ನಮ್ಮ ನೆಚ್ಚಿನ ರಿಧಿಯ ಸೀಮಂತಕ್ಕೆ ನಿಮಗೆಲ್ಲರಿಗೂ ಹಾರ್ದಿಕ ಸ್ವಾಗತ; ಇದು ಶ್ವಾನದ ಅಪರೂಪದ ಸೀಮಂತ
ಹಾವೇರಿ: ಜಿಲ್ಲೆಯ ಹಾನಗಲ್ ಪೋಲೀಸ್ ಠಾಣೆಯ ರಕ್ತಸೈನಿಕ ಕರಬಸಪ್ಪ ಮನೋಹರ ಗೊಂದಿ ಪೋಲಿಸ್ ಕಾನ್ಸ್ಟೇಬಲ್ ಇವರ ಮನೆಯ ಶ್ವಾನ ರಿಧಿಗೆ ಸೀಮಂತ ಕಾರ್ಯಕ್ರಮ ನಡೆಯಲಿದೆ.
ಹೌದು ಸ್ನೇಹಿತರೇ, ಶ್ವಾನವೇ ಮನುಷ್ಯನ ಮೊದಲ ಸಂಗಾತಿ ಅಂತ ನಾವು ಕೇಳಿದ್ದೀವಿ. ಇನ್ನು ವಿಶ್ವಾಸಕ್ಕೆ ಇನ್ನೊಂದು ಹೆಸರೇ ಶ್ವಾನಗಳು ಎಂದರೆ ತಪಾಗಲಾರದು. ಅಂತಹದುರಲ್ಲಿ ನಮ್ಮ ಕರ್ನಾಟಕದ ಹಾವೇರಿ ಜಿಲ್ಲೆಯ 136 ಬಾರಿ ರಕ್ತದಾನ ಮಾಡಿದ ರಕ್ತಸೈನಿಕ ಹಾನಗಲ್ ಪೋಲಿಸ್ ಕಾನ್ಸ್ಟೇಬಲ್ ಕರಬಸಪ್ಪ ಮನೋಹರ ಗೊಂದಿ ಇವರ ಶ್ವಾನ ರಿಧಿಗೆ ನಾಳೆ ಅಂದರೆ ಸೆ.16 ರಂದು ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಕರಬಸಪ್ಪ ಮನೋಹರ ಗೊಂದಿ ಅವರು ಹೇಳುವ ಪ್ರಕಾರ, ರಿಧಿ (ಲಾಬರ್ ಡಾಗ) 2023 ಏ.17 ಕ್ಕೆ ಅವರ ಮನೆಗೆ ಬಂದಾಗಿನಿಂದ, ಮನೆಯ ಮಗಳಾಗಿ, ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸಿದೆ ಎಂದು ನಮ್ಮೂರ ಬಾನುಲಿಯ ನ್ಯೂಸ್ ಜೊತೆಗೆ ಹಂಚಿಕೊಂಡಿದ್ದಾರೆ.
ಇದೀಗ ರಿಧಿ ಗರ್ಭಿಣಿಯಗಿದ್ದು, ಅವಳ ಸೀಮಂತವನ್ನ ಅದ್ದೂರಿಯಾಗಿ ಆಚರಿಸಲು ಗೊಂದಿಯವರ ಕುಟುಂಬ ಸಿದ್ಧವಾಗಿದೆ. ಇದಕ್ಕಾಗಿ ಇವರು ಬಮ್ಮನಹಳ್ಳಿಯ ರಕ್ತ ಸೈನಿಕ ರಂಜಿತ ಪೂಜಾರಿ ಶ್ವಾನ ತರಬೇತುದಾರರು ಹಾಗೂ ರಾಷ್ಟ್ರೀಯ ಶ್ವಾನ ಪ್ರದರ್ಶನ ತೀರ್ಪುಗಾರರು, ತರಬೇತಿ ಪಡೆದ ಶ್ವಾನಗಳಾದ ಚಾರ್ಲಿ ಮತ್ತು ಕಾಳಿ ಇವರ ಹಾಗೂ ಸಂಬಂಧಿಕರು ಸ್ನೇಹಿತರ ಉಪಸ್ಥಿತಿಯಲ್ಲಿ ಸೀಮಂತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
ರಿಧಿಗೆ ಆ ದೇವರು ಆಯುರ್ ಅರೋಗ್ಯ ಕೊಟ್ಟು ಕಾಪಾಡಲಿ ಎಂದು ನಮ್ಮ ನಮ್ಮೂರ ಬಾನುಲಿ ಸುದ್ದಿ ವಾಹಿನಿಯ ವತಿಯಿಂದ ಹೃತ್ಪೂರ್ವಕವಾಗಿ ಆಶಿಸುತ್ತೇವೆ.