ಮನ ಮೋಹಕ ನಮ್ಮ ಬೆಳಗಾವಿಯ ಸಾರ್ವಜನಿಕ ವಿನಾಯಕ
ಬೆಳಗಾವಿ: ನಗರದಲ್ಲಿ ಗಣಪತಿ ಹಬ್ಬ ಬಹಳ ವಿಶೇಷವಾದದ್ದು. ಅದರಲ್ಲೂ ಗಲ್ಲಿ ಗಣಪತಿಗಳ ಸದ್ದು ಜೋರು. ಎಲ್ಲರ ಕಣ್ಮನಗಳನ್ನ ಸೆಳೆಯುತ್ತವೆ, ಈ ಸಾರ್ವಜನಿಕ ಗಣಪತಿಗಳು.
ತರ ತರದ ಅವತಾರದಲ್ಲಿ ಮೂಡಿಬಂದ ನಮ್ಮ ಬೆಳಗಾವಿಯ ಗಣಪನನ್ನ ನೋಡಲು, ಜಿಲ್ಲೆಯ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಾರೆ.ಅಂತಹ ಕೆಲವು ಆಕರ್ಷಣೀಯ ಗಣಪತಿಗಳನ್ನ ನೀವು ನಮ್ಮೂರ ಬಾನುಲಿ ವೆಬ್ ಪೋರ್ಟಲ್ ನಲ್ಲಿಯೂ ಕಾಣಬಹುದು.
ಇದೊ ನೋಡಿ ಬೆಳಗಾವಿಯ ವಿವಿಧ ಗಲ್ಲಿ ಗಣಪತಿಗಳನ್ನ…
ಗ್ಯಾಂಗ್ ವಾಡಿಯಲ್ಲಿ ಪ್ರತಿಷ್ಠಾನ ಮಾಡಲಾಗಿರುವ ಇಲಿಗಳ ಜೊತೆಗೆ ಆಟವಾಡುತ್ತಿರುವ ಗಣಪ
ವಂಟಮೂರಿ ಕಾಲೋನಿ, ಸಾಯಿಬಾಬಾ ದೇವಸ್ಥಾನದ ಹತ್ತಿರ ಪ್ರತಿಷ್ಠಾನ ಮಾಡಲಾಗಿರುವ ಸುಂದರ ಗಣಪ
ನೆಹರೂ ನಗರದ ಬಸವಣ್ಣ ದೇವಸ್ಥಾನ ಕ್ರಾಸ್ ನಂಬರ್ 01 ರಲ್ಲಿ ಪ್ರತಿಷ್ಠೆ ಮಾಡಿದ ಗಣಪ ಮತ್ತು ಕ್ರಷ್ಣ ನಾ ರಾಸಲೀಲೆ ಕುರಿತಾದ ಜಿವಂತ ದೇಖಾವಾ.
ನಗರದ ಶಿವಬಸವ ನಗರದ ಸಾರ್ವಜನಿಕ ಗಣೇಶೋತ್ಸವ ಮಂಡಳದವರು (ಡಾ .ಸ.ಜ.ನಾ ವಿಜ್ಞಾನ ಕೇಂದ್ರದ ಹತ್ತಿರ) 30ನೇಯ ವರ್ಷದ ಅಂಗವಾಗಿ ಪ್ರತಿಷ್ಠಾನ ಮಾಡಲಾಗಿರುವ ಸುಂದರ ಗಣಪ