ಮಕ್ಕಳ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ
ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು, ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಸ್ .ಪಿ ಮಹಾದೇವರವರು ತಿಳಿಸಿದರು.
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿಂಗರಮಾರನಹಳ್ಳಿ ಸಾರ್ವಜನಿಕ ಶಿಕ್ಷ ಣ ಇಲಾಖೆಯಿಂದ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ, ಮಕ್ಕಳ ಮೇಳ, ಕ್ರಿಡಾ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇಲ್ಲಿ ಮಕ್ಕಳು ತಮ್ಮಲ್ಲಿರುವ ಕಲೆ, ಸಾಹಿತ್ಯ, ಜಾನಪದ ಪ್ರಾಕಾರದ ಪ್ರತಿಭೆಯನ್ನು ತೋರಿ ಸಾಂಸ್ಕೃತಿಕವಾಗಿ ಮುಂದೆ ಬರಬೇಕು ಎಂದರು. ಇನ್ನೂ ಈ ಕಾರ್ಯಕ್ರಮದಲ್ಲಿ ಕಂಠಪಾಠ ಧಾರ್ಮಿಕ ಪಠಣ ಚಿತ್ರಕಲೆ ಛದ್ಮವೇಷ ಕ್ಲೇ ಮಾಡೆಲಿಂಗ್ ಪ್ರಬಂಧ ಮಿಮಿಕ್ರಿ ಕವನ ವಾಚನ ಕಥ ಹೇಳುವಿಕೆ ಹೀಗೆ ಅನೇಕ ಸ್ಫರ್ಧೆಗಳು ನಡೆದವು
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು SP ಮಹದೇವ್ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಹೇಮಲತ ,ಬಿ.ಆರ್ ಪಿ ಆನಂದ್ ಇ.ಸಿ ಓ ರುದ್ರಪ್ಪ ಗ್ರಾಮಪಂಚಾಯತ್ ಅಧ್ಯಕ್ಷ ರಾದ ದೇವರಾಜ್ ಸರ್,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮಂಜುಳ ,ಕುಂಟೇಗೌಡರು ಎಸ್ ಡಿ ಎಂಸಿ ಅಧ್ಯಕ್ಷ ರು ರೇವಣ್ಣ ,ಮಾಜಿ ಅಧ್ಯಕ್ಷ ರು ಮಂಜೇಗೌಡರು PEO ಲೋಕೇಶ್ ರವರು,ತಾಲ್ಲೂಕು ಕ್ರೀಡಾ ನೌಕರರ ಸಂಘ ದ ಅಧ್ಯಕ್ಷ ರು ಜಗದೀಶ್ ರವರು ಎಸ್.ಡಿ ಎಂ.ಸಿಸದಸ್ಯರು ಗ್ರಾಮಸ್ಥರು, ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ state coordinator ಕಿರಣ್, ಸಿಂಗರಮಾರನಹಳ್ಳಿ ಕ್ಲಸ್ಟರ್ ನ ಹದಿಮೂರು ಶಾಲೆಗಳ 150 ಮಕ್ಕಳು ಶಿಕ್ಷಕರು ಉಪಸ್ಥಿತರಿದ್ದರು .