ಎನ್ ಜಿ ಒಗಳ ನಿರ್ವಹಣೆ ಕುರಿತು ಎರಡು ದಿನಗಳ ಕಾರ್ಯಾಗಾರ
ಗದಗ: ನಗರದ ಸೆಮಿನಾರ ಹಾಲ್, ರೈತ ಭವನ, ಕೆ.ಎಸ್.ಆರ್.ಡಿ.ಪಿ.ಆರ್ ವಿಶ್ವ ವಿದ್ಯಾಲಯದಲ್ಲಿ ಎರಡು ದಿನಗಳ ಸ್ವಯಂ ಸೇವಾ ಸಂಸ್ಥೆಗಳ ನಿರ್ವಹಣೆ ಕುರಿತು ಕಾರ್ಯಾಗಾರದ ಉದ್ಘಾಟನೆ ಸಮಾರಂಭದ ನಡೆಯಿತು.
ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವ ವಿದ್ಯಾಲಯ ಗದಗ ಮಾಸ್ಟರ್ ಆಫ್ ಸೋಶಿಯಲ್ ವರ್ಕ್ ಇವರ ಸಹಯೋಗದಲ್ಲಿ, ಹಮ್ಮಿಕೊಂಡಿರುವ ಈ ಕಾರ್ಯಾಗಾರದಲ್ಲಿ ಮಾತನಾಡಿದ ಕೆ.ಎಸ್.ಆರ್.ಡಿ.ಪಿ.ಆರ್.ಒ ಗದಗನ ಉಪಕುಲಪತಿಗಳಾದ ಡಾ.ಪ್ರೋ. ಸುರೇಶ್ ನಾಡಗೌಡರ ಮಾತನಾಡಿ, ಈ ಒಂದು ಕಾರ್ಯಾಗಾರ ಬಹಳ ಪ್ರಮೂಖವಾದದ್ದು, ನುರಿತ ಸಂಪನ್ಮೂಲ ವ್ಯಕ್ತಿಗಳಾದ, .ಬಿ.ಕೆ. ಬರ್ಲಾಯಾ ಹಾಗೂ ಸುರೇಖಾ ಪಾಟೀಲ ಅವರಿಂದ ಇದರ ಕುರಿತು ಮಾಹಿತಿ ನಮ್ಮ ವಿದ್ಯಾರ್ಥಿಗಳಿಗೆ ದೊರೆತದ್ದು ಉತ್ತಮ ಸಂಗತಿ ಎಂದು ಹೇಳಿದರು. ದೇಶದ ಅಭಿವೃದ್ಧಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ. ಅವುಗಳು ಸೇವಾ ಮನೋಭಾವ, ಸಮರ್ಪಣಾ ಭಾವದಿಂದ ಕೆಲಸ ಮಾಡಬೇಕು. ವ್ರತ್ತಿಯಿಂದಪರ ಸಮಾಜ ಕಾರ್ಯಕರ್ತರು ಎನ್ ಜಿ ಓಗಳ ನಿರ್ವಹಣೆಯ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ವೇಳೆ, ಕೆ.ಎಸ್.ಆರ್.ಡಿ.ಪಿ.ಆರ್.ಯು ಗದಗನ ಉಪಕುಲಪತಿಗಳಾದ ಡಾ.ಪ್ರೋ. ಸುರೇಶ್ ನಾಡಗೌಡರ, ಕೆ.ಎಸ್.ಆರ್.ಡಿ.ಪಿ.ಆರ್.ಯು ಗದಗನ ಎಂ. ಎಸ್. ಡಬ್ಲು ವಿಭಾಗದ ಕಾರ್ಯಕ್ರಮ ಸಂಯೊಜಕರಾದ, ಸೋಮಲಿಂಗ ಕೆ. , ಸಂಪನ್ಮೂಲ ವ್ಯಕ್ತಿಗಳಾದ ಬಿ.ಕೆ. ಬರ್ಲಾಯಾ ಹಾಗೂ ಸುರೇಖಾ ಪಾಟೀಲ್ಅವರು ಜೊತೆಗೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 2 ದಿನಗಳ ವರೆಗೆ ಈ ಕಾರ್ಯಕ್ರಮ ನಡೆಯಲಿದ್ದು ಸ್ವಯಂ ಸೇವಾ ಸಂಸ್ಥೆಗಳ ಸಮಸ್ಯೆ, ಆರ್ಥಿಕ ಅವಕಾಶಗಳು, ಆದಾಯ ತೆರಿಗೆ, ಯೋಜನಾ ಪ್ರಸ್ತಾವನೆ ತಯಾರಿಕೆ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.