ಚಿಕ್ಕೋಡಿ: ತಾಲೂಕಿನ ಸರಕಾರಿ ಪದವಿಪೂರ್ವ ಕಾಲೇಜು ಕೆರೂರು. ಇಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಸ್ವಚ್ಛತಾ ಈ ಸೇವಾ ಕಾರ್ಯಕ್ರಮದ ಅಡಿಯಲ್ಲಿ ಜಾತಾ ಕಾರ್ಯಕ್ರಮವನ್ನು ಹಮ್ಮಿಕೊಂಡುಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಸ್ವಚ್ಛತೆಯ ಪ್ರತಿಜ್ಞೆಯನ್ನು ಬೋಧಿಸಲಾಯಿತು.
ನಂತರ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀಶೈಲ್ ಕೋಲಾರ್, ಶ್ರೀ ಎಸ್ ಎಂ ತೇಲಿ, ಎಸ್ ಎಂ ಕುಲಕರ್ಣಿ, ಅನಿಲ್ ಬಾನಿ, ಶ್ರೀಮತಿ ಮಲಬನ್ನವರ್, ಶ್ರೀಮತಿ ವಟ್ನಾಳ ರವರು ಡೊಳ್ಳು ಬಾರಿಸುವುದರ ಮುಖಾಂತರ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀಶೈಲ್ ಕೋಲಾರ್, ಶ್ರೀ ಎಸ್ ಎಂ ತೇಲಿ, ಎಸ್ ಎಂ ಕುಲಕರ್ಣಿ, ಅನಿಲ್ ಬಾನಿ, ಶ್ರೀಮತಿ ಮಲಬನ್ನವರ್, ಶ್ರೀಮತಿ ವಟ್ನಾಳ, ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.