ಬೆಳಗಾವಿ: ನಗರದ ಯುವ ಕರ್ನಾಟಕ ಅಭಿವೃದ್ಧಿ ಸಂಘ ಶಾಹು ನಗರದವರು ರಾಜ್ಯೋತ್ಸವ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಬಸು ಬೇವಿನಗಿಡದ ಅವರು ಕನ್ನಡ ಅನ್ನುವ ಪದವೇ ಚಂದ, ಅದರ ಬಳಕೆಯಿಂದ ನಾವು ಕನ್ನಡವನ್ನ ಉಳಿಸಬಹುದು. ನಮ್ಮ ಭಾಷೆಯ ಜನಪದ ಬಹಳ ಶ್ರೀಮಂತ ಜನಪದ ಅದರ ಬಳಕೆಯನ್ನ ಮಾಡುವ ನಾವುಗಳು ಶ್ರೀಮಂತರು ಎಂದು ಹೇಳಿದರು.
ಈ ಸಂದರ್ಭದಲ್ಲಿ, ಡಾ.ಬಸು ಬೇವಿನಗಿಡದ (ವಿಶ್ರಾಂತ ಕಾರ್ಯಕ್ರಮ ನಿರ್ವಾಹಕರು, ಆಕಾಶವಾಣಿ, ಧಾರವಾಡ), ಶರಣಬಸಪ್ಪ ಚೋಳಿನ (ಕಾರ್ಯಕ್ರಮ ನಿರ್ವಾಹಕರು, ಆಕಾಶವಾಣಿ ಧಾರವಾಡ), ರೇಷ್ಮಾ ಪಾಟೀಲ್ (ನಗರ ಸೇವಕಿ ವರ್ಡ್ ನಂ.33 ಮಾಜಿ ಉಪ ಮಹಾಪೌರರು ಮಹಾನಗರ ಪಾಲಿಕೆ ಬೆಳಗಾವಿ), ಶ್ರೇಯಸ್ ನಾಕಾಡಿ (ನಗರ ಸೇವಕರು ವಾರ್ಡ್ ನಂ.34), ಸಂತೂರ ಶೆಟ್ಟಿ, ಈಶ್ವರ ಗಣಿಗೇರ, ಶಾಹು ನಗರ ನಿವಾಸಿಗಳು ಗುರು ಹಿರಿಯರು, ಮಕ್ಕಳು ಹಾಗೂ ಯುವಕರು ಉಪಸ್ಥಿತರಿದ್ದರು.