ಬೆಳಗಾವಿ: ಜಿಲ್ಲೆಯ ಬೈಲವಾಡದಲ್ಲಿ ಗಣಿತ ವಿಷಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಕಾಶ್ ಸಿ. ಮಾಸ್ತಿಹೊಳಿ ಅವರು ನ್ಯಾಷನಲ್ ಕಾನ್ಫರೆನ್ಸ್ ಆನ್ ಟ್ರಾನ್ಸಾಕ್ಷನ್ ಅನಾಲಿಸಿಸ್ ಪುಣೆಯ 51 ನೇ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಉಪನ್ಯಾಸಕ್ಕೆ ಆಯ್ಕೆಯಾಗಿದ್ದಾರೆ.
ಇದೆ ತಿಂಗಳ ನ.22 ರಿಂದ 24ರ ವರೆಗೂ ಪೂಣಾ, ಮಹಾರಾಷ್ಟ್ರದಲ್ಲಿ ಬಾಲಾಜಿ ಯುನಿವರ್ಸಿಟಿಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಆನ್ ಟ್ರಾನ್ಸಾಕ್ಷನ್ ಅನಾಲಿಸಿಸ್ 51 ನೇ ರಾಷ್ಟ್ರ ಮಟ್ಟದ ಸಮಾವೇಶ ನಡೆಯುತ್ತಿದೆ. ಪ್ರತಿವರ್ಷ ಜರಗುವ ಈ ರಾಷ್ಟ್ರೀಯ ಸಮಾವೇಶದಲ್ಲಿ, ರಾಷ್ಟ್ರಾದ್ಯಂತ ಇರುವ ಮನೋ ವಿಜ್ಞಾನಿಗಳ ತಂಡ ಸೇರಿ, ತಮ್ಮ ಕ್ಷೇತ್ರದಲ್ಲಿ ಯಾವೆಲ್ಲ ವಿದ್ಯಮಾನಗಳು ಜರಗುತ್ತಿವೆ, ಹೊಸ ಆವಿಷ್ಕಾರಗಳ ಕುರಿತು ಚರ್ಚೆ ಮಾಡಲಾಗುತ್ತದೆ. ಈ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ನಮ್ಮ ಜಿಲ್ಲೆಯ ಶಿಕ್ಷಕರಾದ ಶ್ರೀ ಪ್ರಕಾಶ್ ಸಿ. ಮಾಸ್ತಿಹೊಳಿ ಅವರು “ತರಗತಿ ನಿರುತ್ಸಾಹಗಳು ಹಾಗೂ ಮನೋ ವಿಜ್ಞಾನಿಕ ವಿಶ್ಲೇಷಣೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಲು ಆಯ್ಕೆ ಆಗಿದ್ದಾರೆ.
ಶ್ರೀಯುತರ ಕುರಿತ ಕಿರು ಪರಿಚಯ ನೀಡುವುದಾದರೆ ಇವರು, ಮೂಲತ ಎಂ. ಕೆ. ಹುಬ್ಬಳ್ಳಿಯ ನಿವಾಸಿಯವರಾಗಿದ್ದು, ಸದ್ಯ ಬೈಲವಾಡದ ಸರಕಾರಿ ಶಾಲೆಯಲ್ಲಿ ಗಣಿತ ವಿಷಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸುಮಾರು 15 ವರ್ಷಗಳಿಂದ ಟಿ. ಎ. ಸೈಕಾಲಜಿಯಲ್ಲಿ ಅಧ್ಯಯನವನ್ನ ಮಾಡುತ್ತಿದ್ದು, ಇದರಿಂದ ಶಾಲಾ ಮಕ್ಕಳು ಹಾಗೂ ಶಿಕ್ಷಕ ಸಮುದಾಯದ ಕ್ಲೇಶಗಳನ್ನ ನಿವಾರಣೆ ಮಾಡಿ ಸುರಳಿತವಾದ ಮಕ್ಕಳ ಕಲಿಕೆಗೆ ಸಹಾಯವಾಗಲಿ ಎಂದು ಇದನ್ನು ಅಧ್ಯಯನ ಮಾಡುತ್ತಿರುವುದಾಗಿ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ಜೊತೆಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ನಮ್ಮ ನಾಡಿಗೆ ಕೀರ್ತಿ ತಂದ ಶ್ರೀಯುತರಿಗೆ ಸಮಸ್ತ ನಾಡಿನ ಜನತೆ ಹಾಗೂ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು. 💐💐🙏🏻