ಮೊಬೈಲ್ ಗೀಳಿನಿಂದಾಗಿ ಹೆಚ್ಚಿದ ಮಕ್ಕಳ ಸೈಬರ್ಕ್ರೈಂ ಪ್ರಕರಣಗಳು! ಶಾಲೆಗಳಲ್ಲಿಯೇ ಸೈಬರ್ಕ್ರೈಂ ಜತೆಗೆ ಕಾನೂನು ಜಾಗೃತಿಗೆ ಯತ್ನ ಮಕ್ಕಳಿಗೆ ಸೈಬರ್ಂ ಜಾಗೃತಿ ಪಾಠ!
ರಾಜ್ಯದಲ್ಲಿ ಶಾಲೆ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಸೈಬರ್ಕ್ರೈಂ ಜಾಲದಲ್ಲಿ ಸಿಲುಕಿಕೊಳ್ಳುತ್ತಿದ್ದು, ಈ ಬಗ್ಗೆ ಜಾಗೃತಿಗೆ ಸಾಮಾಜಿಕ ಸಂಸ್ಥೆಗಳು ಮುಂದಾಗುತ್ತಿವೆ.
ಸಾಮಾಜಿಕ ಜಾಲತಾಣಗಳ ಬಳಕೆ, ರೀಲ್ಸ್ ವ್ಯಾಮೋಹ, ಆನ್ ಲೈನ್ ಗೇಮಿಂಗ್, ಬ್ಯಾಂಕಿಂಗ್ ಸೇರಿದಂತೆ ನಾನಾ ಹಾದಿಗಳಲ್ಲಿ ಮಕ್ಕಳು ಸೈಬರ್ ಕ್ರೈಂ ಜಾಲಕ್ಕೆ ಬಲಿಯಾಗುತ್ತಿದ್ದು, ದೇಶದಲ್ಲೇ ಮಕ್ಕಳ ಮೇಲಿನ ಸೈಬರ್ ಅಪರಾಧ ಪ್ರಕರಣಗಳಲ್ಲಿ 2020ರಲ್ಲಿ ರಾಜ್ಯವು 2ನೇ ಸ್ಥಾನದಲ್ಲಿದೆ ಎಂದು ವರದಿಗಳು ಹೇಳುತ್ತಿವೆ.
ಮಕ್ಕಳಮೇಲಿನ ಅಪರಾಧಗಳನ್ನು ಕಡಿತಗೊಳಿಸುವುದರೊಂದಿಗೆ ಶಾಲಾ ಹಂತದಲ್ಲಿಯೇ ವೇದಿಕೆಗಳಲ್ಲಿ ನಡೆಯುತ್ತಿರುವ ಸೈಬರ್ಕ್ರೈಂ ಪ್ರಕರಣಗಳಲ್ಲಿ ವಿದ್ಯಾರ್ಥಿಗಳು ಬಲಿಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಬೆಂಗಳೂರಿನ ಚೈಲ್ಡ್ರೈಟ್ ಟ್ರಸ್ಟ್ ಜಾಗೃತಿಗೆ ಮುಂದಾಗುತ್ತಿದೆ. ಜತೆಗೆ, ಜಾಗೃತಿ ಅಭಿಯಾನದ ಬಳಿಕ ಸರಕಾರದ ವರದಿ ಸಲ್ಲಿಸಲಿದ್ದು, ಮಕ್ಕಳ ಮೇಲೆ ಸೈಬರ್ಂ ಜಾಲದ ವ್ಯಾಪ್ತಿ ಕುರಿತ ಸಮಗ್ರ ವಿವರ ಕ್ರೋಡೀಕರಣ ನಡೆಯಲಿದೆ.
