ಬೆಳಗಾವಿ: ಇಲ್ಲಿಯ ಆಂಜನೇಯ ನಗರದ ನಿವಾಸಿ ಸಂತೋಷ ಪದ್ಮನ್ನವರ ಅವರ ಕಳೆದು ಐದಾರು ದಿನಗಳ ಹಿಂದೆ ಸಾವಾಗಿತ್ತು. ಸಹಜ ಸಾವು ಎಂದು ಸಹ ಅಂತ್ಯಕ್ರಿಯೆಯ ನಡೆದಿತ್ತು. ಆದರೆ ಆ ಶ್ರಿಮಂತ ವ್ಯಕ್ತಿಯ ಪುತ್ರಿಯ ಸಂದೇಹಕ್ಕೆ ಇದು ಸಹಜ ಸಾವಲ್ಲ ಕೊಲೆ ಎಂದು ಸಂಶಯ ವ್ಯಕ್ತವಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿಯಾಗದ್ದ ಸಂತೋಷ ಪದ್ಮನ್ನವರ ಅವರದ್ದು, ಸಹಜ ಸಾವಲ್ಲ ಕೊಲೆಯಾಗಿದೆ ಎನ್ನಲಾಗಿದೆ, ಸಂತೋಷ ತನ್ನ ಪತ್ನಿ ಉಮಾಗೆ ನಿರಂತರ ಕಿರುಕುಳ ಜೊತೆಗೆ ಸಂಶಯ ಪಡ್ತಿದ್ದ ಎನ್ನಾಲಾಗಿದೆ. ಇದೆ ಕಾರಣಕ್ಕೆ ಕುಡಿಯುವ ನೀರಿನಲ್ಲಿ ನಿದ್ರೆ ಮಾತ್ರೆ ಬೆರೆಸಿ ಸಂತೋಷಗೆ ಕುಡಿಸಿ, ಉದ್ಯಮಿ ಪ್ರಜ್ಞೆ ತಪ್ಪಿದ ಬಳಿಕ ಫೆಸ್ಬುಕ್ ಗೆಳೆಯ, ಮನೆ ಕೆಲಸದವರು ಸೇರಿ ಪಿಲ್ಲೋದಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಸಂತೋಷ ಉಸಿರು ಚೆಲ್ತಿದ್ದಂತೆ ಪತ್ನಿ ಉಮಾ ತನ್ನ ಗಂಡ ಹೃದಯಾಘಾತದಿಂದ ಮೃತನಾಗಿದ್ದಾನೆಂದು ಕಥೆ ಕಟ್ಟಿದ್ದಳು ಎಂದು ಮೂಲಗಳು ತಿಳಿಸಿವೆ. ಬಳಿಕ ಉಮಾ ಮಾತು ನಂಬಿ ಸಂಬಂಧಿಕರು ಅಂತ್ಯಕ್ರಿಯೆ ನಡೆಸಿದ್ದರು.
ತಂದೆಯ ಸಾವಿನ ಸುದ್ದಿ ತಿಳಿದು ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದ ಸಂತೋಷ ಪುತ್ರಿ ಸಂಜಾನಾ ಅಂತ್ಯಕ್ರಿಯೆ ಬಳಿಕ ಸಿಸಿ ಕ್ಯಾಮರಾ ಪುಟೇಜ್ ತೋರಿಸುವಂತೆ ತಾಯಿಗೆ ಕೇಳಿದಾಗ ಉಮಾ ಈಗಷ್ಟೆ ಅಂತ್ಯಕ್ರಿಯೆ ಮುಗಿದಿದೆ, ಸ್ನಾನ ಮಾಡಿ ಬರೋಗು ಎಂದು ಪುತ್ರಿ ಸಂಜನಾಗೆ ಹೇಳಿದ್ದಾಳೆ. ಸಂಜನಾ ಸ್ನಾನಕ್ಕೆ ಹೋದಾಗ ಪುತ್ರರಿಗೆ ಹೇಳಿ ಕೊಲೆ ಘಟನೆಗೆ ಸಂಬಂಧಿಸಿದ ಒಂದು ಗಂಟೆ ಅವಧಿಯ ಸಿಸಿ ಕ್ಯಾಮರಾ ಪುಟೇಜ್ ಡಿಲೀಟ್ ಮಾಡಿಸಿದ್ದಾಳೆ. ಕೊಲೆ ನಡೆದ ಒಂದು ಗಂಟೆ ಅವಧಿಯ ದೃಶ್ಯಾವಳಿ ಕಾಣದಾಗ ಅನುಮಾನಗೊಂಡಿರುವ ಸಂಜನಾ, ಒಂದು ಗಂಟೆಯ ಪುಟೇಜ್ ಎಲ್ಲಿ ಎಂದು ಸಹೋದರರನ್ನು ಪ್ರಶ್ನಿಸಿದ್ದಾಳೆ. ಆಗ ಆತ ತಾಯಿ ಹೇಳಿದಕ್ಕೆ ಪುಟೇಜ್ ಡಿಲೇಟ್ ಮಾಡಿದ್ದೇವೆ ಎಂದಿದ್ದಾನೆ.
ಆಗ ಸಂಜನಾ ತಂದೆಯ ಸಾವು ಸಹಜವಲ್ಲ, ಕೊಲೆ ಇರಬಹುದೆಂದು ಅನುಮಾನಿಸಿ ಮಾಳಮಾರುತಿ ಠಾಣೆಯಲ್ಲಿ ತಾಯಿ ಉಮಾ ಸೇರಿದಂತೆ 4 ಜನರ ಮೇಲೆ ದೂರು ದಾಖಲಿಸಿದ್ದಾಳೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಸಂತೋಷನ ಎದುರ ಮನೆಯ ಸಿಸಿ ಕ್ಯಾಮರಾ ಪುಟೇಜ್ ಚೆಕ್ ಮಾಡಿದ್ದಾರೆ. ಆಗ ರಾತ್ರಿ ಸಮಯದಲ್ಲಿ ಸಂತೋಷ ಮನೆಯಿಂದ ಇಬ್ಬರು ಹೋಗುವ ದೃಶ್ಯ ಸೆರೆಯಾಗಿದೆ.
ಅಕ್ಟೋಬರ್ 9ರಂದು ಕೊಲೆ ನಡೆದಿದ್ದು, ಇಂದು ಸ್ಮಶಾನದಲ್ಲಿ ಹೂತಿದ್ದ ಸಂತೋಷ ಮೃತದೇಹ ಹೊರತೆಗೆಯಲಿರುವ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂದು ಸಾಬೀತಾದರೆ ಆರೋಪಿಗಳನ್ನ ವಶಕ್ಕೆ ಪಡೆಯಲಿದ್ದಾರೆ. ಜೊತೆಗೆ ಉಮಾಳ ಫೆಸ್ಬುಕ್ ಗೆಳೆಯ ಮಂಗಳೂರು ಮೂಲದವನು ಎಂಬ ಮಾಹಿತಿ ಸಿಕ್ಕಿದ್ದು, ಅವರ ಬಂಧನಕ್ಕೂ ವಿಶೇಷ ತಂಡ ರಚಿಸಲಾಗಿದೆ.