ಹುಕ್ಕೇರಿ: ತಾಲೂಕಿನ ಯರಗಟ್ಟಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ, ಶಾಲಾ ಶಿಕ್ಷಣ ಇಲಾಖೆಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹುಕ್ಕೇರಿ ಹಾಗೂ ಕೆ.ಪಿ.ಎಸ್ ಯರಗಟ್ಟಿ ಇವರ ಸಹಭಾಗಿತ್ವದಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ / ಕಲೋತ್ಸವ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ, ಪವನ ಕತ್ತಿಯವರು ಪ್ರತಿಭಾ ಕಾರಂಜಿಯಿಂದ ಮಕ್ಕಳ ಸಾಂಸ್ಕೃತಿಕ ಬೆಳವಣಿಗೆ ಆಗುತ್ತದೆ. ಆದ ಕಾರಣ ಸೋಲು ಗೆಲುವು ಏನೇ ಇರಲಿ ಎಲ್ಲರೂ ಅಂಜಿಕೆಯಿಲ್ಲದೆ ಭಾಗವಹಿಸಿ. ಮುಂಬರುವ ದಿನಗಳಲ್ಲಿ ನೀವು ಕಲಾವಿದರು, ನಿರೂಪಕರು ಹಾಗೆ ರಾಜಕಾರಣಿಗಳು ಸಹ ಆಗಬಹುದು ಎಂದರು.
ನಂತರ ಮಂಜುಳ ನಾಯಕ, ದಾಂಡಾಧಿಕಾರಿಗಳು ಹುಕ್ಕೇರಿಯವರು ಮಾತನಾಡಿ, ಮಕ್ಕಳ ಅಭ್ಯುದಯಕ್ಕಾಗಿ ಇಂತಹ ಕಾರ್ಯಕ್ರಮಗಳು ಸಹಾಯ ಮಾಡುತ್ತವೆ, ಹಾಗಾಗಿ ಸೋಲು-ಗೆಲುವಿಗೆ ತಲೆ ಕೆಡಿಸಿಕೊಳ್ಳದೆ ಎಲ್ಲ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ.
ಈ ವೇಳೆ, ಪವನ ಕತ್ತಿ (ಯುವ ದುರೀಣರು, ವಿ.ಎಂ.ಕತ್ತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು), ಮಂಜುಳ ನಾಯಕ (ತಾಲೂಕಾ ದಂಡಾಧಿಕಾರಿಗಳು ಹುಕ್ಕೇರಿ), ಟಿ.ಆರ್.ಮಲ್ಲಾಡದ (ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು ಹುಕ್ಕೇರಿ), ಪಿ.ಬಿ. ಪಾಟೀಲ್ (ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹುಕ್ಕೇರಿ), ಎ. ಎಸ್. ಪದ್ಮಣ್ಣವರ (ಕ್ಷೇತ್ರ ಸಮನ್ವಯ ಅಧಿಕಾರಿಗಳು, ಬಿ.ಆರ್.ಸಿ ಹುಕ್ಕೇರಿ), ಕಿರಣ ಎಂ.ಚೌಗಲಾ (ಪ್ರಾಂಶುಪಾಲರು ಕಾಲೇಜು ವಿಭಾಗ, ಕೆ.ಪಿ.ಎಸ್ ಯರಗಟ್ಟಿ), ಎ. ಆರ್. ಮಠಪತಿ (ಉಪ ಪ್ರಾಂಶುಪಾಲರು, ಪ್ರೌಢ ವಿಭಾಗ, ಕೆ.ಪಿ.ಎಸ್ ಯರಗಟ್ಟಿ), ಎಸ್.ಎ ಸರಿಕರ (ಮುಖ್ಯೋಪಾಧ್ಯಾಯರು, ಪ್ರಾಥಮಿಕ ವಿಭಾಗ, ಕೆ.ಪಿ.ಎಸ್ ಯರಗಟ್ಟಿ), ಸವಿತಾ ಹಲಕಿ (ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಕೇಂದ್ರ ಹುಕ್ಕೇರಿ) ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಮಲ್ಲಿಕಾರ್ಜುನ ನಂದಗಾವಿ, ಹುಸೇನ್ ಮುಲ್ಲಾ, ಪ್ರಕಾಶ ಸಂಬಾಳ, ದುರದುಂಡಿಗೌಡ ಪಾಟೀಲ, ದುಂಡೇಶ ಸನದಿ, ಇತರರು, ಗುರು ಹಿರಿಯರು, ಶಿಕ್ಷಣ ಪ್ರೇಮಿಗಳು, ಹುಕ್ಕೇರಿ ತಾಲೂಕಾ ವಿವಿಧ ಶಾಲಾ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.