ಬೆಳಗಾವಿ: ನಗರದ ದೇವರಾಜ್ ಅರಸ್ ಕಾಲೋನಿಯ ಏನ್ ಏನ್ ಎಸ್ ವೃದ್ದಾಶ್ರಮದಲ್ಲಿ ಹಿರಿಯ ನಾಗರಿಕರ ಜೊತೆಗೆ ದೀಪಾವಳಿ ಹಬ್ಬ ಆಚರಣೆ ಮಾಡಲಾಯಿತು.
ಇಲ್ಲಿನ ಮಹಿಳಾ ಮತ್ತು ಪುರುಷ
ಹಿರಿಯ ನಾಗರಿಕರಿಗೆ ದೀಪಾವಳಿ ಹಬ್ಬಕ್ಕೆ ಯಾದವ ಫೌಂಡೇಶನ್ ನ ಶ್ರೀ ಸುರೇಶ ಯಾದವ ಅವರು ಹೊಸ ಬಟ್ಟೆಗಳನ್ನು ನೀಡಿ ದೀಪಾವಳಿ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿದರು.
ಈ ಕಾರ್ಯಕ್ರಮದ ಸಾನಿಧ್ಯವನ್ನ ಡಾ ಶ್ರೀ ಅಲ್ಲಮ ಪ್ರಭು ಮಹಾಸ್ವಾಮಿಜಿಗಳು
ನಾಗನೂರ್ ರುದ್ರಾಕ್ಷಿಮಠ ವಹಿಸಿಕೊಂಡು, ಮಾತನಾಡಿದ ಅವರು ವೃದ್ದಾಶ್ರಮದಲ್ಲಿ ದೀಪಾವಳಿ ಹಬ್ಬ ಆಚರಣೆ ತುಂಬಾ ವಿಶೇಷವಾದದ್ದು. ಅವಿಭಕ್ತಕುಟುಂಬದಲ್ಲಿ ಇರುವಂತೆ ಎಲ್ಲಾ ಹಿರಿಯನಾಗರಿಕರನ್ನು ನೋಡಿದಾಗ ಬಹಳ ಸಂತಸವಾಗಿದೆ. ಶ್ರೀ ಸುರೇಶ ಯಾದವ ಅವರು ಹಿರಿಯನಾಗರೀಕರಿಗೆ ಹೊಸ ಬಟ್ಟೆ ನೀಡಿರುವುದು ಸಮಾಜಕ್ಕೆ ಮಾದರಿಯಾಗಲಿ ಎಂದು ಹೇಳಿದರು.
ಈ ವೇಳೆ ಶ್ರೀ ಸಿದ್ದವೀರ ಸ್ವಾಮೀಜಿ ಕಣಬರ್ಗಿ ಮತ್ತು ಯಾದವ ಫೌಂಡೇಶನ್ ಸದ್ಯಸರು ಸುರೇಶ್ ಯಾದವ, ನಿಂಗಪ್ಪಾ ಕರೆಪ್ಪಗೊಳ, ರಾಜಶೇಖರ ಶೇಂದ್ರಿ, ನನಗೌಡ ಬಿರಾದರ, ರಮೇಶ ಮಗದುಮ, ಮಲ್ಹಾರ ದೀಕ್ಷಿತ ಮತ್ತು ಏನ್ ಏನ್ ಎಸ್ ವೃದ್ದಾಶ್ರಮದ ಸಂಯೋಜಕಾರದ ಶ್ರೀ ಎಮ್. ಎಸ್ ಚೌಗಲಾ ಉಪಸ್ಥಿತರಿದ್ದರು.