ಬೆಳಗಾವಿ: ಮೂರಬ ಗೌಳಿ ವಾಡಾದ ದುರ್ಗಮ ಭಾಗದಲ್ಲಿ ನಿಯೋಜಿಸಲಾದ ವೇದಾಂತ ಫೌಂಡೆಶನ ವತಿಯಿಂದ ರವಿವಾರ ಅ. 27 ರಂದು ಆಧುನಿಕ ಪದ್ಧತಿಯಲ್ಲಿ ದೀಪಾವಳಿಯನ್ನ ಆಯೋಜಿಸಲಾಯಿತು.
ಗೌಳಿ ವಾಡಿ ಗ್ರಾಮಸ್ಥರಿಗೆ ಮಹಿಳಿಯರಿಗೆ ಸಾಡಿ, ಪುರುಷರಿಗೆ ಫ್ಯಾಟ್ & ಶರ್ಟ ಪಿಸ್ ಮಕ್ಕಳಿಗೆ ಸ್ಕೂಲ್ ಬ್ಯಾಗೆ ನೀಡಿ ಕುಟುಂಬದವರಿಗೆ ದೀಪಗಳು ಮತ್ತು ಮಿಠಾಯಿಯನ್ನು ಕೊಡುಗೆ ನೀಡಿ ಸಡಗರ ಸಂಭ್ರಮದಿಂದ ದೀಪಾವಳಿಯನ್ನ ಆಚರಿಸಲಾಯಿತು.
ವೇದಾಂತ ಫೌಂಡೇಶನ ಸದಸ್ಯರಿಗೆ ಊರ ಅಗಸಿಯಿ೦ದ ಸಂಭ್ರಮದಿಂದ ಆರತಿಯನ್ನ ಬೆಳಗಿ ಸ್ವಾಗತ ಮಾಡಿ ಡೋಲ ತಾಶಾ ಲೇಜಿಮ ಜೊತೆ ಹೂವಿನಿಂದ ಸ್ವಾಗತಿಸಿ, ಜಾತಾ ತೆಗೆದು ವೇದಾಂತ ಫೌಂಡೇಷನ್ದವರನ್ನು ಬರಮಾಡಿಕೊಂಡರು. ಗೌಳಿವಾಡಿ ಶಾಲಾ ಆವಾರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಜು ದೇವಿ ಕೇದನೂರ ಕರ ವಹಿಸಿದ್ದರು. ಗೌಳಿ ವಾಡಿ ಶಾಲೆಯವಿದ್ಯಾರ್ಥಿಗಳಿಂದ ಸ್ವಾಗತ ಗೀತೆ ಹಾಗೂ ಸರಸ್ವತಿ ಫೋಟು ಪೋಜೆ & ದೀಪ ಪ್ರಜ್ವವಲ ಮಾನ್ಯರಿಂದ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಸದಾಶಿವ ಖೋತ ಸಬ್ ಇನ್ಸ್ಪೆಕ್ಟರ್ ಪೊಲೀಸ್ ಆಯುಕ್ತರ ಕಚೇರಿ, ಉದ್ಯೋಗ ಪತಿ ರವೀಂದ್ರ ಹರಗೂಡೆ ಶೇಖರ ಕರಂಬಳ ಕರ ಸವಿತಾ, ಚಂದಗಡಕರ, ಜಯಶ್ರೀ ಪಾಟೀಲ, ಜಿ. ಬಿ ಪಾಟೀಲ ಅಂಬಾಜಿ ಬರಾಟೆ. ಫೌಂಡೇಶನ್ ಸತೀಶ ಪಾಟೀಲ ಉಧ್ಯಾಕ್ಷ ಎನ್. ಡಿ ಮಾಧಾರ ಇತ್ಯಾದಿ ಮಾನ್ಯನಿಯರು. ಉಪಸ್ಥಿತರಿದ್ದರು.