ಪಂಚೆ ಉಟ್ಟಿದ್ದಕ್ಕೆ ಅನಾಗರಿಕ ಎಂದು ಭಾವಿಸಿ, ಮಾಲ್‌ನಿಂದ ತಡೆಯಲ್ಪಟ್ಟ ಫಕೀರಪ್ಪರಿಂದ ಇಂದು ಪಂಚೆ ಅಂಗಡಿ ಉದ್ಘಾಟಿಸಲಾಗುವುದು!
ಬೆಂಗಳೂರು: ಎಲ್ಲರ ಕಾಲು ಎಳೆಯುತ್ತೆ ಕಾಲ ಅಂತ ಹೇಳ್ತಾರೆ…! ಪಂಚೆಯುಟ್ಟ ಕಾರಣಕ್ಕೆ ಮಾಲ್‌ವೊಂದಕ್ಕೆ ಪ್ರವೇಶ ನಿರಾಕರಿಸಲ್ಪಟ್ಟು ಅವಮಾನಿತರಾಗಿದ್ದ ಹಾವೇರಿ ರಾಣೇಬೆನ್ನೂರಿನ ರೈತ ಫಕೀರಪ್ಪ ಅವರು ಅದೇ ಕಾಲ ಚಕ್ರದ ಮಹಿಮೆಯಿಂದ ಯಲಹಂಕ ದಲ್ಲಿ ರಾಮ್‌ರಾಜ್ ಕಾಟನ್ ನೂತನ ಮಳಿಗೆಯನ್ನು ಶುಕ್ರವಾರ ಉದ್ಘಾಟಿಸಲಿದ್ದಾರೆ.
ಗುರುವಾರ ಸಂವಾದದಲ್ಲಿ ಮಾತನಾಡಿದ ರಾಮ್‌ರಾಜ್ ಕಾಟನ್ ಸಂಸ್ಥಾಪಕ, ಚೇರ್ ಮನ್ ಕೆ.ಆರ್. ನಾಗರಾಜನ್, ‘ಪಂಚೆಯುಟ್ಟು ಬರುವವರು ನಮ್ಮ ಸಂಸ್ಕೃತಿಯ ಪ್ರತೀಕ. ಪಂಚೆ ಉಟ್ಟವರನ್ನು ಕೀಳಾಗಿ ಕಾಣುವುದು ಭಾರತೀಯ ಸಂಸ್ಕೃತಿಯನ್ನು ಅವಮಾನಿಸಿದಂತೆ. ಫಕೀರಪ್ಪ ಅವರನ್ನು ಗೌರವಿಸುವ ಸಲು ವಾಗಿ ನಾವು ಅವರಿಂದ ರಾಮ್ ರಾಜ್ ಮಳಿಗೆಯನ್ನು ಉದ್ಘಾಟಿಸುತ್ತಿದ್ದೇವೆ ಎಂದರು.
ಪ್ರಾರಂಭದಲ್ಲಿ ಧೋತಿ, ಪಂಚೆಗಳನ್ನು ಪ್ರಾರಂಭಿಸಿದಾಗ ಹಲವರು ಮೂದಲಿಸಿ ದ್ದರು. ಆದರೆ ಇಂದು ರಾಮ್‌ರಾಜ್ ಬ್ಯಾಂಡ್ ಬಗ್ಗೆ ಅವರೇ ಆಶ್ಚರ್ಯ ಪಡುತ್ತಾರೆ. ಪಂಚೆ ಅವಮಾನಿಸು ವುದು ವಸಾಹತುಶಾಹಿ ಮನೋಭಾವ. ಆದರೆ, ಇವತ್ತು ಅಲ್ಲಿ ನಮ್ಮ ಬಟ್ಟೆಗೆ ಧೋತಿಗೆ ಗೌರವ ಇದೆ. ಆದರೆ, ನಮ್ಮಲ್ಲಿ ಹಲವರ ಮನಸ್ಥಿತಿ ಕೆಟ್ಟು, ಕೀಳಾಗಿ ನೋಡುತ್ತಿರುವುದು ಬೇಸರದ ಸಂಗತಿ ಮತ್ತು ಅದು ಖಂಡನೀಯ ಎಂದರು.