ಬೆಂಗಳೂರು: ನಗರದಲ್ಲಿ ಓದುವುದನ್ನು ಬಿಟ್ಟು ಸದಾ ಮೊಬೈಲ್ ನಲ್ಲಿ ತಲ್ಲೀನನಾಗಿರುತ್ತಿದ್ದ ಮಗನನ್ನು ತಂದೆ ಸಿಟ್ಟಿನಿನಲ್ಲಿ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಕೊಂದ ಘಟನೆ ನಡೆದಿದೆ.
ತೇಜಸ್ (14) ಮೃತ ಮಗ. ರವಿಕುಮಾರ್ ಮಗನನ್ನೆ ಕೊಂದ ತಂದೆ. ಯಾವಾಗಲೂ ಮೊಬೈಲ್ ನೋಡುತ್ತಿದ್ದ ತೇಜಸ್, ತನ್ನ ಮೊಬೈಲ್ ಹಾಳಾಗಿದೆ ರಿಪೇರಿ ಮಾಡಿಕೊಡುವಂತೆ ತಂದೆಗೆ ಕೇಳಿದ್ದ. ಈ ವಿಷಯದ ಕುರಿತು ತಂದೆ-ಮಗನ ನಡುವೆ ಗಲಾಟೆಯೆ ನಡೆದಿದೆ. ಕಳೆದ 20 ದಿನಗಳಿಂದ ಮಗ ಶಾಲೆಗೆ ಹೋಗದೆ ಪುಂಡರ ಜೊತೆ ಶಾಲೆ ಬಳಿ ತಿರುಗಾಡುತ್ತಿದ್ದನಂತೆ.
ಈ ಎಲ್ಲದರಿಂದ ಬೇಸತ್ತ ತಂದೆ ಮಗನಿಗೆ ಬುದ್ದಿ ಹೇಳಿದ್ದಾರೆ. ಆದರೂ ಮಗ ಕೇಳದಿದ್ದಾಗ ಕೋಪಗೊಂಡು ಕ್ರಿಕೆಟ್ ಬ್ಯಾಟ್ ನಿಂದ ಹೊಡೆದಿದ್ದಾರೆ. ತಲೆ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ತೇಜಸ್ ಸಾವನ್ನಪ್ಪಿದ್ದಾನೆ.
ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ತಂದೆ ರವಿಕುಮಾರನನ್ನು ವಶಕ್ಕೆ ಪಡೆದಿದ್ದಾರೆ.