ್ತು ಮೌಲ್ಯಗಳನ್ನು ಬೆಳೆಸಲು ಅನೇಕ ವಿನೂತನ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದಿರುವ ಶ್ರೀಮತಿ ಸುಲೋಚನಾ ಭಟ್ ಇವರನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಶಾಹೀನ್ ಹೊಂಬಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯೆಯರಾದ ಶ್ರೀಮತಿ ಭಾರತಿ ಕೊಟಬಾಗಿ, ವಿದ್ಯಾಲತಾ ಹೆಗಡೆ, ಸಂಯೋಜಕರಾದ ಎಂ.ಎಸ್.ಚೌಗಲಾ ಸಂಸ್ಥೆಯ ಚಟುವಟಿಕೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.