ಮೈಸೂರು: ಟೀಂ ಮೈಸೂರು ಮತ್ತು ಲಯನ್ಸ್ ಕ್ಲಬ್ ಇಂದಿರಾನಗರ ಸದಸ್ಯರ ವತಿಯಿಂದ ಜಂಟಿಯಾಗಿ ೫ ಸೆಪ್ಟೆಂಬರ್ ೨೦೨೪ ರ ಗುರುವಾರ ಸಂಜೆ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗೆ ಗೌರವ ಸಮಪರ್ಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಡಾ.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಟೀಂ ಮೈಸೂರು ತಂಡದ ಸಂಚಾಲಕರಾದ ಗೋಕುಲ್ ಗೋವರ್ಧನ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು. ಜೊತೆಗೆ ಟೀಂ ಮೈಸೂರು ತಂಡ ನಡೆದು ಬಂದ ಹಾದಿಯನ್ನು ,ಮಾಡುತ್ತಿರುವ ವಿವಿಧ ಕೆಲಸಗಳನ್ನು ಕುರಿತು ಪ್ರಾಸ್ತಾವಿಕ ನುಡಿಯ ಮೂಲಕ ತಿಳಿಸಿದರು.
ಲಯನ್ಸ್ ಕ್ಲಬ್ ಇಂದಿರಾನಗರದ ಚಾರ್ಟೆಡ್ ಸದಸ್ಯರಾಗಿರುವ ಅಚ್ಯುತ್ ಸರ್ ಅವರು ಮಾತನಾಡುತ್ತಾ ಪ್ರಸ್ತುತ ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು ಎಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಾಧನೆ ಮಾಡಿದವರ ಹಿಂದೆ ಶಿಕ್ಷಕರ ಪರಿಶ್ರಮ ಇರುತ್ತದೆ ಎಂದು ತಿಳಿಸಿದರು. ಜೊತೆಗೆ ಟೀಂ ಮೈಸೂರು ಹಾಗೂ ಲಯನ್ಸ್ ಕ್ಲಬ್ ಎರಡೂ ತಂಡಗಳು ಸಮಾನ ಮನಸ್ಥಿತಿಯನ್ನು ಹೊಂದಿದ್ದು ಸಮಾಜಕ್ಕೆ ತನ್ನ ಕೈಲಾದ ಸೇವೆಯನ್ನು ಮಾಡುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ
ಪ್ರೊ.ನಾಗರಾಜ್ ಅವರು ಅತಿಥಿ ಭಾಷಣ ಮಾಡುತ್ತಾ ಟೀಂ ಮೈಸೂರು ತಂಡದ ಸಾಧನೆಯನ್ನು ಶ್ಲಾಘಿಸಿದರು. ಸಂಚಾಲಕರಾದ ಗೋಕುಲ್ ಗೋವರ್ಧನ್ ಅವರ ಕಾರ್ಯವೈಖರಿಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಕರಿಗೆ ಗೌರವ ಸಲ್ಲಿಸುವ ಈ ಕಾರ್ಯಕ್ರಮ ನಿಜಕ್ಕೂ ಅಭಿನಂದನ ಅರ್ಹರು ಎಂದು ಹಾಗೂ ಸಮಾಜದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವವಾದುದೆಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಸುಮಾರು ೨೧ ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಟೀಂ ಮೈಸೂರು ತಂಡದ ಸದಸ್ಯರುಗಳಾದ ಯಶವಂತ್ ,ಕಿರಣ್ ಜಯರಾಮೇಗೌಡ ,ಪ್ರಸನ್ನ ರಾಜ್ ಗುರು ,ಮನೋಹರ್ ,ಸುನೀಲ್ ,ಮಂಜುನಾಥ್ ,ಮಲ್ಲೇಶ್ ,ಅಭಿನಂದನ್,ಅವರುಗಳು ಉಪಸ್ಥಿತರಿದ್ದರು