ಬೆಳಗಾವಿ: ಇಲ್ಲಿನ ಕನ್ನಡ ಭವನದಲ್ಲಿ ಕಿತ್ತೂರು ಸಂಗ್ರಾಮಕ್ಕೆ ಇನ್ನೂರರ ಸಂಭ್ರಮ ಎಂಬ ಕಾರ್ಯಕ್ರಮವನ್ನ ಆಚರಿಸಲಾಯಿತು.
ಹೌದು, ಪ್ರಬುದ್ಧ ಭಾರತ,ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಇವರ ಸಹಯೋಗದಲ್ಲಿ 1824 ರ ಕಿತ್ತೂರ ಸಂಗ್ರಾಮಕ್ಕೆ ಇನ್ನೂರರ ಸಂಭ್ರಮ ಎಂಬ ಕಾರ್ಯಕ್ರಮವನ್ನ ನಗರದ ಕನ್ನಡ ಭವನದಲ್ಲಿ ಆಚರಿಸಲಾಯಿತು.
ಕಿತ್ತೂರು ರಾಣಿ ಚನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪ ವೃಷ್ಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನ ನೀಡಲಾಯಿತು. ಈ ವೇಳೆ ಮಾತನಾಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ, ಪ್ರೊ.ಸಿ.ಎಂ.ತ್ಯಾಗರಾಜ ಅವರು, ಈಗಿನ ಮಕ್ಕಳು ಚನ್ನಮ್ಮನನ್ನ ಸ್ಪೂರ್ತಿಯಾಗಿ ಪಡೆಯಬೇಕು ಅದನ್ನ ಬಿಟ್ಟು ಸಿನೆಮಾ ನಟ ನಟಿಯರನ್ನ, ಸಮಾಜ ಘಾತುಕರನ್ನ ಸಮಾಜದ ನಾಯಕರನ್ನಾಗಿ ಸ್ಪೂರ್ತಿ ಪಡೆಯುತ್ತಿರುವುದು ವಿಷಾದಕರ ಸಂಗತಿ. ಕೆಚ್ಚೆದೆಯಿಂದ ಬ್ರಿಟಿಐಶಾರಾ ಸೊಲ್ಲಡಗಿಸಿದ ಚನ್ನಮ್ಮನಂತವರನ್ನ ಯಾರೂ ಸ್ಪೂರ್ತಿಯಾಗಿ ತೆಗೆದುಕೊಳ್ಳುವುದಿಲ್ಲ ಅದರ ವಿಪರೀತ ಒಬ್ಬ ಹೆಣ್ಣು ಮಗಳು ಹೀಗೆ ಮಾಡಬಹುದಾ ಎಂದು ಅನುಮಾನಿಸುತ್ತಾರೆ ಎಂದು ಹೇಳಿದರು.
ನಂತರ, ರಾಣಿ ಚನ್ನಮ್ಮನವರ ಕುರಿತು ಚಾರಿತ್ರಿಕ ಕಾದಂಬರಿ ಕಾರರಾದ ಯ. ರು. ಪಾಟೀಲ, ಕನ್ನಡ ವಿ.ವಿ.ಹಂಪಿ ಪ್ರಾಧ್ಯಾಪಕರಾದ, ಪ್ರೊ. ಅಮರೇಶ ಯತಗಲ್, ರಾಮದುರ್ಗದ ಅಧ್ಯಾಪಕರು ಅಪ್ಪಣ್ಣ ವಗ್ಗರ ಅವರು ವಿವಿಧ ಉಪನ್ಯಾಸಗಳನ್ನ ನೀಡಿದರು.
ಈ ಸಂದರ್ಭದಲ್ಲಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ, ಪ್ರೊ.ಸಿ.ಎಂ.ತ್ಯಾಗರಾಜ, ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕರಾದ, ಶ್ರೀಮತಿ ಪ್ರೊ. ನಾಗರತ್ನ ಪರಾಂಡೆ, ಚಾರಿತ್ರಿಕ ಕಾದಂಬರಿ ಕಾರರಾದ ಯ. ರು. ಪಾಟೀಲ, ಕನ್ನಡ ವಿ.ವಿ.ಹಂಪಿ ಪ್ರಾಧ್ಯಾಪಕರಾದ, ಪ್ರೊ. ಅಮರೇಶ ಯತಗಲ್, ರಾಮದುರ್ಗದ ಅಧ್ಯಾಪಕರು ಅಪ್ಪಣ್ಣ ವಗ್ಗರ, ಸಿಬ್ಬಂದಿ ವರ್ಗದವರು ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.