ಕೊರೊನಾ ಬಳಿಕ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಹೆಚ್ಚಳ ಮಾಡಿದ್ದು, ಆನ್ ಲೈನ್ ತರಗತಿಗಳು ಮಾತ್ರವಲ್ಲದೇ ಪಿಡಿಎಫ್ ನೋಟ್ಸ್ಗಳನ್ನು ಮಕ್ಕಳು ಅವಲಂಬಿಸಿದ್ದಾರೆ. ಇದೇ ನೆಪದಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿದ್ದು, ಮಕ್ಕಳಿಗೆ ಸೂಕ್ತವಲ್ಲದ ಅನೇಕ ವಿಚಾರಗಳು ಅನಾಯಾಸವಾಗಿ ಲಭ್ಯವಾಗುತ್ತಿವೆ. ಇದರಿಂದಾಗಿ ಮಕ್ಕಳು ಹಾದಿತಪ್ಪುವ, ಅಪರಾಧ ಪ್ರಕರಣಗಳಲ್ಲಿ ಸಿಲುಕುವ ದುಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಅನಿವಾರ್ಯವಿದೆ. ಮೊದಲ ಹಂತದಲ್ಲಿಬೆಂಗಳೂರು, ಗ್ರಾಮಾಂತರ, ಚಿಕ್ಕಬಳ್ಳಾಪುರದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಆರಂಭವಾದ ಆನ್ಲೈನ್ ಶಿಕ್ಷಣ ಮಕ್ಕಳ ಕೈಗೆ ಸುಲಭವಾಗಿ ಮೊಬೈಲ್ ಸಿಗುವಂತೆ ಮಾಡಿದೆ. ಇದರಿಂದ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಖಾತೆ ಹೊಂದಿದ್ದಾರೆ. ಈ ಖಾತೆಗಳಲ್ಲಿ ರೀಲ್ಸ್ಗಳು, ವಿಡಿಯೊ, ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಕೆಲವರು ಇದರಲ್ಲಿ ಹೆಚ್ಚಿನ ಪ್ರತಿಕ್ರಿಯೆ ಪಡೆಯಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಈ ವೇಳೆ ಆಸಭ್ಯ ಫೋಟೊ, ವಿಡಿಯೋಗಳನ್ನು ಅಪ್ಲೋಡ್ ಮಾಡುವ ಇತ್ತೀಚಿನ ವರ್ಷಗಳಲ್ಲಿ ಮಕ್ಕಳಿಂದ ಮೊಬೈಲ್, ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಳವಾಗುತ್ತಿವೆ. ಇದರಿಂದ ಶಾಲೆಗಳಲ್ಲಿ ಸೈಬರ್ ಅಪರಾಧಗಳು, ಸೈಬರ್ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ನಂತರದಲ್ಲಿ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಕ್ರಮವಹಿಸಲಾಗುತ್ತಿದೆ. ಎಂದು ನಾಗಸಿಂಹ ಜಿ ರಾವ್ ನಿರ್ದೇಶಕ, ಚೈಲ್ಡ್ ರೈಟ್ ಟ್ರಸ್ಟ್ಪ್ರಯತ್ನಕ್ಕೂ ಮುಂದಾಗುತ್ತಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣಗಳಿಂದ ಪ್ರೀತಿ, ಪ್ರೇಮ ಹೆಸರಿನಲ್ಲಿ ಹಾದಿ ತಪ್ಪುವ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇವುಗಳಿಂದ ಅಪರಾಧ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಸೈಬರ್ಕ್ರೈಂಗೆ ಸಂಬಂಧಿಸಿದ ಪ್ರಕರಣಗಳ ಕುರಿತು ಕಾನೂನೂ ಏನು ಹೇಳುತ್ತದೆ ಎಂಬುದನ್ನು ತಿಳಿಸಿಕೊಡುವುದು ಅಗತ್ಯವಾಗಿದೆ.
ಒಟಿಪಿಗಳ ದುರ್ಬಳಕೆ: ಇತ್ತೀಚಿನ ವರ್ಷಗಳಲ್ಲಿ ನಾನಾ ಬ್ಯಾಂಕ್ ವ್ಯವಹಾರಗಳಿಗೆ, ದಾಖಲೆಗಳಿಗೆ, ಹೊಸ ಸಾಮಾಜಿಕ ಜಾಲತಾಣ ತೆರೆಯಲು ಕೂಡ ಒಟಿಪಿ ಬಳಕೆ ಮಾಡಲಾಗುತ್ತದೆ. ಈ ರೀತಿ ಒಟಿಪಿಗಳು ಉಪಯೋಗವಾಗುವ ಜತೆಗೆ ದುರ್ಬಳಕೆಯಾಗುತ್ತಿವೆ. ಮಕ್ಕಳು ಗೇಮಿಂಗ್ ಅಪ್ಲಿಕೇಷನ್, ಆನ್ಲೈನ್ ಬೆಟ್ಟಿಂಗ್ಗಳಲ್ಲೂ ಕೂಡ ಬಳಕೆ ಮಾಡುತ್ತಿದ್ದು, ಇಲ್ಲಿ ಹಣವನ್ನು ಕೂಡ ಪಾವತಿಸುತ್ತಿದ್ದಾರೆ. ಈ ವೇಳೆ ಹೆಚ್ಚಿನ ದುಡ್ಡಿನ ಅವಶ್ಯಕತೆ ಬಂದಾಗ ಪೋಷಕರಿಂದ ಹಣ ಪಡೆದುಕೊಳ್ಳಲು ಒಟಿಪಿಗಳದುರ್ಬಳಕೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಇದರಿಂದ ಒಟಿಪಿ ದೂರುಪಯೋಗದ ಬಗ್ಗೆ ಕೂಡ ಜಾಗೃತಿ ಅನಿವಾರ್ಯವಾಗಿದೆ.