Live Stream

[ytplayer id=’22727′]

| Latest Version 8.0.1 |

State News

ಕೂಲಿ ಮಾಡುವವರ ಮಗಳು ಜಯಶ್ರೀ ಮಠಪತಿ : ಈಗ ಪಿಎಸ್‌ಐ

ಕೂಲಿ ಮಾಡುವವರ ಮಗಳು ಜಯಶ್ರೀ ಮಠಪತಿ : ಈಗ ಪಿಎಸ್‌ಐOplus_131072

ರಬಕವಿ/ಬನಹಟ್ಟಿ, ೨೮-ಅಪ್ಪ, ಅಮ್ಮ ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದಾರೆ. ಇವರ ಮಗಳು ಜಯಶ್ರೀ ಈಗ ಪಿಎಸ್‌ಐ ಆಯ್ಕೆಯಾಗಿದ್ದಾಳೆ. ತಾಲೂಕಿನ ಹೊಸೂರಿನ ಜಯಶ್ರೀ ಸಿದ್ರಾಮಯ್ಯ ಮಠಪತಿ ಎಂಬ ಕಡು ಬಡತನದ ಯುವತಿ ಪಿಎಸ್‌ಐ ಪರೀಕ್ಷೆಯಲ್ಲಿ ತೇರ್ಗ ಡೆಗೊಂಡಿದ್ದಾಳೆ.

ಬಡತನದ ಯುವತಿ ಪರೀಕ್ಷೆಯಲ್ಲಿ ೫೪೫ ಪಿಎಸ್‌ಐ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯ ಅಭ್ಯರ್ಥಿ ಗಳ ತಾತ್ಕಾಲಿಕ ಪಟ್ಟಿಯಲ್ಲಿ ಜಯಶ್ರೀ ಹೆಸರು ಇರುವದಕ್ಕೆ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.

ಮಗಳನ್ನು ಯಾವುದಾದರೂ ಒಂದು ಹಂತಕ್ಕೆ ತರಲೇಬೇಕೆಂದು ತಂದೆ-ತಾಯಿ ದಿನಗೂಲಿ ಮಾಡಿ ಓದಿಸಿದ್ದರು. ಅವರ ಶ್ರಮಕ್ಕೆಮಗಳು ಇಂದು ಪಿಎಸ್‌ಐ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅವರು ಕಂಡಿದ್ದ ಕನಸನ್ನು ನನಸು ಮಾಡಿದ್ದಾಳೆ. ಜಯಶ್ರೀ ಪಿಎಸ್‌ಐ ಪರೀ ಕ್ಷೆಯಲ್ಲಿ ತೇರ್ಗಡೆಗೊಂಡು ನಮ್ಮ ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ. ೧ ರಿಂದ ೫ ನೇ ತರಗತಿ ಇಲ್ಲಿನ ಶಾಂತಿ ನಗರದ ಸರ್ಕಾರಿ ಶಾಲೆ ನಂತರ ಪ್ರೌಢಶಾಲೆಯನ್ನು ಹೊಸೂರು ಸರ್ಕಾರಿ ಶಾಲೆಯಲ್ಲಿ ಮುಗಿಸಿ, ರಾಮಪೂರದ ಪೂರ್ಣಪ್ರಜ್ಞ ಪಪೂ ಕಾಲೇಜು, ಪದಿವಯನ್ನು ಂಡಿಯ ಬಿಎಲ್‌ಡಿಇ ನಂತರ ಬಿಎಡ್‌ನ್ನು ಬನಹಟ್ಟಿಯ ಕಾಲೇಜಿನಲ್ಲಿ ಮುಗಿಸಿರುವ ಜಯಶ್ರೀ ವಿಜಯಪುರದ ಖಾಸಗಿ ಗ್ರಂಥಾಲಯದಲ್ಲಿ ಓದಿನ ಅಭ್ಯಾಸ ಮುಂದುವರೆಸಿದ್ದಳು.

ಗ್ರಂಥಾಲಯ ಆಸರೆ:ಖಾಸಗಿ ಗ್ರಂಥಾಲಯಗಳಲ್ಲಿ ದಿನಂಪ್ರತಿ ಬೆಳಿಗ್ಗೆಯಿಂದ ಸಂಜೆವರೆಗೆ ಓದಿನೊಂದಿಗೆ ಗುಂಪು ಚರ್ಚೆ ಆಸರೆಯಾಗುವ ಮೂಲಕ, ಒಂದೇ ಸೂರಿನಲ್ಲಿ ಜ್ಞಾನ ಭಂಡಾರದ ಎಲ್ಲ ವ್ಯವಸ್ಥೆ ಸಹಕಾರಿಯಾಯಿತೆಂದು ಜಯಶ್ರೀ ತಿಳಿಸಿದರು.

ಬಿಎಸ್.ಸಿ. ಪದವಿ ನಂತರ ಬಿಎಡ್ ಮುಗಿಸಿಕೊಂಡು ಶಿಕ್ಷಕಳಾಗುವ ಆಸೆ ಹೊತ್ತಿದ್ದ ಜಯಶ್ರೀ ಅತ್ಯುನ್ನತ ಪರೀಕ್ಷೆಗಳನ್ನು ಎದುರಿ ಸುವ ಮೂಲಕ ಪಿಎಸ್‌ಐ ಹುದ್ದೆಗೆ ನೇಮಕಗೊಂಡಿರುವದು ಸಂತಸವೆನಿಸುತ್ತದೆ ಎಂದು ಜಯಶ್ರೀ ನಮ್ಮೂರ ಧ್ವನಿ ನ್ಯೂಸ್ ಪೊರಟಲ್ ಗೆ ತಿಳಿಸಿದ್ದಾಳೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";