ಬೆಳಗಾವಿ : ಈ ಸಾರಿ ಗಣೇಶ್ ಉತ್ಸವದ ಹಬ್ಬದ ಸಡಗರ ಜೋರಾಗಿದೆ. ಕಳೆದ ಸಾರಿ ಬರದ ಹಿನ್ನೆಲೆಯಲ್ಲಿ ಮಂಕಾಗಿದ್ದ ಹಬ್ಬ ಈ ಸಲ ಅತ್ಯಂತ ಅದ್ದೂರಿಯಿಂದ ನಡೆಯುತ್ತಿದೆ .ಗಣೇಶ ಹಬ್ಬಕ್ಕೆ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಬೆಳಗಾವಿಯಲ್ಲಿ ಗಣೇಶ್ ಮಂಡಳಿಗಳು ಎತ್ತರದ ಮೂರ್ತಿಗಳನ್ನು ಈ ಸಲ ಪ್ರತಿಷ್ಠಾಪನೆ ಮಾಡಲಿವೆ. ಈ ಬಾರಿ ಬೆಳಗಾವಿ ನಗರದ ಯಳ್ಳೂರ ರಸ್ತೆಯ ಅಷ್ಟವಿನಾಯಕ ನಗರದ ಮಂಡಳಿಯವರು21 ಅಡಿ ಎತ್ತರದ (ಟ್ರಾಲಿಯೂಸೇರಿದರೆ ನೆಲಮಟ್ಟದಿಂದ 25 ಅಡಿ) ಸಿಂಹಾಸನದ ಮೇಲೆ ಗಣೇಶ ಕುಳಿತಿರುವಅವತಾರದ ಈ ಮೂರ್ತಿಯನ್ನು ಪ್ರತಿಷ್ಠಾಪಿಸಲಿದ್ದಾರೆ.
Nammur Dhwani > Local News > ಬೆಳಗಾವಿಯಲ್ಲಿ ಕಣ್ಮಣ ಸೆಳೆಯುವ 21 ಅಡಿಯ ಮೂರ್ತಿ