Live Stream

[ytplayer id=’22727′]

| Latest Version 8.0.1 |

Local NewsState News

ವಾಹನಗಳ ಅಪಘಾತದ ಅಡ್ಡ ಶಿವ ಬಸವ ನಗರ….!

ವಾಹನಗಳ ಅಪಘಾತದ ಅಡ್ಡ ಶಿವ ಬಸವ ನಗರ….!

 

ಬೆಳಗಾವಿ: ಇಲ್ಲಿನ ಶಿವ ಬಸವ ನಗರದ ವಿಭಾ ಹಾಸ್ಪಿಟಲ್ ಎದುರುಗಡೆ, ಸೆಕ್ಟರ್ ನಂ.2 ರಲ್ಲಿ ಅನಧಿಕೃತವಾಗಿ ವಾಹನಗಳ ಪಾರ್ಕಿಂಗ್ ಮಾಡಲಾಗುತ್ತಿದೆ. ಅದಲ್ಲದೆ ಆ ಏರಿಯಾದ ಜನರಿಗೆ, ಏರಿಯಾದಿಂದ ಹೊರಗಡೆ ಬರುವಾಗ ಶ್ರೀನಗರ ಉದ್ಯಾನವನ ಅಥವಾ ಎಸ.ಜಿ. ಬಾಳೇಕುಂದ್ರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಲ್ಲವೇ ಶ್ರೀ ಸಿದ್ಧರಾಮೇಶ್ವರ್ ಎಜುಕೇಶನ್ ಟ್ರಸ್ಟ್ ರಸ್ತೆಯಿಂದ ಬರುವ ವಾಹನಗಳ ಕುರಿತು ಎರಡೂ ಬದಿಯ ವಾಹನ ಚಾಲಕರಿಗೆ ತಿಳಿಯುವುದಿಲ್ಲ. ಹೀಗಾಗಿ ಹಾರ್ನ ಹೊಡೆದು ಎಚ್ಚರಿಕೆ ನೀಡಿದರೆ ಮಾತ್ರ ಸ್ವಲ್ಪ ಮಟ್ಟಿಗೆ ಅಪಘಾತ ತಪ್ಪಿಸಬಹುದೇ ವಿನಃ, ತಮ್ಮದೇ ಧ್ಯಾನದಲ್ಲಿ ಹೋಗುವ ಚಾಲಕರು ಅಪ್ಪಿ ತಪ್ಪಿ ಇದನ್ನ ಮರೆತರೆ ಗಂಭೀರ ಅಪಘಾತಗಳಗುವುದಂತೂ ನಿಶ್ಚಿತ.


ಅದರ ಜೊತೆಗೆ ಇಲ್ಲಿನ ಫುಟ್ಪಾತ್ ಮೇಲೆ ಅನಧೀಕೃತವಾಗಿ ವಾಹನಗಳ ಪಾರ್ಕಿಂಗ್ ಮಾಡಲಾಗುತ್ತಿದೆ. ಇದನ್ನೆಲ್ಲ ನೋಡಿದಾಗ ಇಲ್ಲಿನ ನಗರದ ಮುಖ್ಯ ಭಾಗದಲ್ಲಿಯೂ, ಪ್ರತಿಷ್ಠಿತ ಕಾಲೇಜು ಇರುವಂತಹ ಸ್ಥಳದಲ್ಲಿಯೂ ಇಂತಹ ಆಚತುರ್ಯಗಳು, ಅವ್ಯವಸ್ಥೆ, ನಗರವಾಸಿಗಳಿಗೆ ತೊಂದರೆ ಆಗುವುದನ್ನು ಕಂಡರೆ, ಇದ್ಯಾವ ರೀತಿಯ ಯೋಜನೆ ಎಂದು ತಿಳಿದು ಬರುವುದಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸ್ವಲ್ಪ್ ಇದರ ಬಗ್ಗೆ ಕಾಳಜಿ ವಹಿಸಬೇಕು ಇಲ್ಲದಿದ್ದರೆ, ಮಕ್ಕಳು ಓಡಾಡುವ ಜಾಗದಲ್ಲಿ ಅನಾಹುತಗಳು ಆಗಬಾರದು ಎಂಬುದೇ ನಮ್ಮ ಸುದ್ದಿ ವಾಹಿನಿಯ ಆಶಯ.

ಕಡೇ ಪಕ್ಷ ತಿರುವಿನಲ್ಲಿಯೂ, ರಸ್ತೆಯ ದಾಟುವಿನ ಮುಂಚೆ ರೋಡ್ ಬ್ರೇಕರ್ ಗಳನ್ನ ಅಳವಡಿಸಿದರೆ. ವಾಹನಗಳ ವೇಗವನ್ನ ಕಡಿತಗೊಳಿಸಿ ಅಪಘಾತಗಳು ಆಗದಂತೆ ಮಾಡಬಹುದು. ಹಾಗಾಗಿ ಇನ್ಯಾವಾಗ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕಾರ್ಯವರಾವೃತ್ತರಾಗುತ್ತಾರೋ ಕಾಡು ನೋಡಬೇಕಾಗಿದೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";